ವಿದ್ಯುತ್ ಶಾರ್ಟ್ ಸರ್ಕಿಟ್ ತಪ್ಪಿಸಲು ರೈತ ಸಂಘ ಆಗ್ರಹ
ವಿಜಯಪುರ.ಮಾ.16:ಜಿಲ್ಲೆಯಲ್ಲಿ ವಿದ್ಯುತ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಹೆಚ್ಚುತ್ತಿರುವ ಶಾರ್ಟ್ ಸರ್ಕಿಟ್ ತಡೆಯಬೇಕು ಎಂದು ರೈತ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಈ ಸಂಬಂಧ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷÀ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡಿ, ಜೋರಾದ ಗಾಳಿ ಹಾಗೂ ಮಳೆ ಬಂದಾಗ ಗಿಡಗಳ ಎಲೆಗಳು ವಿದ್ಯುತ್ ಕಂಬದ ವಾಯರ್Àಗಳು ಒಂದಕ್ಕೊಂದು ತಾಗಿ ಶಾರ್ಟ್ ಸರ್ಕಿಟ್ ಆಗಿ ವಾರಗಟ್ಟಲೆ ವಿದ್ಯುತ್ ಹೋಗಿರುವ ಉದಾಹರಣೆಗಳಿವೆ. ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೂ ಅನೇಕ ಸಮಸ್ಯೆಗಳು ಎದುರಾಗಿವೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದರು.
ನಾಗಠಾಣ – ಜಂಬಗಿಗೆ ಹೋಗುವ ಸುಮಾರು 8 ಕಿ.ಮೀ ವರೆಗೆ ರಸ್ತೆಯ ಮಾರ್ಗದಲ್ಲಿ ವಿದ್ಯುತ್ ಕಂಬದ ನೇರವಾಗಿ ಕೆಳಗಡೆ ಗಿಡಗಳು ಎತ್ತರಕ್ಕೆ ಬೆಳೆದು ಕಂರೆಟ್ ವಾಯರ್Àಗಳ ಮೇಲೆ ಹಾದು ಹೋಗಿವೆ. ಇದರಿಂದ ಅನೇಕ ಬಾರಿ ವಿದ್ಯುತ್ ಅವಘಡಗಳು ಸಂಭವಿಸಿವೆ. ಇಲಾಖೆಯವರು ಎಲ್ಲಿ ಸಮಸ್ಯೆ ಇದೆ ಎಂದು ಹುಡುಕಾಡಲು ಹರಸಾಹಸ ಪಟ್ಟಿರುವುದು ಇದೆ ಎಂದವರು ತಿಳಿಸಿದ್ದಾರೆ.
ಕೂಡಲೇ ವಿದ್ಯುತ್ ಇಲಾಖೆಯವರು ಕಂಬಗಳನ್ನಾದರೂ ಬೇರೆಡೆಗೆ ಸ್ಥಳಾಂತರಿಸಬೇಕು, ಇಲ್ಲವೆ ಅರಣ್ಯ ಇಲಾಖೆಯವರು ಗಿಡಗಳನ್ನು ಬೇರೆಡೆಗೆ ಕೊಂಡೊಯ್ಯಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಸಂಚಾಲಕÀ ರಾಮನಗೌಡ ಪಾಟೀಲ (ಬ್ಯಾಲ್ಯಾಳ), ಗೌರವಾಧ್ಯಕ್ಷ ಕಲ್ಲಪ್ಪÀಗೌಡ ಪಾರಶೆಟ್ಟಿ, ತಾಲೂಕು ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗೋಡೇಕಾರ, ಮುಖಂಡರಾದ ಹೊನಮಲ್ಲ ಸಾರವಾಡ, ರಾಜಕುಮಾರ ಹೊನ್ನಳ್ಳಿ, ಶಿವರಾಜ ಕುಮಟಗಿ ಸೇರಿದಂತೆ ಇತರರು ಇದ್ದರು.