ಭೃಂಗಿಮಠ ಜನ ಕಲ್ಯಾಣಕ್ಕಾಗಿ ಹೋರಾಡುವ ಸಂಚಾರಿಮಠ: ನ್ಯಾಯವಾದಿ ಮಂಜುನಾಥ ಶ್ಲಾಘನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೮: ಭೃಂಗಿಮಠ ವಕೀಲರು ಕೇವಲ ವಕೀಲರಾಗದೇ ಸರ್ವರೊಡನೆ ಬೆರೆತು ಹೋರಾಡುವ ಸಂಚಾರಿ ಮಠವಾಗಿದೆ ಎಂದು ನ್ಯಾಯವಾದಿ ಮಂಜುನಾಥ ಕೊಡಗಾನೂರ ಬಣ್ಣಿಸಿದರು.
ಜಲನಗರದಲ್ಲಿ ಭೃಂಗಿಮಠ ಕ್ರಿಯಾತ್ಮಕ ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗೊಮಠ ಅವರಿಗೆ ಹುನಗುಂದ ವಕೀಲರ ಪರವಾಗಿ ಸನ್ಮಾನಿಸಿ ಮಾತನಾಡುತ್ತಿದ್ದರು.
ಚರಗೋತ್ಸವ, ಊಟಕ್ಕೆ ಬನ್ನಿ ಅಡ್ಡಣಗಿ ತನ್ನಿ, ಕವಿಪೀಠ, ಜನರಿಗಾಗಿ ಜಾನಪದ, ಸಾಯಬೇಡ ಓ ರೈತ ಕಾಪಾಡುವೆ ನಿಮ್ಮ ಹಿತ, ಸಂಚಾರಿ ಕವಿಗೋಷ್ಠಿ, ಸಂಚಾರಿ ಸಮ್ಮಾನ, ಅನಾಥರಿಗೆ ಆಸರೆ, ಮನೆ ಮನಕ್ಕೂ ಕಾನೂನು ಗೋಷ್ಠಿ, ಬ್ರಾಡ್ಗೇಜ್ ಚಳವಳಿ, ಬಿ ಸ್ಕೀಮ್ ನಿರಾವರಿ ಹೋರಾಟ, ಪುಸ್ತಕ ತುಲಾಭಾರ, ಪುಸ್ತಕ ಜೋಳಿಗೆ ಯಾತ್ರೆ, ಶರಣರ ಕ್ರಾಂತಿ ವಿಶ್ವಕ್ಕೆ ಶಾಂತಿ ಹೀಗೆ ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭೃಂಗಿಮಠರು ಒಬ್ಬ ಕ್ರಿಯಾತ್ಮಕ ವ್ಯಕ್ತಿ ಮತ್ತು ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ ಎಂದು ತಿಳಿಸಿದರು.
ಜನರೊಡನೇ ಬೆರೆಯುವ ಸ್ನೇಹಜೀವಿಯೂ ಆಗಿರುವ ಇವರ ಸಾಧನೆಗೆ ನೇಪಾಳದ ಸಮತಾ ಸಾಹಿತ್ಯ ಪ್ರತೋಷ್ಠಾನ ಗುರುತಿಸಿರುವುದು ಕನ್ನಡದವರಾದ ನಮಗೆ ಹೆಮ್ಮೆ ಎಂದರು.
ನ್ಯಾಯವಾದಿ ಗಿರೀಶ ಕಟಂಬ್ಲಿ ಅವರು ಮಾತನಾಡಿ, ಯುವಕರಿಗೆ ಸದಾ ಪ್ರೇರಣೆ ನೀಡುವ ಭೃಂಗಿಮಠರು ಯುವ ವಕೀಲರಿಗೆ ನಡೆದಾಡುವ ಡಿಕ್ಷನರಿ ಆಗಿದ್ದಾರೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿಯ ಅವರ ಸೇವೆ ಇನ್ಮು ಅಗತ್ಯವಿದೆ. ಸದಾ ಒಂದಿಲ್ಲಾ ಒಂದು ಕಾರ್ಯಕ್ರಮದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವ ಇವರ ವ್ಯಕ್ತಿತ್ವ ನಮ್ಮಂತಹವರಿಗೆ ಆದರ್ಶವಾಗಿದೆ. ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಅವರ ವಿಶಿಷ್ಟ ಕೆಲಸ ಸಮಾಜಕ್ಕೆ ಮಾದರಿಯಾಗಿದೆ, ವಿವಿಧ ರಾಜ್ಯಗಳಲ್ಲಿ ವಕಾಲತ್ತು ನಡೆಸಿರುವ ಇವರು ವಿವಿಧೆಡೆ ಕನ್ನಡದ ಕಂಪು ಹರಡಿಸಿದ್ದಾರೆ. ಗೋವಾ ಟು ಗೋಹಾಟಿ ನೀರಿಗಾಗಿ ಚಳವಳಿ ಮಾಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಹಿರಿಯ ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ, ಕಾಯಕವೇ ಕೈಲಾಸ, ಅಹಿಂಸಾ ಪಾಲನೆ, ಶಾಂತಿ ಮಂತ್ರ, ಬದುಕಲ್ಲಿ ಪರೋಪಕಾರ ಇತ್ಯಾದಿ ಮೌಲ್ಯಗಳನ್ಮು ಪಾಲಿಸಿ ಸಮಾಜ ಸೇವೆ ಮಾಡಬೇಕು. ಮನುಜರು ಸ್ವಾರ್ಥಿಗಳಾಗದೇ ನಿಸ್ವಾರ್ಥ ಕೆಲಸ ಮಾಡುತ್ತಲೇ ಇರಬೇಕು. ಅದುವೆ ಜೀವನಕ್ಕೆ ಉತ್ತಮ ಹೊಳಪು ಕೊಡುತ್ತದೆ. ಸದಾ ಗುರು, ಹಿರಿಯರನ್ನು ಗೌರವಿಸುವ ಸಂಸ್ಕಾರ ಉಳಿಸಿ ಬೆಳಸಬೇಕು. ನಮ್ಮ ಮಾತು ಕೃತಿ ಒಂದಾಗಿರಬೇಕು. ಮಾನವೀಯತೆಗಿಂತ ಶ್ರೇಷ್ಠವಾದದ್ದು ಈ ಜಗತ್ತಿನಲ್ಲಿ ಬೇರೇನೂ ಇಲ್ಲ. ಆದ್ದರಿಂದ ಇಂದಿನ ಯುವಕರಿಗೆ ಮಾನವೀಯತೆ ತರಬೇತಿ ಕೊಡಬೇಕಾದ ಅನಿವಾರ್ಯತೆ ಇದೆ ಎಂದರು.
ಜಗದೀಶ ಯಾತಗಿರಿ ಸ್ಬಾಗತಿಸಿದರು. ಭೂಸನೂರ ಮಠ ವಂದಿಸಿದರು.