ಮೋದಿಯವರನ್ನು ಪ್ರಧಾನಿಯಾಗಿಸಲು ನನ್ನ ಪತ್ನಿಗೆ ಮತ ಹಾಕಿ ಗೆಲ್ಲಿಸಿ: ಜಿ.ಎಂ.ಸಿದ್ದೇಶ್ವರ್
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮಾ.17; ನರೇಂದ್ರಮೋದಿ ಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಜಿ ಅಭ್ಯರ್ಥಿಯಾದ ನನ್ನ ಪತ್ನಿ ಗಾಯಿತ್ರಿ ಯವರಿಗೆ ಮತ ಹಾಕಿ ಗೆಲ್ಲಿಸಿ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಕೋರಿದರು.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ನೂತನ ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಿಎಂ ಕಿಸಾನ, ಅನ್ನಭಾಗ್ಯ, ರಸ್ತೆ, ನೀರು ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದು, ಬಿಜೆಪಿಗೆ ಮತ ನೀಡಿದಲ್ಲಿ ಭಾರತ ಮತ್ತೊಷ್ಟು ಸುಭದ್ರವಾಗಿರಲಿದೆ ಎಂದರು.
ಹರಪನಹಳ್ಳಿಯಲ್ಲಿನ ಬಿಜೆಪಿಯ ಸಮಸ್ಯೆ ನಮಗೆ ಗೊತ್ತಿಲ್ಲದ ವಿಷಯ, 10 ಬಾರಿ ಇಲ್ಲಿಯ ಮಾಜಿ ಶಾಸಕ ಜಿ.ಕರುಣಾಕರರೆಡ್ಡಿಯವರಿಗೆ ದೂರವಾಣಿ ಕರೆ ಮಾಡಿದ್ದೇನೆ, ಸ್ವೀಚ್ ಆಪ್ ಆಗಿತ್ತು, ಇಂದು ಬೆಳಿಗ್ಗೆ ಮತ್ತೊಮ್ಮೆ ಮಾಡಿದ್ದೆ ಕರೆಸ್ವೀಕರಿಸಲಿಲ್ಲ, ಏನೆ ಸಮಸ್ಯೆಗಳಿದ್ದರೂ ಇಬ್ಬರೂ ಮೋದಿ ಪ್ರಧಾನಿ ಆಗಬೇಕು ಎನ್ನುವವರೇ, ಗಲಾಟೆ ಮಾಡಬೇಡಿ, ಶೀಘ್ರ ಕರುಣಾಕರರೆಡ್ಡಿಯವರನ್ನು ಭೇಟಿ ಮಾಡಿ ಸಮಸ್ಯೆ ಕೇಳಿ ಅವರನ್ನು ಕರೆದುಕೊಂಡು ಬಂದು ಇನ್ನೊಂದು ಕಾರ್ಯಕ್ರಮ ಮಾಡುತ್ತೇನೆ ಎಂದು ಹೇಳಿದರು.
ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಮಾತನಾಡಿ ಲೋಕಸಭೆಯಲ್ಲಿ ಮಹಿಳೆಯರಿಗೆ  ಮೀಸಲು ನಿಗದಿ ಮಾಡಲು ಬಿಲ್ ಪಾಸ ಮಾಡಲಾಗಿದೆ, ಅದು ಜಾರಿಗೆ ಬರುವುದಕ್ಕೂ ಪೂರ್ವದಲ್ಲಿಯೇ ನನಗೆ ಅವಕಾಶ ಸಿಕ್ಕಿದೆ, ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ, ನನ್ನನ್ನು ಗೆಲ್ಲಿಸಿ ಕಳಿಸಿದರೆ ಮೋದಿಯವರಿಗೆ ಬಲ ಬರುತ್ತದೆ ಎಂದು ತಿಳಿಸಿದರು.
ಹೂವಿನ ಹಡಗಲಿ ಶಾಸಕ ಕೃಷ್ಣನಾಯ್ಕ ಮಾತನಾಡಿ ಬೇರೆ ಪಕ್ಷದಲ್ಲಿ ಕಾರ್ಯಕರ್ತರನ್ನು ಹುಡುಕುವ ಕೆಲಸವಾಗುತ್ತದೆ, ಆದರೆ ನಮ್ಮ ಪಕ್ಷದಲ್ಲಿ ಕಾರ್ಯಕರ್ತರನ್ನು ನಿಯಂತ್ರಣ ಆಗುತ್ತಾ ಇಲ್ಲ, ದೇಶದಲ್ಲಿಯೇ ಬಿಜೆಪಿಗೆ ಉತ್ತಮ ವಾತಾವರಣವಿದೆ, ಗಾಯಿತ್ರಿ ಸಿದ್ದೇಶ್ವರ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಹೇಳಿದರು.
ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ ಪಕ್ಷ ಸದೃಡ ಇದ್ದಾಗ ಪೈಪೋಟಿ ಇರುತ್ತದೆ, ಸ್ವಲ್ಪ ಭಿನ್ನಾಭಿಪ್ರಾಯವಿದ್ದರೂ ಮೋದಿ ಪರವಾಗಿ ಎಲ್ಲರೂ ಇದ್ದಾರೆ, ಇಲ್ಲಿರುವ ವ್ಯತ್ಯಾಸ ಸರಿಮಾಡುತ್ತಾರೆ, ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿ ಎಂದರು.
ವಿಜಯನಗರ ಬಿಜೆಪಿ ಜಿಲ್ಲಾದ್ಯಕ್ಷ ಚೆನ್ನಬಸವನಗೌಡ ಪಾಟೀಲ್‍ರವರು ಇಲ್ಲಿಯ ಮಂಡಲ ಅಧ್ಯಕ್ಷ ಲಕ್ಷ್ಮಣ ಅವರಿಗೆ ಸಂಪೂರ್ಣ ಸಹಕಾರ ಕೊಟ್ಟು ಪಕ್ಷ ಗಟ್ಟಿಗೊಳಿಸಿ, ಪ್ರಪಂಚದಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಪಕ್ಷ ಬಿಜೆಪಿ ಎಂದು ಹೇಳಿದರು.
ನೂತನ ಮಂಡಲ ಅಧ್ಯಕ್ಷ ಕೆ.ಲಕ್ಷ್ಣಣ ಮಾತನಾಡಿ 32-33 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ, ಇಂತಹುದು ಬೇಕು ಎಂದು ಕೇಳಿಲ್ಲ, ಪಕ್ಷ ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಇನ್ನು ಮುಂದೆ ಸಹ ದುಡಿಯುತ್ತೇನೆ, ಕರುಣಾಕರರೆಡ್ಡಿಯವರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಅವರು ಪಕ್ಷದ ಧ್ವಜವನ್ನು ನೂತನ ಮಂಡಲ ಅಧ್ಯಕ್ಷ ಕೆ.ಲಕ್ಷ್ಣಣ ಅವರಿಗೆ ಹಸ್ತಾಂತರಿಸಿದರು.
ಮುಖಂಡ ಜಿ.ನಂಜನಗೌಡ ಮಾತನಾಡಿದರು, ಜಿಲ್ಲಾ ಮುಖಂಡರಾದ ಸಂಜೀವರೆಡ್ಡಿ, ಆರುಂಡಿ ನಾಗರಾಜ, ರಾಘವೇಂದ್ರ, ಬಾಗಳಿ ಕೊಟ್ರೇಶಪ್ಪ, ಎಂ.ಪಿ.ನಾಯ್ಕ, ಕಣವಿಹಳ್ಳಿ ಮಂಜುನಾಥ, ಮುತ್ತಿಗೆ ವಾಗೀಶ, ಬ್ಯಾಲಹುಣಸಿ ರಾಮಣ್ಣ, ಕಿಚಡಿ ಕೊಟ್ರೇಶ, ಉದಯಕುಮಾರ, ಎಂ.ಶಂಕರ ಇತರರು ಇದ್ದರು.