ಮೋದೀಜಿ ಅತ್ಯಂತ ಕ್ರಿಯಾಶೀಲ‌ ಪ್ರಧಾನಿ
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ.18;ದೇಶದ ದಕ್ಷ ಆಡಳಿತಗಾರ, ಸ್ಪಂದನ ಶೀಲ ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ 3ನೇ ಅವದಿಯಲ್ಲಿ ಯಶಸ್ವಿಯಾಗಿ 100 ದಿನ ಪೂರೈಸಿದ್ದು, 74ನೇ ಜನ್ಮದಿನವನ್ನೂ ಆಚರಿಸಿಕೊಳ್ಳುತ್ತಿರುವ ಅತ್ಯಂತ ಕ್ರಿಯಾಶೀಲ ಪ್ರಧಾನಿ ಮೋದಿಯಾಗಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಹೇಳಿದರು.ನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಶೀಘ್ರವೇ ಗುಣಮುಖ ರಾಗುವಂತೆ ಹಾರೈಸಿ ಮಾತನಾಡಿದ ಅವರು, ವಿಶಿಷ್ಟ ವ್ಯಕ್ತಿತ್ವದ ನರೇಂದ್ರ ಮೋದಿ ಸವಾಲುಗಳನ್ನು ಪರಿಹರಿಸುವ ಸರದಾರನಾಗಿದ್ದಾರೆ. ಇಂತಹ ನಾಯಕನನ್ನು ಪ್ರಧಾನಿಯಾಗಿ ಪಡೆದ ಭಾರತೀಯರು ಪುಣ್ಯವಂತರು ಎಂದರು.