ಜಿಲ್ಲಾ ಪ್ರಶಸ್ತಿ ಪಡೆದ ಭರತನಾಟ್ಯ ವಿದ್ಯಾರ್ಥಿಗಳಿಗೆ ಸನ್ಮಾನ
ತಾಳಿಕೋಟೆ:ಮಾ.17: ಶ್ರೀದೆವಿ ಮಾತೃ ಮಂಡಳಿ, ಹಿಂದೊ ಮಹಾ ಗಣಪತಿ ಮಹಾ ಮಂಡಳಿ ಇವರ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭರತನಾಟ್ಯದಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ಶ್ರೀ ವಿರಕ್ತೇಶ್ವರ ಭರತನಾಟ್ಯ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿನಿ ಕು. ಶ್ರಾವಣಿ ಮಡಿವಾಳರ ಮತ್ತು ಕು.ಮಾನಸಾ ಹೂಗಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕಾರ್ಯಕ್ರಮದ ಆಯೋಜಕರಾದ ಶ್ರೀಮತಿ ಸುವರ್ಣಾ ಬಿರಾದಾರ, ಶ್ರೀ ವಿರಕ್ತೇಶ್ವರ ಭರತನಾಟ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನೋದಕುಮಾರ ಚಿಕ್ಕಮಠ, ಶಿಲ್ಪಾ ಕುದರಗುಂಡ, ಕಾಶಿಬಾಯಿ ರಾಂಪೂರ, ಸಂಗಮ್ಮ ದೇವರಳ್ಳಿ, ಮೀನಾಕ್ಷೀ ಹಜೇರಿ, ಮೊದಲಾದವರು ಇದ್ದರು.