ಬ್ರಷ್ಟಾಚಾರ ನಿರ್ಮೂಲನೆ ವೇದಿಕೆ ಪದಾಧಿಕಾರಿಗಳ ನೇಮಕ
ತಾಳಿಕೋಟೆ:ಮಾ.17: ನವ ಕರ್ನಾಟಕ ರಾಜ್ಯ ಬ್ರಷ್ಟಾಚಾರ ನಿರ್ಮೂಲನೆ ವೇದಿಕೆಯ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳ ಆಯ್ಕೆ ಸಭೆಯು ಶನಿವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತ್ತಲ್ಲದೇ ಇದೇ ಸಮಯದಲ್ಲಿ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ವೇದಿಕೆಯ ರಾಜ್ಯಾಧ್ಯಕ್ಷ ಪ್ರಲ್ಹಾದ ದೇಸಾಯಿ ಅವರು ವಿತರಿಸಿದರು.
ಈ ಸಮಯದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಪ್ರಲ್ಹಾದ ದೇಸಾಯಿ ಅವರು ದೇಶದಲ್ಲಿ ಕಾನೂನು ಸಾಕಷ್ಟು ಬಲಿಷ್ಠವಾಗಿದ್ದರೂ ಕೂಡಾ ಅಧಿಕಾರಿಗಳು ಮತ್ತು ರಾಜಕಾರಣಿಗಳು ಒಳಗೊಂಡಂತೆ ಅನೇಕರು ಜನರ ಕಣ್ಣಿಗೆ ಕಾಣದ ಹಾಗೆ ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಬ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವದು ನಾವು ನಿವು ಕೆಲವೆಡೆ ಕಾಣುತ್ತಿದ್ದೇವೆ ಇಂತವುಗಳಿಗೆ ಕಡಿವಾಣ ಹಾಕುವ ದೃಷ್ಠಿಯಿಂದ ಈ ವೇದಿಕೆಯನ್ನು ಸ್ಥಾಪಿಸಲಾಗಿದೆ ಇದರ ಅಡಿಯಲ್ಲಿ ಜಿಲ್ಲೆ ಮತ್ತು ತಾಲೂಕಾ ಕೇಂದ್ರಗಳಲ್ಲಿ ಕಡಿವಾಣಕ್ಕೆ ತರಬೇಕೆಂಬ ದೃಷ್ಠಿಯಿಂದ ಈ ವೇದಿಕೆಯನ್ನು ವಿಸ್ತರಿಸುತ್ತಾ ಕಾರ್ಯಕರ್ತರ ಪಡೆಯನ್ನು ನಿರ್ಮಿಸಲಾಗುತ್ತಿದೆ ನೂತನವಾಗಿ ಈ ವೇದಿಕೆಗೆ ನೇಮಕಗೊಂಡ ಎಲ್ಲ ಪದಾಧಿಕಾರಿಗಳು ವೇದಿಕೆಯನ್ನು ವಿಸ್ತರಿಸುವದರ ಜೊತೆಗೆ ವೇದಿಕೆಯ ಉದ್ದೇಶದಂತೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದರು.
ಇದೇ ಸಮಯದಲ್ಲಿ ನವ ಕರ್ನಾಟಕ ರಾಜ್ಯ ಬ್ರಷ್ಟಾಚಾರ ನಿಮೂಲನೆ ವೇದಿಕೆಯ ವಿಜಯಪುರ ಜಿಲ್ಲಾ ಅಧ್ಯಕ್ಷರನ್ನಾಗಿ ಪ್ರಭುಗೌಡ ಬಿ ಪಾಟೀಲ, ಉಪಾಧ್ಯಕ್ಷರನ್ನಾಗಿ ಕಾಶಿನಾಥ ದೇಸಾಯಿ, ಜಾವೀದಪಟೇಲ ಪಾಟೀಲ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ಶ್ರೀಮತಿ ಅಂಬಿಕಾ ಎಂ ಪಾಟೀಲ, ಉಪಾಧ್ಯಕ್ಷರನ್ನಾಗಿ ಸಕೀನಾಬಿ ದೀಲವಾರ, ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷರನ್ನಾಗಿ ಮಹಿಬೂಬ ಕುಳಗೇರಿ, ಮಹಿಳಾ ಘಟಕದ ತಾಲೂಕಾ ಅಧ್ಯಕ್ಷರನ್ನಾಗಿ ಶ್ರೀಮತಿ ತ್ರಿವೇಣಿ ಸಂದೀಪ ಘೋರ್ಪಡೆ, ತಾಳಿಕೋಟೆ ತಾಲೂಕಾ ಅಧ್ಯಕ್ಷರನ್ನಾಗಿ ಮಹ್ಮದಸಾಬ ಮಾಸುಮಸಾಬ ಕೇಂಭಾವಿ, ಕಾರ್ಯಾಧ್ಯಕ್ಷರನ್ನಾಗಿ ನಾನಾಗೌಡ ಪಾಟೀಲ, ದೇವರ ಹಿಪ್ಪರಗಿ ತಾಲೂಕಾ ಅಧ್ಯಕ್ಷರನ್ನಾಗಿ ರಮೇಶ ಜಾಲಹಳ್ಳಿ, ಉಪಾಧ್ಯಕ್ಷರನ್ನಾಗಿ ರೇವಣಸಿದ್ದಪ್ಪ ಮಿಣಜಗಿ, ಅವರನ್ನು ನೇಮಕ ಮಾಡಲಾಯಿತು.
ರಾಜ್ಯ ಘಟಕದ ಸಲಹಾ ಸಮಿತಿ ಸದಸ್ಯರನ್ನಾಗಿ ಸಿದ್ದರಾಮಪ್ಪಗೌಡ ಸನ್ನತಿ, ಶ್ರೀಮತಿ ಸರಸ್ವತಿ ಫೀರಾಪೂರ, ಅವರನ್ನು ನೇಮಕ ಮಾಡಲಾಯಿತು.
ಈ ಸಮಯದಲ್ಲಿ ವೇದಿಕೆಯ ರಾಜ್ಯ ಖಜಾಂಚಿ ದುಂಡಪ್ಪಗೌಡ ಅಂಕಲಗಿ ಮೊದಲಾದವರು ಉಪಸ್ಥಿತರಿದ್ದರು.