ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ:ಶಾಸಕ ರಾಜುಗೌಡ
ತಾಳಿಕೋಟೆ:ಮಾ.17: ದೇವರ ಹಿಪ್ಪರಗಿ ಮತಕ್ಷೇತ್ರದ ಪ್ರತಿ ಗ್ರಾಮಗಳಿಗೂ ಶುದ್ದ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದಿಂದ ಜಲ ಜೀವನ ಮಶಿನ್ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಅವರು ಹೇಳಿದರು.
ಶನಿವಾರರಂದು ತಾಲೂಕಿನ ಬ.ಸಾಲವಾಡಗಿ ಮತ್ತು ಬಿ.ಬಿ.ಇಂಗಳಗಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ 2023-24ನೇ ಸಾಲಿನ ಜಲಜೀವನ ಮಶಿನ್ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದ ಅವರು ಬೀಕರ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಬರುವದು ಸಹಜವಾಗಿದೆ ಇದನ್ನು ಮೆಟ್ಟಿ ನಿಲ್ಲಲು ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಈಗಾಗಲೇ ಕ್ಷೇತ್ರದ ಕೇರೆಗಳಿಗೆ ನೀರು ಹರಿಸಲಾಗಿದ್ದು ಇದರಿಂದ ಅಂತರಜಲ ಮಟ್ಟ ಹೆಚ್ಚಳವಾಗುವದರ ಜೊತೆಗೆ ಕೊಳವೇ ಭಾವಿಗಳು ಸಹ ರೀಚಾರ್ಜ ಆಗಲಿವೆ ಎಲ್ಲೆಲ್ಲಿ ಬೋರವ್ಹೇಲ್‍ಗಳು ದುರಸ್ಥಿಗೆ ಬಂದಿವೆ ಅವುಗಳನ್ನು ಕೂಡಲೇ ದುರಸ್ಥಿಗೊಳಿಸಿ ನೀರಿನ ಸಮಸ್ಯೆ ಬಾರದಂತೆ ಏಚ್ಚರ ವಹಿಸಲು ಅಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದೇನೆ ಮತ್ತು ಕೆಲವು ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕಗಳು ದುರಸ್ಥಿಗೆ ಬಂದಿದ್ದು ಅವಗಳನ್ನೂ ಸಹ ದುರಸ್ಥಿಗೊಳಿಸಿ ಶುದ್ದ ಕುಡಿಯುವ ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಜಲ ಜೀವನ ಮಶಿನ್ ಯೋಜನೆಯಡಿ ಶೇ.90 ರಷ್ಟು ಗ್ರಾಮಗಳಲ್ಲಿ ಕಾಮಗಾರಿಗಳು ಮುಕ್ತಾಯ ಹಂತಕ್ಕೆ ಬಂದಿದ್ದು ಅವುಗಳಿಗೆ ಕೇರೆ ಮತ್ತು ಇನ್ನೀತರ ನೀರಿನ ಮೂಲಗಳಿಗೆ ಕುಡಿಯುವ ನೀರು ಮನೆ ಮನೆಗೆ ಒದಗಿಸುವಂತಹ ಕಾರ್ಯ ನಡೆಯಲಿದೆ ಕೆಲವು ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿ ಹಂತದಲ್ಲಿದ್ದು ಅವುಗಳನ್ನು ತ್ವರಿತಗತಿಯಲ್ಲಿ ಮುಗಿಸಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಏಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆಂದ ಅವರು ಉಪಯೋಗಕ್ಕೆ ಬಾರದ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಯಾವುದೇ ಶಾಸಕರಿಗೂ ಅನುದಾನವು ತ್ವರಿತಗತಿಯಲ್ಲಿ ಸಿಗುತ್ತಿಲ್ಲಾ ಹೀಗಿದ್ದಾಗಲೂ ಕೂಡಾ ನನ್ನ ಕ್ಷೇತ್ರದ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಮತ್ತು ಕಾರ್ಯಕರ್ತರಿಗೆ ತೊಂದರೆ ಯಾಗದ ರೀತಿಯಲ್ಲಿ ಅನುದಾನಗಳನ್ನು ಯೋಜನೆಯ ರೂಪದಲ್ಲಿ ತರುತ್ತಿದ್ದೇನೆ ಯಾವ ಕಾರ್ಯಕರ್ತರು ನಿರಾಸೆರಾಗಬೇಡಿ ಕಾರ್ಯಕರ್ತರ ಬಯಸುವ ಅಭಿವೃದ್ದಿ ಪೂರಕ ಬೇಡಿಕೆಗೆ ಸ್ಪಂದಿಸುವಂತಹ ಕೆಲಸ ಮಾಡುತ್ತೇನೆ ಸದ್ಯ ಬರಗಾಲ ಆವರಿಸಿರುವದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸಲು ಹೆಚ್ಚಿನ ಕೆಲಸ ಮಾಡಬೇಕಿದೆ ಬರುವ ದಿನಗಳಲ್ಲಿ ಆದಷ್ಟು ಬೇಗನೇ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಎಲ್ಲ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವದೆಂದರು.
ಇದೇ ಸಮಯದಲ್ಲಿ ಬ.ಸಾಲವಾಡಗಿ ಗ್ರಾಮಸ್ಥರ ವತಿಯಿಂದ ಮತ್ತು ಬಿ.ಬಿ.ಇಂಗಳಗಿ ಗ್ರಾಮಸ್ಥರ ವತಿಯಿಂದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಚಬನೂರ ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡ ನಿರ್ಮಾಣ ಮತ್ತು ವಾಲ್ಮೀಕಿ ಸಮಾಜ ಬಾಂದವರ ಸಮೂದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರು ಭೂಮಿ ಪೂಜೆ ನೇರವೇರಿಸಿ ಚಾಲನೆ ನೀಡಿದರು.
ಈ ಸಮಯದಲ್ಲಿ ಬ.ಸಾಲವಾಡಗಿ ಗ್ರಾಮದಲ್ಲಿ ಮುಖಂಡರುಗಳಾದ ಮಡುಸಾಹುಕಾರ ಬಿರಾದಾರ, ರಾಜುಗೌಡ ಗುಂಡಕನಾಳ, ರಾಜುಗೌಡ ಕೊಳೂರ, ಬಸನಗೌಡ ಹಳ್ಳಿಪಾಟೀಲ, ಶಾಂತಪ್ಪ ಬರದೇನಾಳ, ಸಂಗಣ್ಣ ಯಮ್ಮಡಗಿ, ಮಲ್ಲನಗೌಡ ಯಾಳಗಿ, ಮಲ್ಲನಗೌಡ ಕಾರಲಕುಂಟಿ, ವೀರೇಶ ಚಿಂಚೋಳ್ಳಿ, ಪಿಡಿಓ ಶ್ರೀಮತಿ ಪ್ರಜಕ್ತಾ ತಟಗಾರ, ಬಿ.ಬಿ.ಇಂಗಳಗಿ ಗ್ರಾಮದಲ್ಲಿ ಶ್ರೀ ಗುರುಸಿದ್ದಯ್ಯ ಹಿರೇಮಠ, ಗುತ್ತಿಗೆದಾರರಾದ ತಿಪ್ಪಣ್ಣ ಹಿರೇಕುರಬರ(ಚಬನೂರ), ಪ್ರಕಾಶ ಪಡಶೆಟ್ಟಿ, ಸಿದ್ದು ಹಿರೇಕುರುಬರ, ತಿಪ್ಪಣ್ಣ ಗರಸಂಗಿ, ಶರಣು ಕಕ್ಕೇರಿ, ಮುಖಂಡರುಗಳಾದ ಅಬ್ಬಾಸಲಿ ಹಾವೇರಿ, ಶಾಶುದ್ದೀನ ಬಾಗಲಕೋಟ, ನಡಗೇರಿ ಚೌದ್ರಿ, ನಿಂಗಪ್ಪ ಕರ್ನಾಳ, ದತ್ತುಗೌಡ ಬಿರಾದಾರ, ಅಬ್ಬಾಸಲಿ ಆಹೇರಿ, ಚೆನ್ನಪ್ಪ ಸಜ್ಜನ, ಮಲ್ಲಪ್ಪ ಸಜ್ಜನ, ಶರಣಪ್ಪ ಅಂಗಡಿ, ಮನೋಹರ ಬಡಿಗೇರ, ಭೀಮಣ್ಣ ಯದಲಭಾವಿ, ಲೋಕೇಶ ನಾಯ್ಕೋಡಿ, ಶರಣಗೌಡ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.