ಚಿದಂಬರ ಸೇವಾ ಸಮಿತಿ ಅಧ್ಯಕ್ಷರಾಗಿ ಲಕ್ಷಿö್ಮಕಾಂತ ಕುಲಕರ್ಣಿ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೮: ವಿಜಯಪುರದ ಶ್ರೀ ಶಿವ ಚಿದಂಬರ ದೇವಾಲಯದ ಶ್ರೀ ಚಿದಂಬರ ಸೇವಾ ಸಮಿತಿ ನೂತನ ಅಧ್ಯಕ್ಷರಾಗಿ ಲಕ್ಷಿö್ಮಕಾಂತ ಕುಲಕರ್ಣಿ, ಉಪಾಧ್ಯಕ್ಷರಾಗಿ ಅಂಬಾದಾಸ ಜೋಶಿ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಉಪಾಧ್ಯಕ್ಷ ಮಹಾದೇವ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸರ್ವಸಾಧಾರಣ ಸಭೆಯಲ್ಲಿ ಈ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಮಿತಿಯ ಕಾರ್ಯದರ್ಶಿಯಾಗಿ ವೆಂಕಟೇಶ ಜೋಶಿ ನಂದವಾಡಗಿ, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾಗಿ ಶಂಕರ್ ಭಟ್ ಅಗ್ನಿಹೋತ್ರಿ, ಚಿದಂಬರ ಪಾಟೀಲ, ವಿ.ಸಿ. ಕುಲಕರ್ಣಿ, ರಾಘವೇಂದ್ರ ಜೋಶಿ ಸಂಕನಾಳ, ವೆಂಕಟೇಶ ಜೋಶಿ ಹಡ್ಲಿಗೇರಿ, ಮುಕುಂದ ಹಂಗರಗಿ, ಸುಧೀಂದ್ರ ಕುಲಕರ್ಣಿ, ಚಿದಂಬರ ಜೋಶಿ, ವಿಜಯ ಜೋಶಿ, ಉಪೇಂದ್ರ ದೇಸಾಯಿ ಅವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪ್ರಾಣೇಶ ಕುಲಕರ್ಣಿ, ವಿಶ್ವನಾಥ ಕುಲಕರ್ಣಿ, ರಾಘವೇಂದ್ರ ಆಲಗೂರ, ಎ.ಡಿ. ದೇಶಪಾಂಡೆ, ಆರ್.ಬಿ. ಕುಲಕರ್ಣಿ, ಕೃಷ್ಣಾ ಜೋಶಿ, ರಾಮಚಂದ್ರ ಮೋರೆ, ಚಿದಂಬರ ಮಮದಾಪೂರ, ಯಲಗೂರೇಶ ದೇಶಪಾಂಡೆ, ಶ್ರೀಧರ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ನಾಗರಾಜ ಜೋಶಿ, ಅರವಿಂದ ಜೋಶಿ, ದೀಪಕ ಜೋಶಿ, ಉಮೇಶ ಜೋಶಿ, ಉದಯ ಔರಸಂಗ, ಪದ್ಮನಾಭ ಜೋಶಿ, ಮಾಲತೇಶ ಕುಲಕರ್ಣಿ, ಪವನ ಕುಲಕರ್ಣಿ, ಪವನ ಜೋಶಿ, ವಾಳ್ವೇಕರ ಹಾಗೂ ಸಮಸ್ತ ಸಮಾಜ ಮುಖಂಡರು ಉಪಸ್ಥಿತರಿದ್ದರು.