ಬಿಜೆಪಿ ಮಂಡಲ ಅದ್ಯಕ್ಷ ಪದಗ್ರಹಣ ಕಾರ್ಯಕ್ರಮಕ್ಕೆ ವಿರೋಧ.ವಾಗ್ವಾದ, ತಳ್ಳಾಟ, ಪ್ರತಿಭಟನೆ ಮೂಲಕ ಸಂಸದ ಜಿ.ಎಂ.ಸಿದ್ದೇಶ್ವರವರಿಗೆ ಗೋಬ್ಯಾಕ್ ಘೋಷಣೆ.
ಸಂಜೆವಾಣಿ ವಾರ್ತೆ
 ಹರಪನಹಳ್ಳಿ.ಮಾ.17; ಜಿ.ಎಂ.ಸಿದ್ದೇಶ್ವರ ಗೋಬ್ಯಾಕ, ಚನ್ನಬಸವನಗೌಡ ಗೋಬ್ಯಾಕ್ ಎಂದು ಘೋಷಣೆ ಕೂಗುವ ಮೂಲಕ ಹರಪನಹಳ್ಳಿ ಬಿಜೆಪಿ ಪಕ್ಷದಲ್ಲಿನ ಭಿನ್ನಮತ ಸ್ಟೋಟವಾಗಿ ಮಾತಿನ ವಾಗ್ವಾದ, ಗೊಂದಲಕ್ಕೆ ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಸಾಕ್ಷಿಯಾಯಿತು.
ಬೆಳಿಗ್ಗೆ 11 ಗಂಟೆಗೆ ಪದಗ್ರಹಣ ಕಾರ್ಯಕ್ರಮ ನಿಗದಿಯಾಗಿತ್ತು, ಕೆಲವೊಂದು ಮುಖಂಡರು, ಕಾರ್ಯಕರ್ತರು ಕಲ್ಯಾಣ ಮಂಟಪದದ ಒಳಗೆ ಮುಂಚಿತವಾಗಿ ಆಸೀನರಾಗಿದ್ದರು. 11.30ಕ್ಕೆ ಸರಿಯಾಗಿ ಬಿಜೆಪಿ ಕಾರ್ಯಕರ್ತರು, ಮುಖಂಡರಾದ ಜಿ.ನಂಜನಗೌಡ, ಮಂಡಲ ಅಧ್ಯಕ್ಷ ಕೆ.ಲಕ್ಷ್ಣಣ ಸೇರಿದಂತೆ ಇನ್ನೂ ಕೆಲವೊಂದು ಮುಖಂಡರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಸಮಾರಂಭ ನಡೆಯುವ ಕಲ್ಯಾಣ ಮಂಟಪಕ್ಕೆ ಆಗಮಿಸಿದರು.
ಬೈಕ್ ರ್ಯಾಲಿ ಆಗಮಿಸುವ ಮುನ್ನಾ ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ ಬೆಂಬಲಿಗರು ಎನ್ನಲಾದ ಆರ್.ಲೋಕೇಶ, ಶಿಂಗ್ರಿಹಳ್ಳಿ ನಾಗರಾಜ ಸೇರಿದಂತೆ ಅನೇಕರು  ಪದಗ್ರಹಣ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಕಲ್ಯಾಣ ಮಂಟಪದ ಮುಖ್ಯದ್ವಾರವನ್ನು ಬಂದ್ ಮಾಡಿ ಸಿದ್ದೇಶ್ವರ ಗೋಬ್ಯಾಕ ಎಂದು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಈ ವೇಳೆ ಕರುಣಾಕರರೆಡ್ಡಿ ಬಣದವರಿಗೂ ಹಾಗೂ ಸಿದ್ದೇಶ್ವರ ಪರವಾಗಿರುವ ಮುಖಂಡ ಜಿ.ನಂಜನಗೌಡ, ಚನ್ನಬಸವ£ಗೌಡ ಹಾಗೂ ಇತರರು ಕಲ್ಯಾಣ ಮಂಟಪದ ಒಳಗೆ ಹೋಗಲು ಪ್ರಯತ್ನಿಸಿದಾಗ ಆಗಲಿಲ್ಲ. ತಳ್ಳಾಟ, ವಾಗ್ವಾದ ನಡೆಯಿತು. ನಂತರ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಪತ್ನಿ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಗಾಯಿತ್ರಿ , ಹರಿಹರ ಶಾಸಕ ಬಿ.ಪಿ.ಹರೀಶ, ಹಡಗಲಿ ಶಾಸಕ ಕೃಷ್ಣನಾಯ್ಕ ಮುಂತಾದ ಮುಖಂಡರು ಆಗಮಿಸಿದರು. ಆಗಲೂ ಸಹ ಯಾರಿಗೂ ಒಳಗೆ ಬಿಡದೆ ಅಡ್ಡ ನಿಂತು ಪ್ರತಿಭಟನೆ ಮುಂದುವರೆಸಿದರು. ಈ ಸಂದರ್ಭದಲ್ಲಿ ಸಂಸದ ಸಿದ್ದೇಶ್ವರ ಅವರು ಕರುಣಾಕರರೆಡ್ಡಿಯವರಿಗೆ ದೂರವಾಣಿ ಕರೆ ಮಾಡಿದಾಗಲೂ ಸ್ವೀಚ್ ಆಪ್ ಆಗಿತ್ತು, ಇಂದು ಬೆಳಿಗ್ಗೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ, ಶೀಘ್ರ ಬೇಟಿ ಮಾಡಿ ಕರುಣಾಕರರೆಡ್ಡಿಯವರನ್ನು ಇನ್ನೊಂದು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತೇನೆ, ಎಂದು ಮನವೊಲಿಸಲು ಪ್ರಯತ್ನಿಸಿದರು ರೆಡ್ಡಿ ಬಣದವರು ಒಳಗೆ ಬಿಡಲಿಲ್ಲ. ನಂತರ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಅಭ್ಯರ್ಥಿ ಗಾಯಿತ್ರಿ, ಬಿಜೆಪಿ ಶಾಸಕರುಗಳು, ಮುಖಂಡರು ಹಿಂಬಾಗಿಲ ಮೂಲಕ ಕಲ್ಯಾಣ ಮಂಟಪ ಪ್ರವೇಶಿಸಿ ವೇದಿಕೆಯತ್ತ ನಡೆದರು.
ಅಲ್ಲೂ ಸಹ ನುಗ್ಗಿದ ಕರುಣಾಕರರೆಡ್ಡಿ ಬಣದ ಕಾರ್ಯಕರ್ತರು ವಾಗ್ವಾದ ಕ್ಕಿಳಿದರು, ದಿಕ್ಕಾರ ಘೋಷಣೆ ಕೂಗಲು ಆರಂಭಿಸಿದರು. ಅಂತಹ ಗದ್ದಲದಲ್ಲಿಯೇ ಸಿದ್ದೇಶ್ವರ, ಅಭ್ಯರ್ಥಿ ಗಾಯಿತ್ರಿ ಮಾತನಾಡಿದರು. ಕೊನೆಗೆ ಗದ್ದಲ ಜೋರಾದಾಗ ಮದ್ಯಾಹ್ನ 1 ಗಂಟೆ ಸುಮಾರಿಗೆ ಪೋಲೀಸರು ಕರುಣಾಕರರೆಡ್ಡಿ ಬಣದ ಕಾರ್ಯಕರ್ತರನ್ನು ಬಲವಂತವಾಗಿ ಹೊರಗೆ ಕಳಿಸಿ ಬಾಗಿಲು ಸಮೀಪದ ಗೇಟ್‍ನ್ನು ಹಾಕಲಾಯಿತು. ಸಿಪಿಐ ಸಾಬಯ್ಯ ನಾಯಕ, ಪಿಎಸ್‍ಐ ಶಂಭುಲಿಂಗಹಿರೇಮಠ, ಕಿರಣ್ ಕುಮಾರ, ರಂಗಯ್ಯ ಹಾಗೂ ಪೋಲಿಸ್ ಸಿಬ್ಬಂದಿ ಗಲಾಟೆ ಹತೋಟಿಗೆ ತಂದರು, ನಂತರ ಬಂದೋಬಸ್ತ್‍ನಲ್ಲಿ ಪದಗ್ರಹಣ ಕಾರ್ಯಕ್ರಮ ಜರುಗಿತು.
ನಂತರ ಕಾರ್ಯಕ್ರಮ ಉದ್ಘಾಟನೆ ಹಾಗೂ ನೂತನ ಮಂಡಲ ಅಧ್ಯಕ್ಷ ಅವರಿಗೆ ಧ್ವಜ ಹಸ್ತಾಂತರ ಜರುಗಿತು. ಸಿದ್ದೇಶ್ವರ, ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ, ಇತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕರುಣಾಕರರೆಡ್ಡಿ ಬಣದ ಕಾರ್ಯಕರ್ತರಾಗಿ ಆರ್.ಲೋಕೇಶ, ತಾ.ಪಂ ಮಾಜಿ ಸದಸ್ಯ ಶಿಂಗ್ರಿಹಳಿ ನಾಗರಾಜ, ಮನೋಜಕುಮಾರ ತಳವಾರ, ಜೋಗಿ ಬಸವರಾಜ, ಗೋಣೆಪ್ಪ ಚಿಗಟೇರಿ, ಬಿ.ಆರ್.ಕೊಟ್ರೇಶ, ಜಾತಪ್ಪ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.