ಆಯ್ದ ಮಕ್ಕಳಿಗೆ ಪ್ರಶಂಸನಾ ಪತ್ರ ಮತ್ತು ಪ್ರೋತ್ಸಾಹ ಧನ ವಿತರಣೆ
ಕಲಬುರಗಿ:ಸೆ.17: ಗಣಿತ ಕಲಿಕಾ ಆಂದೋಲನದ ಕಾರ್ಯಕ್ರಮದ ಅಡಿಯಲ್ಲಿ 2023-24ನೇ ಸಾಲಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಂತ ಆಯ್ದ ಮಕ್ಕಳಿಗೆ ಕಲ್ಯಾಣ ಕರ್ನಾಟಕದ ದಿನಾಚರಣೆಯಲ್ಲಿ ಶಾಸಕರು ಹಾಗೂ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಅವರಿಂದ ಪ್ರಶಂಸನಾ ಪತ್ರ ಮತ್ತು ಪ್ರೋತ್ಸಾಹ ಧನವನ್ನು ಅಕ್ಷರ ಫೌಂಡೇಶನ್ ವತಿಯಿಂದ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಕ್ಷರ ಫೌಂಡೇಶನ ನಿರ್ದೇಶಕರಾದ ವೈಜಯಂತಿ, ವಿಭಾಗೀಯ ಕ್ಷೇತ್ರ ಸಂಯೋಜಕ ಪ್ರದೀಪ ರೆಡ್ಡಿ, ಸಾವಿತ್ರಿ ಪಾಟೀಲ ಸೇರಿದಂತೆ ವಿಭಾಗೀಯ ಕ್ಷೇತ್ರ ಸಂಯೋಜಕರು ಅಕ್ಷರ ಫೌಂಡೇಶನ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆಯ್ದ ಶಾಲೆಗಳ ವಿದ್ಯಾರ್ಥಿನಿಯರು, ಪಾಲಕರು, ಮುಖ್ಯೋಪಾಧ್ಯಾಯರು ಪ್ರಶಂಸನಾ ಪತ್ರ ತೆಗೆದುಕೊಳ್ಳಲು ಆಯ್ದ ಶಾಲೆ ಮಕ್ಕಳು ಹಾಜರಿದ್ದರು. ಇದಕ್ಕೆ ಪೂರಕವಾಗಿ JSW and MG motor ಅವರಿಗೆ ಈ ಕಾರ್ಯಕ್ರಮದ ಮೂಲಕ ಧನ್ಯವಾದಗಳು ಅರ್ಪಿಸಲಾಯಿತು.