ಬಳ್ಳಾರಿ ಎಪಿಎಂಸಿ ಅಧ್ಯಕ್ಷರಾಗಿಕಟ್ಟೆಮನೆ ನಾಗೇಂದ್ರ ನೇಮಕ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.17: ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಆಪ್ತ ಕಟ್ಟೆಮನೆ ನಾಗೇಂದ್ರ ಅವರು ಬಳ್ಳಾರಿಯ ಕೃಷಿ ಉತ್ಪನ್ನ‌ಮಾರುಕಟ್ಟೆ (ಎಪಿಎಂಸಿ)ಯ ಅಧ್ಯಕ್ಷರನ್ನಾಗಿ ನೇಮಕ‌ ಮಾಡಿ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಪಕ್ಷದ ಇನ್ನಿತರ ನಾಯಕರ ಸಹಕಾರದಿಂದ ಈ ಸ್ಥಾನವನ್ನು ಪಕ್ಷದಲ್ಲಿನ ನನ್ನ ಸೇವೆಯನ್ನು ಪರಿಗಣಿಸಿ ನೀಡಿದ್ದು. ರೈತರ ಏಳಿಗಾಗಿ ಸಮಿತಿಯಿಂದ ಆದಷ್ಟು ಶ್ರಮಿಸುವುದಾಗಿ ಕಟ್ಟೆಮನೆ ನಾಗೇಂದ್ರ ಹೇಳಿದ್ದಾರೆ.
ಇವರೊಂದಿಗೆ ಸಮಿತಿಗೆ ಉಪಾಧ್ಯಕ್ಷರಾಗಿ ಹುಲಿಯಪ್ಪ ಕೊಳಗಲ್ಲು, ಸದಸ್ಯರಾಗಿ ಹಸ್ತ ಪಂಪನಗೌಡ ಜಾಲಿಹಾಳ್, ಕುಂಟನಾಳ್ ಮಲ್ಲಿಕಾರ್ಜುನಗೌಡ, ಹಲಕುಂದಿ‌ ಮುಂದಾಲಪ್ಪ, ವಿಶ್ವನಾಥ್ ನಾಯಕ, ಕುದಾನ್ ಸಾಬ್, ಅಕ್ಕಿ ನಾಗರತ್ನಮ್ಮ, ಹೆಚ್.ಗವಿಸಿದ್ದನಗೌಡ, ಕನ್ಯಾ ನಾಯ್ಕ, ಯಲ್ಲಪ್ಪ ಬಿ. ಅವರನ್ನು ನೇಮಕ ಮಾಡಲಾಗಿದೆ.