ಹಿಂದುಳಿದ ವರ್ಗಗಳ ಮೆಟ್ರೀಕ ನಂತರ ವಸತಿ ನಿಲಯಗಳಿಗೆ ಸೌಲಭ್ಯ ಒದಗಿಸಲು ಮನವಿ
ಇಂಡಿ: ಮಾ.17:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಅವ್ಯವಸ್ಥೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮವಾದ ತಾಲೂಕಾ ಸಮಿತಿ ಇಂಡಿ ತಾಲೂಕಾ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ವತಿಯಿಂದ ಕಂದಾಯ ಉಪವಿಭಾಗಾಧಿಕಾರಿ ಇವರಿಗೆ ಮನವಿ ಸಲ್ಲಿಸಿದರು.
ಇಂಡಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯಗಳು ಅವ್ಯವಸ್ಥೆಯ ಆಗರವಾಗಿವೆ. ಇಂಡಿ ಪಟ್ಟಣದ ವಸತಿ ನಿಲಯದ ವಾರ್ಡನ್ ವಿಧ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ .ವಸತಿ ನಿಲಯದಲ್ಲಿ ಶೌಚಾಲಯಗಳು ಸ್ವಚ್ಚತೆ ಇಲ್ಲ ಹೀಗಾಗಿ ಶೌಚಾಲಯ ಸ್ವಚ್ಛತೆ ವಿಧ್ಯಾರ್ಥಿಗಳೆ ಮಾಡಬೇಕು. ಕುಡಿಯುವ ನೀರಿನ ತೊಟ್ಟಿಗಳನ್ನು ವಿಧ್ಯಾರ್ಥಿಗಳೆ ಸುಚ್ಚಿಗೋಳಿಸಬೇಕು, ವಿಧ್ಯಾರ್ಥಿಗಳಿಗೆ ಸರಿಯಾದ ಆಹಾರ ನೀಡುತ್ತಿಲ್ಲ ,ಕೋಳೆತ ಬಾಳೆಹಣ್ಣು ನೀಡುತ್ತಿದ್ದು ಗ್ರಂಥಾಲಯ ಇದ್ದರೂ ಕೂಡಾ ಪುಸ್ತಕಗಳ ಕೊರತೆ ಇದೆ. ಶೌಚಾಲಯಕ್ಕೆ ಬಾಗಿಲು ಇಲ್ಲ ಈ ಎಲ್ಲಾ ಬೇಡಿಕೆಗಳನ್ನು ಕೂಡಲೆ ಇಡೇರಿಸಬೇಕು ಒಂದು ವೇಳೆ ಇಡೇರಿಸದಿದ್ದರೆ ಮಿನಿ ವಿಧಾನಸೌಧಾ ಆಡಳಿತ ಕಛೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಾಲೂಕಾ ಸಂಚಾಲಕ ವಿಕಾಸ ಗುಡಮಿ ಎಚ್ಚರಿಕೆ ನೀಡಿದ್ದಾರೆ.