ಮಹಾನಗರ ಪಾಲಿಕೆ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಆಗ್ರಹ
ವಿಜಯಪುರ,ಮಾ.17: ವಿಜಯಪುರ ಮಹಾನಗರ ಪಾಲಿಕೆ ಆವರಣದಲ್ಲಿ ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ (ಮೂರ್ತಿ) ಸ್ಥಾಪನೆ ಮಾಡುವಂತೆ ಆಗ್ರಹಿಸಿ ವಿಜಯಪುರಜ ಭಾರತೀಯ ದ್ರಾವಿಡ ಸೇನಾ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ದ್ರಾವಿಡ ಸೇನಾದ ಗೌರವಾಧ್ಯಕ್ಷÀ ರಮೇಶ ಕವಲಗಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡಿ, ಸಂವಿಧಾನದಡಿಯಲ್ಲಿ ಪಾಲಿಕೆಯ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು, ಅದೇ ತೆರನಾಗಿ ಅವರ ಗೌರವಾರ್ಥಕವಾಗಿ ಪಾಲಿಕೆ ಆವರಣದಲ್ಲಿ ಅಂಬೇಡ್ಕರವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಆವರಣದಲ್ಲಿ ಪುತ್ಥಳಿ ಪ್ರತಿಷ್ಠಾನೆ ಮಾಡುವುದರಿಂದ ಭಾರತದ ಸಂವಿಧಾನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಪ್ರಶಾಂತ ಹಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗಮ್ಮ ಬ್ಯಾಕೋಡ, ವಿಜಯಪುರ ಜಿಲ್ಲಾಧ್ಯಕ್ಷ ಸೋಮು ಹಟ್ಟಿ, ಜಿಲ್ಲಾ ಕಾರ್ಯದರ್ಶಿ ಸಚೀನ ಬಜಂತ್ರಿ, ಮಾರುತಿ ಬೂದಿಹಾಳ, ಸಂತೋಷ ಠಕ್ಕೆ, ಶ್ರೀಧರ ಹಾಳಿಹಾಳ, ಪರಶುರಾಮ ಕೋಲಕಾರ, ಶ್ರೀಧರ ಬಬಲೇಶ್ವರ, ಎನ್. ಬಜರಂಗಿ, ಕಲ್ಮೇಶ ಶಾಪೇಟಿ, ಮಲ್ಲು ಜಾಲಗೇರಿ ಇತರರು ಉಪಸ್ಥಿತರಿದ್ದರು.