ಕವಿ ಡಾ. ಸಿದ್ದಲಿಂಗಯ್ಯ ರಾಷ್ಟç ಕವಿಯಾಗಬೇಕಿತ್ತು : ಹಾಸಿಂಪೀರ
ಸAಜೆವಾಣಿ ವಾರ್ತೆ,
ವಿಜಯಪುರ.ಸೆ.೧೮: ಡಾ. ಸಿದ್ಧಲಿಂಗಯ್ಯ ಕಾವ್ಯ, ವಿಮರ್ಶಕ, ನಾಟಕ, ಪ್ರಬಂಧ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಕವಿ ಸಿದ್ದಲಿಂಗಯ್ಯ ರಾಷ್ಟ್ರ ಕವಿಗಳ ಸಾಲಿನಲ್ಲಿ ಸೇರಬೇಕಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು
ಜೈ ಭೀಮ ಸೇನಾ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸೋಮವಾರ ಜರುಗಿದ ಡಾ. ಸಿದ್ದಲಿಂಗಯ್ಯನವರ ನಾಲ್ಕನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ನುಡಿನಮನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ. ಸಿದ್ದಲಿಂಗಯ್ಯ ಅವರು ಶ್ರವಣಬೆಳಗೊಳದಲ್ಲಿ ನಡೆದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರೊಂದಿಗೆ ವಿಜಯಪುರದಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅದೃಷ್ಟ ನನ್ನದು. ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರ ಚಿಂತನೆಗಳು ಇಪ್ಪತ್ತೊಂದನೆಯ ಶತಮಾನದ ಯುವಕರಿಗೆ ಸ್ಪೂರ್ತಿದಾಯಕವಾಗಿವೆ ಎಂದರು.
ಸಮಾರಂಭವನ್ನು ಕರ್ನಾಟಕ ರಾಜ್ಯ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷÀ ಶೇಷರಾವ ಮಾನೆ ಉದ್ಘಾಟಿಸಿ ಮಾತನಾಡಿ, ಕವಿ ಡಾ. ಸಿದ್ದಲಿಂಗಯ್ಯ ರಾಜ್ಯದ ಅಪರೂಪದ ಸಾಹಿತಿಯಾಗಿದ್ದರು. ಯಾರಿಗೆ ಬಂತು, ಎಲ್ಲಿಗೆ ಬಂತು ಸ್ವಾತಂತ್ರ‍್ಯ ಹಾಗು ಹೊಲೆಮಾದಿಗರ ಹಾಡು ಇವು ಎರಡು ಹಾಡುಗಳು ರಾಜ್ಯದಲ್ಲಿ ಅತ್ಯಂತ ಪ್ರಭಾವ ಬೀರಿದ್ದವು. ಗ್ರಾಮದೇವತೆಗಳು ವಿಷಯ ಕುರಿತು ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದರು. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿ, ಡಾ. ಸಿದ್ದಲಿಂಗಯ್ಯನವರು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯ ರಚಿಸಿ ಜನಪ್ರಿಯರಾಗಿದ್ದರು. ಡಾ ಅಂಬೇಡ್ಕರ್, ಪೆರಿಯಾರ, ವಸುದೇವ ಭೂಪಾಲ, ಲೋಹಿಯಾ ಮುಂತಾದವರ ವಿಚಾರಗಳಿಂದ ಆಕರ್ಷಿಸಿತರಾಗಿದ್ದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಮಾತನಾಡಿ, ಏಕಲವ್ಯ ನಾಟಕ ಪ್ರಸಿದ್ಧಿ ಪಡೆದುಕೊಂಡಿತು. ರಾಜ್ಯೋತ್ಸವ ಪ್ರಶಸ್ತಿ, ಡಾ: ಅಂಬೇಡ್ಕರ ಶತಮಾನೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ಹೀಗೆ ಸಿದ್ದಲಿಂಗಯ್ಯನವರು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ನಾಡಿನ ಕೀರ್ತಿ ಬೆಳಗಿಸಿದರು ಎಂದರು.
ಮುಖ್ಯ ಅತಿಥಿಗಳಾದ ಅಲಿಸಾಬ ಖಡಕೆ, ಡಾ. ಸುರೇಖಾ ರಾಠೋಡ, ಸುಭಾಷ ನಾಯ್ಕೋಡಿ, ರಘನಾಥ ಬಾಣಿಕೋಲ ಮಾತನಾಡಿದರು.
ಕಾರ್ಯಕ್ರಮ ಸಂಘಟಕ ಸಂತೋಷ ಭಾಸ್ಕರ ಎಲ್ಲರಿಗೂ ಗೌರವಿಸಿ ಮಾತನಾಡಿದರು. ಪ್ರೊ ನಾರಾಯಣ ಪವಾರ, ದೇವದಾಸ ತೊರವಿ, ಯಶವಂತ ದೊಡಮನಿ, ಬಸವರಾಜ ಹಾದಿಮನಿ, ಸತೀಶ ಗುಡ್ಡೋಡಗಿ, ಪರುಶರಾಮ ಮಾದರ, ರಮೇಶ ಕರಾಬಿ, ಅಶೋಕ ನಾಯ್ಕೋಡಿ, ಪರಸಪ್ಪ ವಾಲಿಕಾರ, ಅಶೋಕ ನಂದಿಹಾಳ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಧಕರಾದ ಲಸವರಾಜ ಲಗಳಿ, ಇರ್ಪಾನ ಬೀಳಗಿ, ರವಿ ಬಿಸನಾಳ, ಸಾಗರ ಕಾಂಬಳೆ, ಡಾ. ಮಹಿಬೂಬ ಮಾಲಬಾವಡಿ, ಡಾ. ಸಿದ್ದು ಕಲ್ಲೂರ, ಲಿಂಗರಾಜ ಬಳ್ಳಾರಿ, ಜೈ ಭೀಮ ನಾಯ್ಕೋಡಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.