ರವಿಕುಮಾರ ಚಾಮಲಾಪುರ ಅವರಿಗೆ ಶ್ರದ್ದಾಂಜಲಿ ಸಭೆ
ಸಂಜೆವಾಣಿ ವಾರ್ತೆ
ಶ್ರೀರಂಗಪಟ್ಟಣ:ಮಾ.17:- ಇತ್ತೀಚೆಗೆ ಆನಾರೋಗ್ಯದಿಂದ ನಿಧನರಾದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ.ರವಿ ಕುಮಾರ ಚಾಮಲಾಪುರ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಶ್ರಿರಂಗಪಟ್ಟಣದಲ್ಲಿ ನಡೆಯಿತು. ಪಟ್ಟಣದ ಪೂರ್ಣಯ್ಯ ಬೀದಿಯ ಕಟ್ಟಡ ಕಾರ್ಮಿಕ ಮಜ್ದೂರ್ ಸಂಘದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಲ್ಲೇನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಆಯೋಜಿಸಲಾಯಿತು.
ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಧನಂಜಯ ದರಸಗುಪ್ಪೆ ಮಾತನಾಡಿ,ಜಿಲ್ಲೆಯಲ್ಲಿ ಕನ್ನಡ ತೇರು ಕುರಿತಾದ ಚಟುವಟಿಕೆಗಳ ನಡೆಸಲು ಇದ್ದ ಒಳ್ಳೆಯ ಸಂಘಟನ ಚತುರನನ್ನು ಕಳೆದುಕೊಂಡಿದ್ದೇವೆ. ಎರಡು ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಲವಾರು ಜಿಲ್ಲಾ ಕನ್ನಡ ಸಮ್ಮೇಳನಗಳನ್ನು ನಡೆಸಿ, ಅಖಿಲ ಭಾರತ ಕನ್ನಡ ಸಮ್ಮೇಳನವನ್ನು ಮಂಡ್ಯ ಜಿಲ್ಲೆಗೆ ತರುತ್ತೇನೆ ಎಂದು ಶಪತ ಮಾಡಿ, ಇದೀಗ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಮ್ಮೇಳನದ ಸಿದ್ದತೆಗಳಾಗುತ್ತಿದ್ದು,ಇದೀಗ ಜಿಲ್ಲಾಧ್ಯಕ್ಷರನ್ನು ನಾವು ಕಳೆದುಕೊಂಡಿದ್ದೇವೆ ಎಂದರು.
ತಾಲೂಕು ಕಸಾಪ ಪದಾದಿಕಾರಿಗಳು ಕವಿಗಳು,ಚಿಂತಕರು ಅಜೀವ ಸದಸ್ಯರು ಭಾಗವಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ.ರವಿ ಕುಮಾರ ಚಾಮಲಾಪುರ ಅವರ ಗುಣಗಾನ ಮಾಡಿದರು.ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು -ಆಜೀವ ಸದಸ್ಯರು -ಸಾಹಿತ್ಯಾಸಕ್ತರು -ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾರ್ವಜನಿಕರು ಭಾಗವಹಿಸಿ ರವಿಕುಮಾರ್ ಭಾವಚಿತ್ರ?ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಗರ ಘಟಕದ ಅಧ್ಯಕ್ಷರಾದ ಸರಸ್ವತಿ ಪಶ್ಚಿಮವಾಹಿನಿ,ಕಸಬಾ ಹೊಬಳಿಯ ಶಂಕರ್, ಬೆಳಗೊಳ ಹೋಬಳಿಯ ಶೇಖರ್, ಕೆ.ಶೆಟ್ಟಹಳ್ಳಿ ಹೋಬಳಿಯ ಬಾಲಕೃಷ್ಣ, ವಾಸು ಸೇರಿದಂತೆ ಇತರರಿದ್ದು, ಪುಷ್ಪ ನಮನ ಸಲ್ಲಿಸಿದರು.