ಕನ್ನಡ ಪತ್ರಿಕೆಗಳನ್ನು ಆರಂಭಿಸಿ ಮುನ್ನಡೆಸುವ ದೊಡ್ಡ ಜವಾಬ್ದಾರಿ ಹೊತ್ತಿರುವ ವ್ಯಕ್ತಿಗಳ ಸಾಹಸ ಮೆಚ್ಚುವಂತಹದ್ದು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.17-ಕನ್ನಡ ಪತ್ರಿಕೆಗಳನ್ನು ಆರಂಭಿಸಿ ಮುನ್ನಡೆಸುವದೊಡ್ಡಜವಾಬ್ದಾರಿ ಹೊತ್ತಿರುವ ವ್ಯಕ್ತಿಗಳ ಸಾಹಸ ಮೆಚ್ಚುವಂತಹದ್ದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್‍ಎನ್‍ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಮಾಜಿ ಶಾಸಕರು ಮಾಜಿ ಮೇಯರ್ ಶಿಕ್ಷಣ ತಜ್ಞ ಶ್ರೀಯುತ ವಾಸುರವರ ಶ್ರದ್ಧಾಂಜಲಿ ಸಭೆಯಲ್ಲಿ, ವಾಸುರವರ ಭಾವ ಚಿತ್ರಕ್ಕೆ ಪುಷ್ಪ ಸಲ್ಲಿಸಿ ಮಾತನಾಡುತ್ತಾ ಕನ್ನಡಿಗರ ಪ್ರಜಾನುಡಿ ಪತ್ರಿಕೆಯ ಮೂಲಕ ವಾಸುರವರು ಪತ್ರಿಕೋದ್ಯಮದ ಮೂಲಕ ಕನ್ನಡ ಬೆಳವಣಿಗೆಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಲದೆ ರಾಜಕೀಯ, ಶಿಕ್ಷಣ, ಸಹಕಾರ, ಸಂಘಟನೆಯ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.
ಮೈಸೂರಿನ ಶಾಸಕರಾಗಿ ಉತ್ತಮ ಸೇವೆಯನ್ನು ಸಲ್ಲಿಸಿದವರು. ಮೇಯರ್ ವಾಸು ಎಂದೇ ಪ್ರಸಿದ್ಧರಾಗಿದ್ದವರು. ಮೈಸೂರಿನ ಜಯದೇವ ಆಸ್ಪತ್ರೆಯ ನಿರ್ಮಾಣದಲ್ಲಿ, ಮಹಾರಾಣಿ ಕಾಲೇಜಿನ ಅಭಿವೃದ್ಧಿ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕನ್ನಡ ಸಾಹಿತ್ಯ, ಸಂಸ್ಕೃತಿ, ಸಂಘಟನೆಗಳ ಪೆÇ್ರೀತ್ಸಾಹಕರಾಗಿದ್ದ ವಾಸುರವರು ಪ್ರಜಾ ನುಡಿ ಪತ್ರಿಕೆಯನ್ನು ಬೆಳೆಸುವ ಮೂಲಕ ಪತ್ರಿಕೋದ್ಯಮದಲ್ಲೂ ಅಪಾರ ಹೆಸರು ಮಾಡಿದವರು. ತಮ್ಮ ಸರಳತೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಇವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿರವರ ರಾಜಕೀಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದವರು. ಕನ್ನಡದ ಅಭಿಮಾನಿಗಳಾಗಿದ್ದ ವಾಸುರವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರೋಣ ಎಂದರು.
ಕನ್ನಡ ಚಳುವಳಿಗಾರ ಪುಣ್ಯದ ಹುಂಡಿ ರಾಜುರವರು ಮಾತನಾಡಿ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಗಳ ಮೂಲಕ ತಂತ್ರಜ್ಞಾನ, ಪದವಿ ಮತ್ತು ಪಿಯುಸಿ ವಿಭಾಗಗಳನ್ನು ಸ್ಥಾಪನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಮೇಯರ್ ಆಗಿದ್ದಾಗಅವರ ಸೇವೆ ಮೈಸೂರಿಗೆ ಹೆಚ್ಚು ಲಭ್ಯವಾಗಿತ್ತು. ಆಟೋ ಚಾಲಕರಾಗಿ ತಮ್ಮ ಶ್ರಮದ ಮೂಲಕ ಬಹುದೊಡ ್ಡಎತ್ತರಕ್ಕೆ ಬೆಳೆದು ಶಾಸಕರಾಗಿ ಸೇವೆ ಸಲ್ಲಿಸಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದರು ಎಂದರು.
ಕನ್ನಡ ಸಂಘಟನೆಗಳ ಹೋರಾಟಗಾರ ಶ್ರೀನಿವಾಸಗೌಡ ಮಾತನಾಡಿ ಮೇಯರ್ ವಾಸು ಸರಳ ವ್ಯಕ್ತಿತ್ವದ ವ್ಯಕ್ತಿ ಪ್ರತಿಯೊಬ್ಬರನ್ನು ಮಾತನಾಡಿಸುವ ಅವರ ಕಷ್ಟಗಳನ್ನು ಸಹೃದಯತೆಯಿಂದ ಕೇಳುವ ಮೂಲಕ ಸಂಕಷ್ಟಗಳಿಗೆ ಪರಿಹಾರವನ್ನು ಒದಗಿಸುತ್ತಿದ್ದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗಮೂರ್ತಿ ಮಾತನಾಡಿ, ಮೈಸೂರಿನ ಯಾವುದಾದರು ವೃತ್ತಕ್ಕೆ ವಾಸುರವರ ಹೆಸರನ್ನುಇಟ್ಟು, ಪ್ರತಿಮೆ ಸ್ಥಾಪಿಸಿ ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಬೇಕು ಎಂದರು. ಕನ್ನಡ ಸಂಘಟನೆಗಳ ಮುಖಂಡರಾದರಾಜ ಗೋಪಾಲ್, ಸುರೇಶ್‍ಗೌಡ, ಪರಮೇಶ್ವರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ರೇಣುಕೇಶ್,ಬಿಕೆ ಆರಾಧ್ಯ, ಬೊಮ್ಮಾಯಿ ಇದ್ದರು.