ಹೊಗೆನಕಲ್ ಜಲಪಾತದಲ್ಲಿ ದಿಢೀರ್ ನೀರಿನ ಮಟ್ಟ ಏರಿಳಿಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.17- ಕರ್ನಾಟಕ ಮತ್ತುತಮಿಳುನಾಡು ಗಡಿಯಲ್ಲಿಕಾವೇರಿಯು ಜಲವೈಯ್ಯಾರ ಸೃಷ್ಟಿಸುವ ಹೊಗೆನಕಲ್ ಜಲಪಾತದಲ್ಲಿ ದಿಢೀರ್ ನೀರಿನ ಮಟ್ಟ ಹೆಚ್ಚಾಗಿ ಈಗ ಮತ್ತೆ ಇಳಿಕೆ ಕಂಡಿದೆ.
ತಮಿಳುನಾಡಿನ ಬಿಳಿಗುಂಡ್ಲು ಸಿಬ್ಬಂದಿ ಮಾಹಿತಿ ಪ್ರಕಾರ, ಬುಧವಾರ 4 ಸಾವಿರ ಘನ ಅಡಿಗೆಏರಿತ್ತು. ಗುರುವಾರ 2,800 ಘನ ಅಡಿ ಇದ್ದ ನೀರಿನ ಮಟ್ಟ ಈಗ 1200ಕ್ಕೆದಿಢೀರ್ ನೀರಿನ ಮಟ್ಟಏರಿಕೆಕಂಡು ಸ್ಥಳೀಯರು, ಪ್ರವಾಸಿಗರು ಅವಾಕ್ಕಾಗುವ ಜೊತೆ ಜಲವೈಯ್ಯಾರವನ್ನು ಕಳೆದ ಎರಡು ದಿನ ಕಣ್ಣುಂಬಿಕೊಂಡಿದ್ದಾರೆ.
ಹೊಗೆನಕಲ್ ಜಲಪಾತದ ಬಗ್ಗೆ ಒಂದಿಷ್ಟು:ಹೊಗೆನಕಲ್ ಜಲಪಾತವುದಕ್ಷಿಣ ಭಾರತದಕಾವೇರಿ ನದಿಗೆ ಸೇರಿದೆ. ಇದುದಕ್ಷಿಣ ಭಾರತದ ತಮಿಳುನಾಡು ರಾಜ್ಯದಧರ್ಮಪುರಿಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೂರದಲ್ಲಿ ಈ ಜಲಪಾತಕಂಡುಬರುತ್ತದೆ. ಭಾರತದ “ನಯಾಗರ ಜಲಪಾತ’ವೆಂದೇ ಹೊಗೆನಕಲ್ ಸುಪ್ರಸಿದ್ಧವಾಗಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ.
ಆದ್ದರಿಂದಇದಕ್ಕೆ “ಹೊಗೆನಕಲ್” ಎಂಬ ಹೆಸರು ಬಂದಿದೆ. ಹೊಗೆನಕಲ್ ಜಲಪಾತ ಕರ್ನಾಟಕ- ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ.