ಪಂಚ ಗ್ಯಾರಂಟಿ ಬಡವರ ದೀನದುರ್ಬಲರ ಯೋಜನೆ ಫಲಾನುಭವಿಗಳಿಗೆ ತಲುಪುವಂತೆ ಕ್ರಮ: ಪ್ರಶಾಂತ ಕಾಳೆ
ಇಂಡಿ:ಮಾ.17: ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಕುರಿತು ತಾಲೂಕಾ ಅಧ್ಯಕ್ಷ .ಉಪಾಧ್ಯಕ್ಷ ಸದಸ್ಯರುಗಳ ಕಾರ್ಯದರ್ಶಿಗಳ ನೇಮಕಾತಿ ಆದೇಶ ಪ್ರತಿ ಇಂದು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನಡೆಯಿತು.
ಈ ಸಂದರ್ಬದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ ಕರ್ನಾಟಕ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ ಶಿವುಕುಮಾರ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಬದ್ದತೆಯಿಂದ ನಡೆದುಕೊಂಡಿದ್ದಾರೆ. ಕೆವಲ ಅಧ್ಯಕ್ಷ ಉಪಾಧ್ಯಕ್ಷ ಪದಾಧಿಕಾರಿಗಳಾಗಿ ಆದೇಶ ಪ್ರತಿ ತಗೆದುಕೊಂಡು ಕುಳಿತರೆ ಸಾಲದು ಇದು ಬಡವರ ದೀನದುರ್ಬಲರ ನೊಂದವರ ಪರವಾದ ಯೋಜನೆಯಾಗಿದ್ದು ತಾಲೂಕಿನಾದ್ಯೆಂತ ಸರಕಾರದ ಯೋಜನೆ ಸಮರ್ಪಕವಾಗಿ ಫಲಾನುಭವಿಗಳಿಗೆ ತುಲುಪುತ್ತಿರುವ ಬಗ್ಗೆ ಗಮನ ಹರಿಸಬೇಕಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಷಯ ಮಗ ಆನಾರೋಗ್ಯದ ಕೊನೆಯ ದಿನಗಳಲ್ಲಿ ತನ್ನ ವೃದ್ದ ತಾಯಿಗೆ ಹೇಳಿರುವ ಮಾತು ಗಮನಿಸಿರಬಹುದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಾಡಿದ ಯೋಜನೆಗಳಲ್ಲಿ 2 ಸಾವಿರ ರೂ. ಗೃಹಲಕ್ಷ್ಮೀ ಯೋಜನೆ ಬಳಕೆ ಮಾಡಿಕೊಂಡು ಜಿವನ ಸಾಗಿಸು ಎಂದು ತಾಯಿಗೆ ಮಗ ಹೇಳಿರುವ ಮಾತು ನೋಡಿದರೆ ಈ ಯೋಜನೆಯಿಂದ ನೊಂದ, ಬೆಂದ ಕುಟುಂಬಗಳಿಗೆ ಆಸರೆಯಾಗಿದೆ ಎಂದು ಅರ್ಥ ಆದ್ದರಿಂದ ಸರಕಾರದ ಯೋಜನೆ ಯಶಸ್ವೀಯಾಗಿಸಲು ಕ್ರಮಕೈಗೊಳ್ಳೋಣ ಎಂದು ಕರೆ ನೀಡಿದರು.
ಗ್ಯಾರಂಟಿ ಯೋಜನೆಗಳ ಮೇಲ್ವೀಚಾರಣೆಗಾಗಿ ಜಿಲ್ಲಾ ಮಟ್ಟದ, ತಾಲೂಕಾ ಮಟ್ಟದ ,ಬಿ,ಬಿ.ಎಂ.ಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಚಿಸಲು ಸರಕಾರ ಆದೇಶ ಮಾಡಿದೆ. ಈ ಯೋಜನೆಗಳ ಲಾಭ ಅರ್ಹಫಲಾನುಭವಿಗಳು ಪಡೆಯುತ್ತಿರುವ ಬಗ್ಗೆ ನೀಗಾವಹಿಸಲು ತಲುಪದೆ ಇದ್ದರೆ ಸಹಕಾರ ಮಾಡಲು ಅನುಷ್ಠಾನ ಯೋಜನೆ ಸಮಿತಿ ಮಾಡಲಾಗಿದ್ದು ಸದಾ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಿ ಶಾಸಕ ಯಶವಂತರಾಯಗೌಡ ಪಾಟೀಲರ ನಂಬಿಕೆ ವಿಶ್ವಾಸಕ್ಕೆ ಭಾಜನರಾಗೋಣ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮೀತಿ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ ಹೇಳಿದರು.
ಸರಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಪಂಚ ಯೋಜನೆಗಳು ಕಾರ್ಯರೂಪಕ್ಕೆ ತರಲು ಕ್ರಮಕೈಗೊಳ್ಳಬೇಕಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮೇಲ್ವೀಚಾರಣೆಗಾಗಿ ರಾಜ್ಯ ಮಟ್ಟ, ಜಿಲ್ಲಾಮಟ್ಟ ,ತಾಲೂಕಾಮಟ್ಟ ಬಿ.ಬಿ.ಎಂಪಿ. ಮಟ್ಟದಲ್ಲಿ ಅನುಷ್ಠಾನ ಸಮಿತಿ ಸರಕಾರ ಮಾಡಲಾಗಿದ್ದು ತಾಲೂಕಾ ಸಮಿತಿಯ ಕಾರ್ಯದರ್ಶಿಯಾಗಿ ಆಯಾ ತಾ.ಪಂ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಒಟ್ಟಾರೆ ಶಕ್ತಿ,ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವ ನಿಧಿ ಯೋಜನೆಗಳು ಈಗಾಗಲೇ ಜಾರಿಯಾಗಿದ್ದು ಸದರಿ ಗ್ಯಾರಂಟಿ ಯೋಜನೆ ಲಾಭ ಅರ್ಹ ಫಲಾನುಭವಿಗಗಳಿಗೆ ಪರಿಣಾಮಕಾರಿ ಅನುಷ್ಠಾನ ಆಗುವಂತೆ ನೋಡಿಕೊಳ್ಳುವುದು ನಮ್ಮ, ನಿಮ್ಮೇಲ್ಲರ ಕರ್ತವ್ಯ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ ಮಾತನಾಡಿದರು.
ತಾ.ಪಂ ನರೇಗಾ ಯೋಜನಾಧಿಕಾರಿ ಸಂಜಯ ಖಡೇಗೆಕರ್ ಮಾತನಾಡಿ ಪ್ರಮುಖ 5 ಇಲಾಖೆಗಳು ಕಾರ್ಯನಿರ್ವಹಿಸುತ್ತವೆ. ಗ್ಯಾರಂಟಿ ಯೋಜನೆ ಸೌಲಭ್ಯಗಳು ಕೊರತೆಯಾಗದಂತೆ ಅಧ್ಯಕ್ಷ ,ಉಪಾಧ್ಯಕ್ಷ ,ಸಮಿತಿಯ ಸದಸ್ಯರಾದಿಯಾಗಿ ಕೆಲಸ ಮಾಡಬೇಕು, ಜನರ ಕುಂದು ಕೊರತೆಗಳು ಕಂಡು ಹಿಡಿದು ಯೋಜನೆಗಳು ಮುಟ್ಟಿಸುವಲ್ಲಿ ಕಾರ್ಯಕ್ರಮವೃತ್ತರಾಗಬೇಕು. ಸರಕಾರದ ಯೋಜನೆ ಅನುಷ್ಠಾನಗೋಳಿಸಲು ಎಲ್ಲರೂ ಶ್ರಮಿಸೋಣ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ ಸದಸ್ಯರಾದ ಮಹೇಶ ಹೊನ್ನಬಿಂದಗಿ, ಸಂಜೀವಕುಮಾರ ನಾಯ್ಕೋಡಿ, ಸತೀಶ ಹತ್ತಿ, ನಿರ್ಮಲ ತಳಕೇರಿ, ಶೈಲಜಾ ಜಾಧವ, ಶಿಶಿಕುಮಾರ ಮಠ, ಸಿದ್ದು ಕಟ್ಟಿಮನಿ, ಪ್ರಭು ಕುಂಬಾರ, ಸಂಕೇತ ಜ್ಯೋಶಿ, ಮಲ್ಲೇಶಿ ಭೋಸಗಿ, ರುದ್ರಗೌಡ ಆಲಗೊಂಡ, ಭೀಮರಾಯ ಮೇತ್ರಿ, ಸೋಮಣ್ಣಾ ಪ್ರಚಂಡಿ, ಅಜೀತ ಜೀರಗೆ, ತಾ.ಪಂ ಕಾರ್ಯನಿರ್ವಾಕ ಅಧಿಕಾರಿ ನೀಲಗಂಗಾ ಬಬಲಾದ ,ಯೋಜನಾಧಿಕಾರಿ ನಂದೀಪ ಉಪಸ್ಥಿತರಿದ್ದರು.