ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಿ : ಅರೆಸೇನಾ ಪಡೆ ಪಥಸಂಚಲನ ಸಂದೇಶ ರಹನೆಸಿಪಿಐ ವಿಕಾಸ್ ಲಮಾಣಿ  ಹಾಗೂ ಪಿಎಸ್ ಐ ಗೀತಾಂಜಲಿ ಶಿಂಧೆ ರವರ ನೇತೃತ್ವದಲ್ಲಿ ನಡೆದ ಪಥಸಂಚಲನ
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.17: 2024 ರ ಲೋಕಸಭಾ ಚುನಾವಣೆಯು ಮುಕ್ತ ಪಾರದರ್ಶಕ  ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ಕೇಂದ್ರ ಚುನಾವಣೆ ಆಯೋಗವು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಪಟ್ಟಣದಲ್ಲಿ ಶನಿವಾರ ನಡೆದ ಪಥಸಂಚಲನದಲ್ಲಿ  ಲೋಕಸಭಾ ಚುನಾವಣೆಯಲ್ಲಿ  ಮತದಾರರು ನಿರ್ಭೀತಿಯಿಂದ ಮತ ಚಲಾಯಿಸುವಂತೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೇಂದ್ರ ಚುನಾವಣಾ ಆಯೋಗವು ಭದ್ರತೆಗೆ ಅರೆಸೇನಾ ಪಡೆಯನ್ನು ಆಯೋಜಿಸಲಾಯಿತು ಇದರ ಸಂಬಂಧ ಸಿಪಿಐ ವಿಕಾಸ್ ಲಂಬಾಣಿ ಹಾಗೂ ಪಿಎಸ್ಐ ಗೀತಾಂಜಲಿ ಶಿಂಧೆ ರವರ ನೇತೃತ್ವದಲ್ಲಿ  ಪ್ರಮುಖ ರಸ್ತೆಯ ಮಾರ್ಗವಾಗಿ ಪಥಸಂಚಲವನ್ನು ಕೈಗೊಂಡು ಸಾರ್ವಜನಿಕರಲ್ಲಿ  ಮತದಾನದ ಜಾಗೃತಿ ಮೂಡಿಸಿದರು. ಈ ಪಥ ಸಂಚಲನ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡು ಬಸ್ ಸ್ಟ್ಯಾಂಡ್, ಉಜ್ಜಿನಿ ರಸ್ತೆ, ಗಾಂಧಿ ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣದ ಬಳಿ ಕೊನೆಗೊಂಡಿತು.