ಪ್ರಸ್ತುತ ಮಹಿಳೆಯರ ಪಾತ್ರ ಮಹತ್ತರ, ರವಿಕುಮಾರ್
ಶಿಡ್ಲಘಟ್ಟ,ಮಾ,೧೭-ಜಾಗತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳ ಮೂಲಕ ತಮ್ಮದೇ ಆದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರು ಈಗಾಗಲೆ ಸಮಾಜ ಮತ್ತು ದೇಶದ ಕಲ್ಯಾಣಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಬಾಲಾಜಿ ಕನ್ವೆನ್ಷನಲ್ ಹಾಲ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ತಾಲ್ಲೂಕು ಪಂಚಾಯಿತಿ ಮತ್ತು ತಾಲ್ಲೂಕು ಸ್ವೀಪ್ ಸಮಿತಿ, ಹಾಗೂ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆ ಶಿಡ್ಲಘಟ್ಟ ರವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದು ಶಾಸಕ ರವಿಕುಮಾರ್
ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಹಿಳಾ ದಿನಾಚರಣೆ ಒಂದು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ ಹಾಗೂ ವರ್ಷದಿಂದ ವರ್ಷಕ್ಕೆ ಒಂದು ಪದ್ಧತಿಯಾಗುತ್ತಿದೆ. ಇದಲ್ಲದೆ, ಈ ಆಚರಣೆಯು ನಮ್ಮ ಜೀವನದಲ್ಲಿ ಮತ್ತು ಸಮಾಜದಲ್ಲಿ ಮಹಿಳೆಯರ ಬಗ್ಗೆ ಮೆಚ್ಚುಗೆ, ಗೌರವ, ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ. ಯುವ ಪೀಳಿಗೆಯ ಮನಸ್ಸಿನಲ್ಲಿ ತಮ್ಮ ಬಾಲ್ಯದ ದಿನಗಳಿಂದಲೇ ಮಹಿಳೆಯರ ಬಗ್ಗೆ ಗೌರವ ಮತ್ತು ಕಾಳಜಿಯನ್ನು ತುಂಬುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಯನುಮಪ್ಪ ಕರೆ ಅನುಮಂತಪ್ಪ ಮತ್ತು ನ್ಯಾಯಾಧೀಶರಾದ ಪೂಜಾ ರವರಿಗೆ ಸನ್ಮಾನಿಸಿ ಗೌರವಿಸಿದರು. ತಾಲ್ಲೂಕು ವ್ಯಾಪ್ತಿಯ ಗರ್ಭಿಣಿ ಸ್ತ್ರೀಯರಿಗೆ ಅರಶಿನ, ಕುಂಕುಮ ಕೊಟ್ಟು ಸೀಮಂತ ಮಾಡಲಾಯಿತು. ನಂತರ ಸಂವಿಧಾನ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕಿ ಧನುರೇಣುಕ, ತಹಶೀಲ್ದಾರ್ ಸ್ವಾಮಿ,ಕಾರ್ಯನಿರ್ವಾಹಕ ಮುನಿರಾಜು, ಡಾ. ವೆಂಕಟೇಶ್ ಮೂರ್ತಿ, ಈಇS ಸಂಸ್ಥೆಯವರಾದ ಶ್ರಿರಂಗ ಹೆಗ್ಡೆ ಮತ್ತು ಸಂಯೋಜಕರಾದ ನಿಕಾತ್ ಪರ್ವಿನ್, ರಮೇಶ್, ಬಿಇಒ
ನರೇದ್ರ ಕುಮಾರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಸಿ ಡಿ ಪಿ ಒ ನೌತಾಜ್, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಯವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು , ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.