ಮಕ್ಕಳಿಗೆ ಮೊದಲನೇಗುರು ತಾಯಿ:ಮಸೂತಿಶ್ರೀ
ತಾಳಿಕೋಟೆ:ಮಾ.17: ಮಕ್ಕಳು ಗಂಡಿರಲಿ ಹೆಣ್ಣಿರಲಿ ಪಾಲಕರು ಅವರಿಗಾಗಿ ಆಸ್ತಿ ಅಂತಸ್ಥನ್ನು ಮಾಡುವ ಬದಲು ಮಕ್ಕಳನ್ನೇ ಅವರಿಗೆ ಒಳ್ಳೆಯ ವಿಧ್ಯಾ ಬುದ್ದಿಯನ್ನು ನೀಡಿ ಆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಇದರಿಂದ ಇಡೀ ಕುಟುಂಭವೇ ಒಳ್ಳೆಯ ಸಂಸ್ಕಾರಮಯ ಕುಟುಂಭವಾಗಿ ಬೆಳೆದು ಜನ್ಮ ಸಾರ್ಥಕವಾಗಲಿದೆ ಎಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಶನಿವಾರರಂದು ಜರುಗಿದ 6ನೇ ದಿನದಂದು ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ರಾಚಮ್ಮಳಿಗೆ ಮಗನಿಗೆ ಯಾವ ರೀತಿ ಬೆಳೆಸಬೇಕೆನ್ನುವ ಕುರಿತು ಗುರುಗಳು ತಿಳಿಸುತ್ತಾರೆ ಮೊದಲನೇಯ ಗುರು ತಾಯಿಯಾಗಿರುತ್ತಾಳೆ ಆಕೆ ಮಾತನಾಡಲು, ತಿನ್ನಲು, ಆಡಲು ಕಲಿಸುತ್ತಾಳೆ ತಂದೆಯ ಋಣ ತೀರಿಸಬಹುದು ಆದರೆ ತಾಯಿಯ ಋಣ ತೀರಿಸಲಾಗದೆಂದರು. ರಾಚಮ್ಮ ಮಗನಿಗೆ ಅಮೃತ ಮಾತನ್ನೇ ಕಲಿಸುತ್ತಾ ಆತನನ್ನು ತೋಟದಲ್ಲಿಯ ಹೂವುಗಳಂತೆ ರಕ್ಷಣಗೆ ಮುಂದಾಗುತ್ತಿದ್ದಳೆಂದು ಹೇಳಿದ ಶ್ರೀಗಳು ಯಾವ ರೀತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ತಾಯಿ ಜೀಜಾಬಾಯಿ ತಾನು ಇಟ್ಟ ಭವಾನಿದೇವಿಯ ಮೇಲಿನ ಭಕ್ತಿಯಂತೆ ಮಗನಿಗೂ ಕೂಡಾ ಕಲಿಸಿದ್ದರಿಂದ ಶಿವಾಜಿ ಮಹಾರಾಜರು ಕೂಡಾ ಅಂಬಾಭವಾನಿಯನ್ನು ಒಲಿಸಿಕೊಂಡು ದುಷ್ಟರನ್ನು ಸಂಹರಿಸಲು ದೇವಿ ಆತನಿಗೆ ಖಡ್ಗ ನೀಡಿದ್ದನ್ನು ವಿವರಿಸಿದ ಶ್ರೀಗಳು ಆ ಶಿವಾಜಿ ಮಹಾರಾಜರಲ್ಲಿದ್ದ ಭಕ್ತಿ ಕುರಿತು ವಿವರಿಸಿದರು.
ರಾಚಮ್ಮಳು ಮಗ ಗುರು ನಿರೂಪಾದೀಶ್ವರನ ಬಗ್ಗೆ ಶಾಲಾ ಗುರುಗಳ ಮುಂದೆ ಹೇಳಿದಾಗ ಮಗನನ್ನು ಚೆನ್ನಾಗಿ ಬೆಳೆಸಿ ಆತ ಮುಟ್ಟಿದರೆ ಇದ್ದ ರೋಗಗಳು ಹೋಗುತ್ತವೆ ಆತ ಸಾಮಾನ್ಯ ವ್ಯಕ್ತಿಯಾಗುವದಿಲ್ಲಾವೆಂದ ಗುರುಗಳ ಮಾತನ್ನು ಕೇಳಿದ ರಾಚಮ್ಮ ತಾನು ಮಾಡುವ ಪೂಜೆಯಂತೆ ಮಗನಿಗೂ ಕೂಟಾ ಕಲಿಸಿದ್ದರಿಂದ ಪೂಜೆಗೆ ಅಗತ್ಯವಿದ್ದ ಹೂವು ಪತ್ರಿಗಳನ್ನೂ ಸಹ ನಿರೂಪಾದೀಶ್ವರ ತಂದು ಕೊಡಲು ಆರಂಬಿಸಿದ ಅಂತಹ ಒಳ್ಳೆಯ ಸಂಸ್ಕಾರದಿಂದ ಬೆಳೆದ ಮಗ ಜ್ಞಾನ ಸಂಪತ್ತನ್ನು ಪಡೆದುಕೊಳ್ಳುವದು ಸಾಕಷ್ಟಿದೆ ಎಂದು ಹೇಳಿದ ಶ್ರೀಗಳು ತಾಯಿ ಗುಡಿಯಾದರೆ ತಂದೆ ಗೋಪುರವಿದ್ದಂತೆ ಅಲ್ಲಿ ಕಾಮ, ಕ್ರೋದ, ಮದ, ಮತ್ಸರವಿಲ್ಲಾ ಪರಮಾತ್ಮ ಒಳ್ಳೆಯದನ್ನು ಮಾಡಲು ಕಲಿಸಿಕೊಟ್ಟಿರುತ್ತಾನೆ ಕಾರಣ ಒಳ್ಳೆಯ ಕಾರ್ಯಗಳನ್ನೇ ಮಾಡಬೇಕೆಂದರು. ರಾಚಮ್ಮ ಮಗನಿಗೆ ಶಿವ ಪುರಾಣಗಳಂತಹ ಕಥೆ, ಕವನಗಳನ್ನು ಹೇಳುತ್ತಾ ಸಾಗುತ್ತಾಳೆ ಮಗ ದೊಡ್ಡವನಾಗುತ್ತಾನೆ ಹಂಪಿ ವಿರುಪಾಕ್ಷ ದೇವನಲ್ಲಿ ಕರೆದೊಯ್ದು ಆತನ ಜವಳ ತೆಗಿಸುತ್ತಾಳೆ ಅಂದು ಭಕ್ತರಿಗೆ ಪ್ರಸಾದ ಮಾಡಿ ನೀಡಲು ಕೇವಲ 5 ಚಪಾತಿಯನ್ನು ತಂದ ತಾಯಿ ರಾಚಮ್ಮ ಆ ಪ್ರಸಾದ ಸ್ವಿಕರಿಸಲು ನೂರಾರು ಜನ ಶ್ರೀಗಳು ಆಗಮಿಸುತ್ತಾರೆ ಆ ಚಪಾತಿಯ ಬುಟ್ಟಿಯನ್ನು ತೆಗೆದುಕೊಂಡ ಮಗ ನಿರೂಪಾದೀಶ್ವರ ಎಲ್ಲರಿಗೂ ಚಪಾತಿ ಹಂಚಿದರೂ ಆತನ ಪವಾಡ ದೃಶ್ಯದಿಂದ ಆ ತಟ್ಟೆಯಲ್ಲಿ ಪರಸು ಬಟ್ಟಲದಂತೆ 50 ಕ್ಕೂ ಮೇಲ್ಪಟ್ಟು ಚಪಾತಿಗಳು ಸಂಗ್ರಹವಾಗಿದ್ದವು ಎಂಬ ಭಕ್ತಿಯ ಪವಾಡ ಕುರಿತು ಶ್ರೀಗಳು ವಿವರಿಸಿದರು.
ತಂದೆ ಗುರುಲಿಂಗಯ್ಯನವರು ಮಗ ನಿರೂಪಾದೀಶ್ವರನಿಗೆ ತಪ್ಪಲದಡ್ಡಿಗೆ ಕರೆದುಕೊಂಡು ಹೋಗಿ ನಿರೂಪಾದೀಶ್ವರನಿಗೆ ಶಾಲೆಗೆ ಹೋಗಲು ಹೆಸರು ಹಚ್ಚುತ್ತಾರೆ ಆಡಂಬರದ ಆಸ್ತಿಯಾಗಿ ಬಧುಕಬಾರದು ಗುರುವಿನಿಂದ ದೊರೆಯುವ ಸಂಸ್ಕಾರದಂತೆ ಬಧುಕಬೇಕೆಂದರು. ಮಕ್ಕಳಿಗೆ ಕನ್ನಡ ಕಲಿಸಿ ಕಿಡಕಿ ಪನ್ನೋಳಗಿಯಂತೆ ಅನ್ಯ ಭಾಷೆಗಳಾಗಿವೆ ಕಾರಣ ತಲಬಾಗೀಲಿನಂತಿರುವ ಕನ್ನಡ ಭಾಷೆಯನ್ನು ಕಲಿಸಿ ಕನ್ನಡ ಬಳಿಸಿ ಎಂದು ಶ್ರೀಗಳು ನೆರೆದ ಭಕ್ತ ಸಮೂಹಕ್ಕೆ ತಿಳಿ ಹೇಳಿದರು. ನಿರೂಪಾದೀಶ್ವರ ಗುರುಲಿಂಗಯ್ಯ ಹಿರೇಮಠನಿಗೆ ಶಾಲೆಗೆ ಹೆಸರು ಹಚ್ಚಿ ಬಂದ ತಂದೆ ಆ ಸಮಯದಲ್ಲಿ ಶಿಕ್ಷಕರು ಕೇಳುತ್ತಾರೆ ಓಂ ಎಂದರೇನು ಎಂದು ಅದಕ್ಕೆ ಸಮರ್ಪಕ ಉತ್ತರ ನೀಡಿದ ನಿರೂಪಾದೀಶ್ವರ ಶಿಕ್ಷಕರಿಗೆ ಶಿವ ಸ್ವರೂಪಿ ಕಾಣಿಸಲಿಕ್ಕೆ ಹತ್ತುತ್ತಾನೆ ಶಿಕ್ಷಕರಿಗೆ ಮರಳಿ ಪಾಠ ಕಲಿಸಿದ ನಿರೂಪಾದೀಶ್ವರ ಶಿಕ್ಷಕನು ಅಕ್ಷರ ಹೆದ್ದಾರಿಯ ಮಹಾನ್‍ನಾಗಿರುತ್ತಾನೆ ಆತನಲ್ಲಿ ಜಾತಿಯತೆ ಎಂಬುದು ಇರಬಾರದು ಪ್ರಾಮಾಣಿಕತೆ ಎಂಬುದು ಇರಬೇಕು ರಾಜಕೀಯತೆ ಇರಬಾರದು ಸರಳ ವೇಷ ಭೂಷಣ ಇರಬೇಕು ಕಲಿತು ಕಲಿಸಬೇಕು ಸದ್ಭಾವನೆ ಎಂಬುದು ಇರಬೇಕು ಮಕ್ಕಳು ಹಾಡುವದರಲ್ಲಿ ದ್ವನಿ ಒಳಗೊಳ್ಳಬೇಕು ಎಲ್ಲ ಮಕ್ಕಳು ನನ್ನ ಮಕ್ಕಳೆಂದೇ ಶಿಕ್ಷಕನಾದವನು ಭಾವಿಸಬೇಕೆಂದು ತಿಳಿಸಿದ ನಿರೂಪಾದೀಶ್ವರ ಮಾತಿನಿಂದ ಶಿಕ್ಷಕರು ಬೆರಗಾಗುತ್ತಾರೆಂದು ಹೇಳಿದ ಶ್ರೀಗಳು ಮಕ್ಕಳಿಗೆ ಆಸ್ತಿ ಬೇಡಾ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ನೆರೆದ ಭಕ್ತ ಸಮೂಹಕ್ಕೆ ತಿಳಿ ಹೇಳಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.