ನಿಧನ
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.17: ಪಟ್ಟಣಕ್ಕೆ ಸಮೀಪದ  ಡಣನಾಯಕನಕೆರೆ ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಹುಲಿಗೆಮ್ಮ‌ರ ತಂದೆ ಶತಾಯುಷಿ ತಳವಾರ ಕ್ಯಾತಪ್ಪ ಅಲಿಯಾಸ್ ಹನುಮಂತಪ್ಪ (104) ಶನಿವಾರ ನಿಧನರಾಗಿದ್ದಾರೆ.
ಮೃತರು 8 ಜನ ಮಕ್ಕಳು, 40ಕ್ಕೂ ಹೆಚ್ಚು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.