ಡಾ. ಅಂಬೇಡ್ಕರ್ ಶೋಷಿತ ಸಮುದಾಯಕ್ಕೆ ನೆಲೆ ಕಟ್ಟಿಕೊಟ್ಟಿದ್ದಾರೆ : ಸಂಜು ಕಂಬಾಗಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.17: ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಾಖೆಯನ್ನು ಉದ್ಘಾಟಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ಜಿಲ್ಲಾ ಪ್ರಧಾನ ಸಂಚಾಲಕÀ ಸಂಜು ವಾಯ್. ಕಂಬಾಗಿ ಉದ್ಘಾಟಿಸಿ ಮಾತನಾಡಿ, ವಿಶ್ವರತ್ನ ಡಾ. ಅಂಬೇಡ್ಕರ್ ಅವರು ತಮ್ಮ ಸರ್ವÀಸ್ವವನ್ನು ತ್ಯಾಗ ಮಾಡಿ ಹೋರಾಡಿ ಮಾನವ ಸಮುದಾಯಕ್ಕೆ ನೆಲೆಯನ್ನು ಕಟ್ಟಿಕೊಟ್ಟವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು. ಸಂವಿಧಾನ ಎಂಬ ಪವಿತ್ರ ಗ್ರಂಥದಲ್ಲಿ ಸಾರ್ವಭೌಮ ಸಮಾಜವಾದಿ, ಧರ್ಮ ನಿರ್ಪೇಕ್ಷ, ಪ್ರಜಾಸತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಮಾಜಿಕ ಆರ್ಥಿಕ, ಮತ್ತು ರಾಜಕೀಯ ನ್ಯಾಯ, ಅಭಿವ್ಯಕ್ತಿ, ನಂಬಿಕೆ ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸಂವಿಧಾನದಲ್ಲಿ ಪ್ರಬುಧ್ವವಾಗಿ ನೀಡಿದ್ದಾರೆ. ಆದಾಗ್ಯೂ ಕೆಲವರು ಸಂವಿಧಾನ ಬದಲಾವಣೆ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಇಂಥ ವ್ಯಕ್ತಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ಅಹಿಂದ ಮುಖಂಡÀ ಮಲ್ಲು ಬಿದರಿ, ತಿಕೋಟಾ ತಾಲೂಕು ಪ್ರಧಾನ ಸಂಚಾಲಕ ಚಂದ್ರಶೇಖರ ಮಲಕಣ್ಣವರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಶೋಷಿತ ಸಮುದಾಯಗಳಿಗೆ ಹನ್ನೆರಡೆನೆಯ ಶತಮಾನದಲ್ಲಿ ಬಸವಣ್ಣನವರು ಲಿಂಗದೀಕ್ಷೆಯನ್ನು ನೀಡಿದ್ದು, ಅಸ್ಪøಶ್ಯ ಐದು ಜನಾಂಗಗಳಿಗೆ ಅಂದಿನ ಅಸ್ಪøಶ್ಯರು ಇಂದಿನ ಲಿಂಗಾಯತರು ಜಾತಿ ತಾರತಮ್ಯ ಮಾಡದೇ ಮಾನವರೆಲ್ಲಾ ಒಂದು ಎಂದು ಒಗ್ಗೂಡಿ ಹೋಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಿನೋದ ನಾಟೀಕಾರ, ರಾಘವೇಂದ್ರ ಕಾಂಬಳೆ, ಲಕ್ಷ್ಮಣ ಘೊಣಸಗಿ, ಖಜಾಂಚಿ ಜಗದೀಶ ಶಿಂಗೆ ಊರಿನ ಹಿರಿಯರಾದ ಮಂಜುನಾಥ ಕಾಂಬಳೆ, ಚಂದ್ರಶೇಖರ ಘೋಣಸಗಿ, ಆನಂದ ಘೋಣಸಗಿ ಮುಂತಾದವರು ಇದ್ದರು.