ಹನುಮಾನ ದೇವಸ್ಥಾನ ಜಿರ್ಣೋದ್ಧಾರಕ್ಕೆ ಭೂಮಿಪೂಜೆ
ವಿಜಯಪುರ,ಮಾ.17: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ರೂ.5 ಲಕ್ಷ ಅನುದಾನದಲ್ಲಿ ವಾರ್ಡ ನಂ.11 ರಲ್ಲಿ ಬರುವ ಶ್ರೀ ಹನುಮಾನ ದೇವಸ್ಥಾನ ಜಿರ್ಣೋದ್ಧಾರ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಲಾಯಿತು.
ಮಹಾನಗರ ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟ, ಮುಖಂಡರಾದ ಅಶೋಕ ಬೆಲ್ಲದ, ಶಂಕರ ಚಲವಾದಿ, ರಮೇಶ ಪಡಸಲಗಿ, ಭೀಮಸಿ ತಳಕೇರಿ, ಮಹೇಶ ವಾಂಡಕರ, ಆನಂದ ಚೋರಗಿ, ರಾಜು ರಣದೇವಿ, ಅಶೋಕ ಹಂಚಿನಾಳ, ಪ್ರದೀಪ ಚಲವಾದಿ, ಸದಾಶಿವ, ದತ್ತು, ಶ್ರೀಧರ ದೇವರ ಮತ್ತಿತರರು ಇದ್ದರು.