ದಾದಾಸಾಹೇಬ್ ಕಾನ್ಸಿರಾಮ ಜಯಂತಿ ಆಚರಣೆ
ಕಲಬುರಗಿ,ಮಾ.16-ಭಾರತೀಯ ಆಧುನಿಕ ರಾಜಕೀಯದ ಪಿತಾಮಹ ದಾದಾಸಾಹೇಬ್ ಕಾನ್ಸಿರಾಮ್‍ಜಿ ರವರ ಜಯಂತಿಯನ್ನು ದೇವಂತಗಿ ಗ್ರಾಮದ ಬಸವೇಶ್ವರ ಚೌಕಿನ ಹತ್ತಿರ ಆಚರಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀಶೈಲ್ ಶಂಕರ್ ನಾಯ್ಕೋಡಿ ಅವರು, ದಾದಾಸಾಹೇಬ್ ಕಾನ್ಸಿರಾಮಜಿ ಅವರು ಭಾರತದ ಆಧುನಿಕ ರಾಜಕೀಯ ಪಿತಾಮರು. ಓಬಿಸಿ, ಎಸ್ಸಿ-ಎಸ್ಟಿ ಸಮುದಾಯಗಳಲ್ಲಿ ಅವರು ರಾಜಕೀಯ ಪ್ರಜ್ಞೆಯನ್ನು ಮೂಡಿಸಿದವರು. ಅವರ ತತ್ವಾದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.
ರಾಜು ಮಡಿವಾಳ, ದತ್ತಪ್ಪ ದೊಡ್ಮನಿ, ಗುಂಡಪ್ಪ ಮಾಶಾಳ, ಶಿವಕುಮಾರ್ ಚಿಂಚೋಳಿ, ಯಲ್ಲಪ್ಪ ದೊಡ್ಮನಿ, ಧರ್ಮ ಕಾಂಬ್ಳೆ, ಶಿವರಯ್ಯ ಕಂಬಾರ್ ಇನ್ನಿತರರು ಭಾಗವಹಿಸಿದ್ದರು.