ಐಐಟಿ ಕಾನ್ಪುರದ ಯುವ ಸಂಗಮ್ ತಂಡಕ್ಕೆ ಸಿಯುಕೆಯಿಂದ ಬಿಳ್ಕೋಡುಗೆ
ಕಲಬುರಗಿ:ಮಾ.17:”ರಾಷ್ಟ್ರೀಯ ಏಕೀಕರಣದ ಪರಿಕಲ್ಪನೆಯು ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ” ಎಂದು ಖ್ಯಾತ ಪತ್ರಕರ್ತ ಮತ್ತು ಬರಹಗಾರ ಶ್ರೀ ಶ್ರೀನಿವಾಸ ಸಿರ್ನೂರಕರ್ ಹೇಳಿದರು.
ಒಂದು ವಾರದ ಕರ್ನಾಟಕ ಪ್ರವಾಸವನ್ನು ಪೂರ್ಣಗೊಳಿಸಿದ ಐಐಟಿ ಕಾನ್ಪುರದ ಯುವ ಸಂಗಮ ತಂಡಕ್ಕೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ವಂದೇ ಮಾತರಂ ರಾಷ್ಟ್ರಗೀತೆ ಮತ್ತು ಜನ ಗಣ ಮನ ರಾಷ್ಟ್ರಗೀತೆಗಳು ನಿಜವಾಗಿಯೂ ರಾಷ್ಟ್ರೀಯ ಏಕೀಕರಣವನ್ನು ಪ್ರತಿನಿಧಿಸುತ್ತವೆ. ಪ್ರತಿಯೊಂದು ಧಾರ್ಮಿಕ ಸ್ಥಳಗಳು, ಪ್ರಾಚೀನ ಭಾರತೀಯ ಗ್ರಂಥಗಳು, ಧಾರ್ಮಿಕ ಸುಧಾರಕರು, ನದಿಗಳು ಮತ್ತು ಭಾರತದ ಪರಂಪರೆಯ ಸ್ಥಳಗಳು ಅನಾದಿ ಕಾಲದಿಂದಲೂ ನಮ್ಮ ರಾಷ್ಟ್ರವನ್ನು ಒಂದುಗೂಡಿಸಿಕೊಂಡು ಬಂದಿವೆ. ಭಾರತೀಯ ಜ್ಞಾನ ಪರಂಪರೆ ಬಹಳ ಶ್ರೀಮಂತವಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರ, ವಿಜ್ಞಾನೇಶ್ವರನ ಮಿತಾಕ್ಷರ, ಮಹಾವೀರಾಚಾರ್ಯರ ಗಣಿತ ಸಾರ, ಭಾಸ್ಕರಾಚಾರ್ಯರ ಬರಹಗಳನ್ನು ನಾವು ಇಲ್ಲಿ ಉದಾಹರಿಸಬಹುದಾಗಿದೆ. ಈ ಪ್ರಾಚೀನ ಗ್ರಂಥಗಳಿಂದ ಜ್ಞಾನವನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗದಿರುವುದು ದುರದೃಷ್ಟಕರ. ರಾಷ್ಟ್ರೀಯ ಏಕೀಕರಣಕ್ಕೆ ಕರ್ನಾಟಕ ಯಾವಾಗಲೂ ಅಪಾರ ಕೊಡುಗೆ ನೀಡಿದೆ” ಎಂದು ಅವರು ಹೇಳಿದರು.
ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಯವ ಸಂಗಮ, ಏಕ ಭಾರತ ಶ್ರೇಷ್ಠ ಭಾರತ ಮತ್ತು ಕರ್ನಾಟಕ ಭೇಟಿಯ ಕುರಿತು ನಿಮ್ಮ ಅನುಭವವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಯುವ ಸಂಗಮವು ಯುವಕರಿಗೆ ಭಾರತದ ಪ್ರಗತಿ, ಕೈಗಾರಿಕೆ (ಪ್ರದ್ಯೋಗಿಕಿ), ಪ್ರವಾಸೋದ್ಯಮ ಮತ್ತು ಪ್ರಯಾಣ (ಪರ್ಯಟನ), ಸಂಸ್ಕೃತಿ ಮತ್ತು ಪರಂಪರೆ ಮತ್ತು ಜನರ ನಡುವಿನ ಪರಸ್ಪರ ಸಂಪರ್ಕ ಕುರಿತು ತಿಳಿದುಕೊಳ್ಳಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ವಿಶ್ವದ ಮೊದಲ ಸಂಸತ್ತಿನ ಸ್ಥಳವಾದ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣಕ್ಕೆ ನಿಮ್ಮ ಭೇಟಿಯನ್ನು ಆಯೋಜಿಸಿದ್ದೇವೆ. ಅದೆ ರೀತಿ, ಬೀದರ ಬಿದ್ರಿ ಕಲೆಗೆ ಹೆಸರುವಾಸಿಯಾಗಿದೆ, ಐಐಟಿ ಧಾರವಾಡ ಮತ್ತು ಇಸ್ರೋ ತಾಂತ್ರಿಕ ಪ್ರಗತಿಗೆ ಮತ್ತು ಐಐಎಂ ಬೆಂಗಳೂರು ನಿರ್ವಹಣಾ ಅಭ್ಯಾಸಗಳಿಗೆ ಹೆಸರುವಾಸಿಯಾಗಿದೆ. ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಮಹಾನ್ ಎಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ನಿರ್ಮಿಸಿದ ಪ್ರಸಿದ್ಧ ಕೆಆರ್ ಎಸ್ ಅಣೆಕಟ್ಟುಗಳನ್ನು ತಾವು ನೋಡಿದ್ದಿರಿ. ರಾಮನ ಭೂಮಿಯಿಂದ ಬಂದ ನೀವು ಹನುಮ ಮತ್ತು ಶರಣರ ಭೂಮಿಯನ್ನು ನೋಡಿದ್ದೀರಿ. ನಿಮ್ಮ ಭೇಟಿ ಮತ್ತು ಅನನ್ಯ ಅನುಭವಗಳ ಬಗ್ಗೆ ಪ್ರತಿಯೊಬ್ಬರು ವರದಿಯನ್ನು ಬರೆಯಿರಿ ಅದನ್ನು ಪ್ರಧಾನ ಮಂತ್ರಿ ಕಚೇರಿ ಮತ್ತು ಶಿಕ್ಷಣ ಸಚಿವಾಲಯಕ್ಕೆ ಕಳುಹಿಸಬಹುದು” ಎಂದು ಹೇಳಿದರು.
ಇದಕ್ಕೂ ಮುನ್ನ ಯುವ ಸಂಗಮ ಕಾರ್ಯಕ್ರಮದ ಸಿಯುಕೆಯ ನೋಡಲ್ ಅಧಿಕಾರಿ ಡಾ.ವೀರೇಶ ಕಸಬೇಗೌಡರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಐಐಟಿ ಕಾನ್ಪುರದ ಪ್ರಾಧ್ಯಾಪಕ ಡಾ. ವಿಜಯಕುಮಾರ್ ಪಾಂಡೆ ಮತ್ತು ಇತರ ಎಲ್ಲ ಸದಸ್ಯರು ತಮ್ಮ ಅನುಭವವನ್ನು ಹಂಚಿಕೊಂಡರು ಮತ್ತು ಇದು ಅದ್ಭುತ ಮತ್ತು ಸ್ಮರಣೀಯ ಅನುಭವ ಎಂದು ಹೇಳಿದರು. ಸಿಯುಕೆಯ ಅತ್ಯುತ್ತಮ ಆತಿಥ್ಯಕ್ಕೆ ಧನ್ಯವಾದಗಳನ್ನು ತಿಳಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು ಮತ್ತು “ಇದು ಉತ್ತಮ ಕಲಿಕೆಯ ಅವಕಾಶ ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು” ಎಂದು ಹೇಳಿದರು.
ಡಾ.ನೀತಿನ್ ಬಿ ಕಾರ್ಯಕ್ರಮ ನಿರೂಪಿಸಿದರು, ಡಾ.ಸಂಗಮೇಶ್ ವಂದಿಸಿದರು. ಈ ಸಂದರ್ಭದಲ್ಲಿ ಡಾ.ನಾಗರಾಜ ಧಾರವಾಡಕರ, ಡಾ.ಆರ್.ಎಸ್.ಹೆಗಡಿ, ಡಾ.ಬಸವರಾಜ ಎಂ.ಎಸ್, ಡಾ.ಎನ್.ಬಾಬು, ಡಾ.ಮಲ್ಲಿಕಾರ್ಜುನ್, ಡಾ.ಗಣಪತಿ ಬಿ.ಸಿನ್ನೂರ, ಡಾ.ಶಿವ ಎಂ, ಡಾ.ಜಗದೀಶ ಬಿರೇದಾರ, ಡಾ.ಕವಿತಾ ಸಂಗೋಳಗಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.