1,819.20 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಿ.ಎಂ. ಚಾಲನೆ
ಕಲಬುರಗಿ:ಸೆ.17: ಕಲಬುರಗಿ ನಗರದ ಪೆÇಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಾರಂಭದಲ್ಲಿ ಕಲಬುರಗಿ ಜಿಲ್ಲೆಯ 1,541.33 ಕೋಟಿ ರೂ. ಸೇರಿದಂತೆ ಕಲ್ಯಾಣ ಕರ್ನಾಟಕ ವಿಭಾಗದ 1,819.20 ಕೋಟಿ ರೂ. ಬೃಹತ್ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಇದಲ್ಲದೆ ಕೃಷಿ ಇಲಾಖೆಯಿಂದ ಇದಲ್ಲದೆ 2023-24ನೇ ಸಾಲಿನ ಹಾರ್ವೆಸ್ಟರ್ ಹಬ್ ಯೋಜನೆಯಡಿ ಶೇ.100ರಷ್ಟು ಸಹಾಯಧನದಂತೆ ಕಲಬುರಗಿ ಜಿಲ್ಲೆಯ 6 ಜನ ಫಲಾನುಭವಿಗಳಿಗೆ 2.59 ಕೋಟಿ ರೂ. ಮೊತ್ತದ ಕಬ್ಬು ಕಟಾವು ಯಂತ್ರಗಳನ್ನು ಸಹ ವಿತರಿಸಲಾಯಿತು.