ದಿನೇಶ್ ಕೆ.ಶೆಟ್ಟಿ ಹುಟ್ಟುಹಬ್ಬ;  ವಿವಿಧ ಸೇವಾ ಕಾರ್ಯಕ್ರಮಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೭: ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ  ವಿವಿಧ ಸೇವಾ ಕಾರ್ಯಕ್ರಮಗಳನ್ನು ದಿನೇಶ್ ಕೆ. ಶೆಟ್ಟಿ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿತ್ತು.ಇಂದು ಬೆಳಗ್ಗೆ 9-30ಕ್ಕೆ ಆವರಗೆರೆಯ ಗೋ ಶಾಲೆಯ ಗೋವುಗಳಿಗೆ ಮೇವು ವಿತರಣೆ ಮೂಲಕ ವಿತರಣೆ  ನಂತರ ಮಧ್ಯಾಹ್ನ 12-00 ಗಂಟೆಗೆ ಭಾಷಾ ನಗರದ ಸ್ಟೇಡಿಯಂನಲ್ಲಿ ಮಹಿಳಾ ಪುಟ್ಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಲಾಯಿತು.ಮಧ್ಯಾಹ್ನ 12-30 ಕ್ಕೆ ನಗರದ ಎಂ.ಸಿ.ಸಿ. ‘ಎ’ ಬ್ಲಾಕ್‌ನಲ್ಲಿರುವ ವನಿತಾ ಸಮಾಜದ ವೃದ್ಧಾಶ್ರಮದ ಹಿರಿಯರಿಗೆ ಹಣ್ಣು-ಹಂಪಲ ಹಾಗೂ ಶ್ರೀ ಓಂಕಾರ ಹುಚ್ಚನಾಲಿಂಗಸ್ವಾಮಿ ಅನಾಥ ಸೇವಾಶ್ರಮದ ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆಯೊಂದಿಗೆ ಅನ್ನಸಂತರ್ಪಣೆ ನಡೆಯಿತು ಎಂದು ಬಳಗದ ಸಂಚಾಲಕ ಟಿ.ಯುವರಾಜ್ ಹೇಳಿದರು. ಇಂದು ಸಂಜೆ 6-00 ಗಂಟೆಗೆ ದಿನೇಶ್ ಕೆ. ಶೆಟ್ಟಿಯವರ ಸ್ವಗೃಹದ ಮುಂದೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ವೇಳೆ ಲತಿಕಾ ದಿನೇಶ್ ಶೆಟ್ಟಿ,ಶ್ರೀಕಾಂತ್ ಬಗೇರ, ರಾಜು ಬಳ್ಳಾರಿ, ಬಸವರಾಜ, ಆರೋಗ್ಯ ಸ್ವಾಮಿ, ದುರುಗೇಶ್ ಇತರರು ಇದ್ದರು.