“ಬಳ್ಳಾರಿ-ಸಿರಿಗೇರಿ ಮಾರ್ಗದಲ್ಲಿ 02 ಹೆಚ್ಚುವರಿ ಬಸ್ಸುಗಳ ಸಂಚಾರ-ಸಂತಸ”
ಸಂಜೆವಾಣಿ ವಾರ್ತೆ
ಸಿರಿಗೇರಿ.ಮಾ.17. ಸಿರಿಗೇರಿ ಗ್ರಾಮಕ್ಕೆ ಬಳ್ಳಾರಿಯಿಂದ 02 ಹೆಚ್ಚುವರಿ ಬಸ್ಸುಗಳನ್ನು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬಿಡಲಾಗಿದೆ. ಇಂದು ಮಾರ್ಗ ಆರಂಭಿಸಿದ ಹೆಚ್ಚುವರಿ ಬಸ್ಸು ಬೆಳಿಗ್ಗೆ 7-30 ರಿಂದ ಸಿರಿಗೇರಿಯಿಂದ ಹೊರಟಿತು. ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಸಂಘಟನೆಗಳ ಮುಖಂಡರು ಸೇರಿ ಶ್ರೀ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಪೂಜೆ ನಡೆಸಿ ಬಸ್ಸಿಗೆ ಚಾಲನೆ ನೀಡಿದರು. ಈ ಕೆಲವು ದಿನಗಳ ಹಿಂದೆ ಗ್ರಾಮಕ್ಕೆ ಇರುವ ಬಸ್ಸುಗಳ ಸಮಸ್ಯೆಯನ್ನು ಪರಿಹರಿಸಿ ವಿದ್ಯಾರ್ಥಿಗಳ, ಪ್ರಯಾಣಿಕರ ಸಮಸ್ಯೆಯನ್ನು ನೀಗಬೇಕೆಂದು ಒತ್ತಾಯಿಸಿ ಗ್ರಾಮದಿಂದ ಮುಖಂಡರ, ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಸಾರಿಗೆ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಸಿರಿಗೇರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್ಸುಗಳನ್ನು ಬಿಡಲಾಗಿದೆ. ಇದೇವೇಳೆ ಕೆಲವು ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಈಹಿಂದೆ ಹುಲಿಗಿ- ಆದೋನಿ ಮತ್ತು ಮಾಟಸೂಗೂರು-ಕುರುಗೋಡು ಮಾರ್ಗದಲ್ಲಿ ಬಸ್ಸುಗಳನ್ನು ಬಿಡಲಾಗಿತ್ತು. ಬಸ್ಸುಗಳ ಕಲೆಕ್ಷನ್ ಕೂಡಾ ಹೆಚ್ಚಾಗಿ ಆಗುತ್ತಿತ್ತು. ಸಂಬಂಧಿಸಿದ ಸಂಸ್ಥೆ ಅಧಿಕಾರಿಗಳು ಆ ಮಾರ್ಗಗಳನ್ನು ಪುನಹ ಪ್ರಾರಂಭಿಸಬೇಕೆಂದು ತಿಳಿಸಿದರು. ಗ್ರಾಮದ ಮುಖಂಡರಾದ ಕೆ.ಬೀಮಲಿಂಗಪ್ಪ, ಸಿಎಂ.ನಾಗರಾಜಸ್ವಾಮಿ, ಬಿ.ಸೋಮಶೇಖರಪ್ಪ, ಬಿ.ನಾಗೇಂದ್ರಪ್ಪ, ಎಸ್.ಎಂ.ಅಡಿವೆಯ್ಯಸ್ವಾಮಿ, ಎಚ್.ದ್ಯಾವಣ್ಣ, ಡ್ರೈವರ್‍ಹುಲುಗಪ್ಪ, ಬಕಾಡೆಈರಯ್ಯ, ವಿ.ರೇಣುಕಪ್ಪ, ರಾರಾವಿವೆಂಕಟೇಶ, ಬಿ.ವೀರಭದ್ರಗೌಡ, ಜಿ.ಚಿನ್ನಪ್ಪ, ಜಿ.ಈರಣ್ಣ, ಜೀನ್ಸ್‍ಬಸವರಾಜ, ಬಜಂತ್ರಿರಮೇಶ, ಎಚ್.ಲಕ್ಷ್ಮಣ, ಪೆದ್ದಹನುಮಂತ, ಎಕೆ.ಗಾದಿಲಿಂಗಪ್ಪ, ಮಂಜುನಾಥಶೆಟ್ಟಿ, ಟಿ.ಈರಣ್ಣ, ಎಂ.ಎರಿಸ್ವಾಮಿ, ಎನ್.ಕುಮಾರ, ಪ್ರದೀಪ್, ಬಸ್‍ಚಾಲಕ ಮತ್ತು ಕಂಡಕ್ಟರ್ ಗ್ರಾಮಸ್ಥರು ಇದ್ದರು. ಎಸ್.ಎಂ.ನಾಗರಾಜಸ್ವಾಮಿ ನೂತನ ಮಾರ್ಗದ ಬಸ್ಸಿಗೆ ಪೂಜೆ ನೆರವೇರಿಸಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸಬೇಕೆಂದು ಕೋರಿದರು.