ರಾಘವೇಂದ್ರ ಸ್ವಾಮಿ ವರ್ಧಂತಿ ಮಹೋತ್ಸವ

ಸಂಜೆವಾಣಿ ವಾರ್ತೆ
ಹಿರಿಯೂರು.ಮಾ.17- ನಗರದ ಚಿಕ್ಕಪೇಟೆ ಬಳಿ ಇರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ವರ್ಧಂತಿ ಪೂಜಾ ಕಾರ್ಯಕ್ರಮವು ಭಕ್ತಿ ಭಾವದಿಂದ ಜರಗಿತು. ಇದರ ಅಂಗವಾಗಿ ದೇವಾಲಯದ ಪ್ರಧಾನ ಅರ್ಚಕರಾದಮಂಜುನಾಥ್ ಆಚಾರ್ಯ ಮತ್ತು ಮಕ್ಕಳು ಹಾಗೂ ಬೃಂದಾವನ ಮಿತ್ರಕೂಟದ ಕಾರ್ಯಕಾರಿ ಸಮಿತಿಯವರ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಅರ್ಚನೆಯ ಅಭಿಷೇಕ ನವಗ್ರಹ ಪೂಜೆ ಗಣಪತಿ ಪೂಜೆ ತೊಟ್ಟಿಲು ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನಡೆದವು ಸಂಜೆ ದೊಡ್ಡಪೂಜೆ, ಮಹಾಮಂಗಳಾರತಿ ನಂತರ  ತೀರ್ಥಪ್ರಸಾದ ವಿನಿಯೋಗ ನಡೆಯಿತು ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು