ದೇವರು ಕೆಲಸ ಮಾಡುವವರಿಗೆ ಹೆಚ್ಚಿನ ಅವಕಾಶ ನೀಡುತ್ತಾನೆ: ಖೂಬಾ
ಬೀದರ್,ಮಾ.16-ದೇವರು ಕೆಲಸ ಮಾಡುವವರಿಗೆ ಹೆಚ್ಚಿನ ಅವಕಾಶಗಳು ಹಾಗೂ ಕೆಲಸ ಕೊಡುತ್ತಾನೆ. ಸುಮಾರು 30-40 ವರ್ಷಗಳ ಬೇಡಿಕೆಯಾಗಿದ್ದ ಬರೂರ್-ಮೇಟಲಾಕುಂಟಾದ ಮಧ್ಯೆ ಆರ್.ಯು.ಬಿ.
ರೈಲ್ವೆ ಕೆಳಸೇತುವೆ ನನ್ನಿಂದಾಗಬೇಕೆಂಬುದು ದೇವರ ಇಚ್ಛೆಯಿದ್ದಂತೆ ಕಾಣುತ್ತದೆ, ಆದ್ದರಿಂದ ನನ್ನ ಹತ್ತಾರು ಅಭಿವೃದ್ದಿ ಕಾರ್ಯಗಳೊಂದಿಗೆ ಇದೊಂದು ಮಹತ್ತರ ಕೆಲಸ ನನ್ನಿಂದ ಸಾಧ್ಯ ಮಾಡಿದ್ದಾನೆ ಎಂದು ಕೇಂದ್ರ ಸಚಿವ ಹಾಗೂ ಸಂಸದರಾದ ಭಗವಂತ ಖೂಬಾ ಹೇಳಿದರು.
ಶುಕ್ರವಾರ ರೂ.7.65ಕೋಟಿ ಅನುದಾನದಲ್ಲಿ ಮೇಟಲಾಕುಂಟಾ ಬಳಿ ಆರ್.ಯು.ಬಿ. ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮೋದಿ ಅವರಂತಹ ಪ್ರಧಾನಿ ಈ ದೇಶಕ್ಕೆ ಸಿಕ್ಕಿರುವುದು ಹಾಗೂ ನಾನು ಅವರ ಕೆಳಗೆ ಕೆಲಸ ಮಾಡುತ್ತಿರುವುದೇ ನನ್ನ ಈ ಎಲ್ಲಾ ಅಭಿವೃದ್ದಿ ಸಾಧನೆಗಳಿಗೆ ಸಾಧ್ಯವಾಗಿದೆ, 4 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಬೀದರ-ಕಲಬುರಗಿ ರೈಲ್ವೆ ಲೈನ್ ಸಹ ಪೂರ್ಣಗೊಳಿಸಿ, ಮೋದಿಯವರಿಂದ ಲೋಕಾರ್ಪಣೆಗೊಳಿಸಿದ್ದು ನಾನು, ಕಾಂಗ್ರೇಸ್ ನವರು ಜನರಿಗೆ ಆಸೆ ತೊರಿಸಿ, ಸುಳ್ಳು ಹೇಳಿ ನೆನೆಗುದಿಗೆ ಇಟ್ಟ ಎಲ್ಲಾ ಕಾಮಗಾರಿಗಳು ಬೀದರ ಲೋಕಸಭಾ ಕ್ಷೇತ್ರದಲ್ಲಿ ಪೂರ್ಣಗೋಳಿಸುತ್ತಿರುವುದು ನಿಮ್ಮ ಸಂಸದ ಈ ಭಗವಂತ ಖೂಬಾ ಎಂದರು.
ಮೋದಿ ಸರ್ಕಾರ ಎಲ್ಲರ ಹಿತ ಕಾಯುತ್ತದೆ, ಆದರೆ ಕಾಂಗ್ರೇಸ್ಸನವರು ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂರನ್ನು ದೂರ ಇಡುತ್ತದೆ ಎಂದೆಲ್ಲಾ ಅಪಪ್ರಚಾರ ಮಾಡುತ್ತಾರೆ, ಇವಾಗ ನಿರ್ಮಾಣವಾಗುತ್ತಿರುವ ಆರ್.ಯು.ಬಿ. ಸವಲತ್ತು ಪ್ರತಿಯೊಬ್ಬರು ಪಡೆದುಕೊಳ್ಳುತ್ತಾರೆ, ನಮ್ಮ ಸರ್ಕಾರದಿಂದ 4.5 ಕೋಟಿ ಮನೆಗಳು, ಜಲಜೀವನ ಮಿಷನ್ ಯೋಜನೆಯಡಿ ಕುಡಿಯುವ ನೀರು, ಹತ್ತಾರು ರೈಲ್ವೆಗಳು, 13 ರಾಷ್ಟ್ರೀಯ ಹೆದ್ದಾರಿಗಳು, ಪಾಸಪೋರ್ಟ, ಏರಪೋರ್ಟ, ಸೈನಿಕ ಶಾಲೆ, ಸಿಪೇಟ್ ಕಾಲೇಜು ಎಲ್ಲವೂ ಮಾಡಿಸಿದ್ದೇನೆ, ಪ್ರತಿಯೊಂದು ಜಾತಿ ಧರ್ಮದವರು ಇವುಗಳ ಸವಲತ್ತು ಪಡೆದುಕೊಳ್ಳೂತ್ತಿದ್ದಾರೆ, ನಾನು ಎಲ್ಲಾ ಪ್ರತಿಯೊಬ್ಬರ ಸಂಸದನಾಗಿರಲು ಇಷ್ಟಪಟ್ಟು ಎಲ್ಲರ ಅಭಿವೃದ್ದಿಗಾಗಿ ಹತ್ತು ವರ್ಷಗಳಿಂದ ದುಡಿಯುತ್ತಿದ್ದೇನೆ, ಅದರ ಫಲವಾಗಿ ಮೋದಿ ನನಗೆ ಮೂರನೆ ಬಾರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ, ತಮ್ಮೇಲ್ಲರ ಆಶೀರ್ವಾದ ಮುಂದೆ ಬರುವಚುನಾವಣೆಯಲ್ಲೂ ಇರಬೇಕು ಎಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು.
ಬರೂರ ಗ್ರಾಮದ ಹಿರಿಯರಾದ ದಯಾನಂದ ರೆಡ್ಡಿಯವರು ಮಾತನಾಡಿ, ಸುಮಾರು 40 ವರ್ಷಗಳ ಹಿಂದೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮ ತಂದೆ ಹಾಗೂ ನಮ್ಮ ಹಿರಿಯರು ತುಂಬಾ
ಶ್ರಮಪಟ್ಟಿದ್ದಾರೆ ಆದರೆ ಅದು ಸಾಧ್ಯವಾಗಿರಲಿಲ್ಲಾ, ಇವಾಗ ಸಂಸದರಾದ ಭಗವಂತ ಖೂಬಾರವರಿಂದ ಆಗಿದೆ ಎಂದು ತಿಳಿಸಿ, ಗ್ರಾಮಸ್ಥರ ಪರವಾಗಿ ಕೇಂದ್ರ ಸಚಿವರಾದ ಭಗವಂತ ಖೂಬಾರವರಿಗೆ ಧನ್ಯವಾದಗಳು ತಿಳಿಸಿದರು.
ಇದೇ ವೇಳೆ ಅವರು ವಿವಿಧ ದೇವಸ್ಥಾನಗಳಿಗೆ ಹಾಗೂ ಮಠಾಧಿಶರಿಗೆ ಭೇಟಿ ಮಾಡಿ,ದರ್ಶನಾಶೀರ್ವಾದ ಪಡೆದುಕೊಂಡರು. ಇದರ ಜೊತೆಗೆ ಭಗವಂತ ಖೂಬಾರವರು ಬೆಳಿಗ್ಗೆ ಝರಾ ಸಂಗಮದಲ್ಲಿ ಕೆತಕಿ ಸಂಗಮೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿ ಪೂಜೆ ಸಲಿಸಿದರು, ನಂತರ ಮಲ್ಲಯ್ಯಗಿರಿಗೆ ತೆರಳಿ, ಡಾ. ಬಸವಲಿಂಗ ಅವಧೂತರ, ನೌಬಾದ ಹತ್ತಿರ ನಿರಗುಡಿ ಪೂಜ್ಯರಾದ ಹವಾ ಮಲ್ಲಿನಾಥ ಮಹಾರಾಜರಿಗೆ ಭೇಟಿ ಮಾಡಿ ದರ್ಶನಾಶಿರ್ವಾದ ಪಡೆದುಕೊಂಡರು.
ಸಾಯಂಕಾಲ ಹುಮನಾಬಾದಗೆ ತೆರಳಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೆರಿಸಿ ರೇಣುಕ ಗಂಗಾಧರ ಶಿವಾಚಾರ್ಯ ಸ್ವಾಮಿಜಿಯವರ ದರ್ಶನಾಶೀರ್ವಾದಪಡೆದುಕೊಂಡರು. ನಂತರ ಮಾಣಿಕನಗರದಲ್ಲಿ ಪೂಜ್ಯರಾದ ಜ್ಞಾನರಾಜ ಮಾಣಿಕಪ್ರಭುಗಳ ದರ್ಶನಾಶೀರ್ವಾದ ಪಡೆದುಕೊಂಡರು, ಎಲ್ಲಾ ಪೂಜ್ಯರು ಸಂಸದರಿಗೆ ಶುಭಾಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಹುಮನಾಬಾದ ಶಾಸಕರಾದ ಡಾ. ಸಿದ್ದು ಪಾಟೀಲ್,ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಕುಂಬಾರ, ರಾಕೆಶ ಪಾಟೀಲ್,ಪ್ರಶಾಂತ ಹೊಳಸಮುದ್ರ, ಅಣೇಪ್ಪ ಖಾನಾಪೂರೆ, ರಾಜಗೋಪಾಲ
ಐನಾಪೂರೆ, ಚನ್ನಬಸವ ಘೂಳೆ ಮುಂತಾದವರು ಉಪಸ್ಥಿತರಿದ್ದರು.