ದ್ವಿತಳಿ ಹುಳು ಬೆಳೆಸುವುದರಿಂದ ಗುಣಮಟ್ಟದ ಅಧಿಕ ರೇಷ್ಮೆ ಇಳುವರಿ ಪಡೆಯಲು ಸಾಧ್ಯ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.17:-ರೈತರು ದ್ವಿತಳಿ ಹುಳು ಬೆಳೆಸುವುದರಿಂದ ಗುಣಮಟ್ಟದ ಅಧಿಕ ರೇಷ್ಮೆ ಇಳುವರಿ ಪಡೆಯಲು ಸಾದ್ಯ ಎಂದು ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿ ಎಲ್.ಕುಸುಮಾ ಹೇಳಿದರು.
ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ?ರೇಷ್ಮೆ ಕೃಷಿ ? ನೂತನ ಸಾಕಾಣಿಕಾ ಪದ್ದತಿಗಳು ಮತ್ತು ಮಾರುಕಟ್ಟೆ ವ್ಯವಸ್ಥೆ? ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಈಅ1 x ಈಅ2 (ದ್ವಿತಳಿ) ಬೆಳೆಯುವುದರಿಂದ ಗುಣಮಟ್ಟದ ಗೂಡು ಉತ್ಪಾದನೆ ಮಾಡಿ ರೈತರು ಹೆಚ್ಚು ಲಾಭಗಳಿಸಬಹುದು. ರೈತರು ಗಿ1 ತಳಿ ಹಿಪ್ಪನೇರಳೆ ಗಿಡಗಳನ್ನು ಬೆಳೆಯಬೇಕು. ಹುಳು ಸಾಕಾಣಿಕೆ ಮನೆ, ಸುತ್ತಮುತ್ತಲಿನ ಪರಿಸರ ಮತ್ತು ಸಾಮಗ್ರಿಗಳ ಸೋಂಕು ನಿವಾರಣೆ ಹಾಗೂ ನೈರ್ಮಲ್ಯವನ್ನು ಕಾಪಾಡುವುದು ರೋಗಗಳು ಬರದಂತೆ ತಡೆಗಟ್ಟಲು ಬಹಳ ಮುಖ್ಯ ಕ್ರಮಗಳಾಗಿವೆ ಎಂದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರಾದ ಡಾ.ಯೋಗೇಶ್ ಜಿ.ಹೆಚ್ ಅವರು ಮಾತನಾಡಿ, ರೇಷ್ಮೆ ತ್ಯಾಜ್ಯಗಳನ್ನು ಕಾಂಪೆÇೀಸ್ಟ್ ಅಥವಾ ಎರೆಹುಳು ಗೊಬ್ಬರವಾಗಿ ಪರಿವರ್ತಿಸಿ ಮರುಬಳಕೆ ಮಾಡುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಲು ರೈತರು ಮುಂದಾಗಬೇಕು ಎಂದರು ಹೇಳಿದರು.
ರೇಷ್ಮೆ ತಜ್ಞೆಯಾದ ಡಾ.ಮೇಘಲಾದೇವಿ ಅವರು ಮಾತನಾಡಿ ರೇಷ್ಮೆ ಬೆಳೆ ಮತ್ತು ಹುಳುಗಳಿಗೆ ಬರುವ ರೋಗ ಮತ್ತು ಕೀಟಗಳ ನಿರ್ವಹಣೆಗೆ ಪರತಂತ್ರ ಜೀವಿಗಳನ್ನು ಬಳಸುವುದರ ಜೊತೆಗೆ ಸಮಗ್ರ ಹತೋಟಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ವೃಷಬೇಂದ್ರ ಅವರು ಮಾತನಾಡಿ ರೇಷ್ಮೆ ಇಲಾಖೆಯಿಂದ ನರೇಗಾ ಯೋಜನೆಯಡಿ ರೇಷ್ಮೆ ಕೃಷಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಲಾಗುತ್ತಿದೆ. ರೈತರು ಟ್ರೆಂಚಿoಗ್ ಮತ್ತು ಮಲ್ಚಿಂಗ್ ಪದ್ದತಿಯಲ್ಲಿ ರೇಷ್ಮೆ ಬೆಳೆಯಲು ಮುಂದಾಗಬೇಕು. ರೇಷ್ಮೆ ಮನೆ ನಿರ್ಮಿಸಲು ಮತ್ತು ಇತರೆ ಪರಿಕರಗಳನ್ನು ಸಹಾಯಧನದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶೆಟ್ಟನಾಯಕನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಎಸ್.ಬಿ. ಸ್ವಾಮಿ ಅವರು ಮಾತನಾಡಿ ತಮ್ಮ 4 ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆದು ಪ್ರತಿ ಬ್ಯಾಚ್‍ನಲ್ಲಿ 300 ಮೊಟ್ಟೆ ಸಾಕಾಣಿಕೆ ಮಾಡುವ ಮೂಲಕ ಉತ್ತಮ ಆದಾಯಗಳಿಸುತ್ತಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊoಡರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ವಜ್ರೇಶ್ವರಿ ಎಸ್.ಕುಲಕರ್ಣಿ, ಕೃಷಿ ಅಧಿಕಾರಿ ಮಾಲತಿ ಎಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.