ಧರ್ಮ ಸಂಸ್ಕøತಿಯಲ್ಲಿ ಭಾರತೀಯ ಮಹಿಳೆಯರು:ಗುಂಡಕನಾಳಶ್ರೀ
ತಾಳಿಕೋಟೆ:ಮಾ.16: ಸನಾತನ ಧರ್ಮದೊಂದಿಗೆ ಮುನ್ನಡೆಯುತ್ತಾ ಸಾಗಿದ ಭಾರತೀಯ ಸಂಸ್ಕøತಿಯು ಭಾರತೀಯ ಮಹಿಳೆಯರಿಗೆ ಅಷ್ಟೇ ಅಲ್ಲಾ ಮಹಿಳೆ ಎಂಬ ಸ್ಥಾನ ಮಾನಕ್ಕೆ ದೇವತಾ ಸ್ಥಾನ ಮಾನ ನೀಡಿ ಈ ಹಿಂದಿನಿಂದಲೂ ಗೌರವಿಸುತ್ತಾ ಸಾಗಿಬಂದಿದೆ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ನುಡಿದರು.
ಗುರುವಾರರಂದು ಸ್ಥಳೀಯ ಶ್ರೀ ದೇವಿ ಮಾತೃ ಮಂಡಳಿ, ಹಿಂದೂ ಮಹಾ ಗಣಪತಿ ಮಹಾ ಮಂಡಳಿಯವರ ವತಿಯಿಂದ ಶ್ರೀ ವಿಠ್ಠಲ ಮಂದಿರದಲ್ಲಿ ಏರ್ಪಡಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ನಮ್ಮ ಭಾರತೀಯ ಸಂಸ್ಕøತಿಯು ಮಹಿಳೆಯರಿಗೆ ಅಗ್ರ ಸ್ಥಾನ ನೀಡಿದ್ದು ಮಹಿಳೆಯರನ್ನು ಗೌರವಿಸುತ್ತಾ ಸಾಗಿಬಂದಿದೆ ಪುರುಷನಾದವನು ಮಹಿಳೆಯರಿಗೆ ತಾಯಿಯ ಸ್ವರೂಪ ಅಲ್ಲದೇ ಅಕ್ಕ ತಂಗಿಯರ ಸ್ವರೂಪದಂತೆ ಈ ಹಿಂದಿನಿಂದಲೂ ಕಾಣುತ್ತಾ ಸಾಗಿಬಂದಿದ್ದರೂ ಪುರುಷರಿಗಿಂತ ಮಹಿಳೆ ಯಾವುದಕ್ಕೂ ಕಡಿಮೆ ಇಲ್ಲಾ ಎಂಬುದನ್ನು ಮಹಿಳೆ ವಿವಿಧ ರೀತಿಯ ಸಂಘಟನೆಗಳನ್ನು ಸಂಘಟಿಸಿ ತಮ್ಮ ಅನೇಕ ತೊಂದರೆಗಳನ್ನು ನಿವಾರಿಸಿಕೊಳ್ಳಲು ಮುಂದಾಗುತ್ತಿರುವದು ಸಂತಸದ ಸಂಗತಿಯಾಗಿದೆ ವಿದೇಶಿ ಸಂಸ್ಕøತಿಯನ್ನು ಅಳವಡಿಸಿಕೊಳ್ಳುವದು ಬೇಡಾ ಆ ಸಂಸ್ಕøತಿಯಿಂದ ನಮಗೆ ಯಾವುದೇ ಲಾಭವಿಲ್ಲಾ ಇತ್ತೀಚಗೆ ಕೆಲವು ಪತ್ರಿಕೆಗಳಲ್ಲಿ ಹಾಗೂ ಪ್ರಕಟಗೊಳ್ಳುತ್ತಾ ವಿದೇಶಿಯರು ನಮ್ಮ ಸಂಸ್ಕøತಿಯನ್ನು ಅಳವಡಿಸಿಕೊಂಡು ಸಾಗುತ್ತಿರುವದನ್ನು ನೊಡಿದರೆ ನಮ್ಮ ಸಂಸ್ಕøತಿ ಜನ ಮೆಚ್ಚುಗೆಗೆ ಅಷ್ಟೇ ಅಲ್ಲಾ ದೇವನ ಮೆಚ್ಚುಗೆಗೂ ಪಾತ್ರವಾಗಿದೆ ಕಾರಣ ಮಹಿಳೆಯರು ನಮ್ಮ ಧರ್ಮಿಯ ಪದ್ದತಿಯನ್ನು ಬಿಡುವದು ಬೇಡಾ ಹಿಂದಿನ ಕಾಲದಿಂದ ಸಾಗಿಬಂದ ನಮ್ಮ ಸಂಸ್ಕøತಿಯಂತೆ ವೇಷ ಭೂಷಣ, ಉಡುಗೆ ತೊಡುಗೆಗಳಲ್ಲಿ ಅಲಂಕಾರಕವಾದ ವಸ್ತುಗಳನ್ನಾಗಲಿ ಮಿತವ್ಯಯತೆಯಿಂದ ಬಳಿಸಿಕೊಂಡು ನಮ್ಮ ಸಂಸ್ಕøತಿಯನ್ನು ಉಳಿಸಿ ಮುಂದಿನ ಫಿಳಿಗೆಗೂ ಅನುಕೂಲ ಕಲ್ಪಿಸುವ ಕಾರ್ಯ ಮಾಡಿರಿ ಎಂದು ಶುಭ ಕೋರಿದರು.
ಇನ್ನೋರ್ವ ಜಿಲ್ಲಾ ಪಾಲಕರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಿಲ್ಪಾ ಕುದರಗುಂಡ ಅವರು ಮಾತನಾಡಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳೆಯರ ಸಾಧನೆಗಳನ್ನು ಗುರುತಿಸಲು ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು ಮತ್ತು ಲಿಂಗ ಸಮಾನತೆ ಪ್ರತಿಪಾದಿಸಲು ಪ್ರತಿವರ್ಷ ಮಾರ್ಚ 8 ರಂದು ಆಚರಿಸಲಾಗುತ್ತದೆ ಎಂದರು. ಮಹಿಳೆ ಅಬಲೆ ಅಲ್ಲಾ ಸಬಲೆಯಾಗಿದ್ದಾಳೆ ಯಾವುದಕ್ಕೂ ಕಡಿಮೆ ಇಲ್ಲಾ ಎಂಬುದನ್ನು ಇಂದಿನ ದಿನಮಾನದಲ್ಲಿ ಮುನ್ನುಗ್ಗಿದನ್ನು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ ಅಂತರಾಷ್ಟ್ರೀಯ ಮಹಿಳಾ ದಿನವು ಲಿಂಗ ಸಮಾನತೆ ಮತ್ತು ಹಕ್ಕುಗಳ ಕುರಿತಾಗಿ ಹೆಚ್ಚು ಮಹತ್ವ ಹೊಂದಿದೆ ವಿಶ್ವದಾದ್ಯಂತ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು. ಮಹಿಳೆಯರ ಸಾಧನೆಗಳನ್ನು ಗೌರವಿಸಲು ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು ಹಾಗೂ ಆರ್ಥಿಕ, ಶೈಕ್ಷಣಿಕ, ಸಮಾಜಿಕ ಸಾಂಸ್ಕøತಿಕ, ಕ್ರೀಡಾ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯ ಸಾಧನೆಯನ್ನು ಗುರುತಿಸಲು ಸಮಾನತೆಯ ಹಕ್ಕುಗಳನ್ನು ಪ್ರತಿಪಾದಿಸಲು ಆಚರಿಸುವಂತಹ ವಿಶೇಷ ದಿನವು ಈ ಅಂತರ ರಾಷ್ಟ್ರೀಯ ಮಹಿಳಾ ದಿನಚಾರಯಾಗಿದೆ ಎಂದರು.
ಇನ್ನೋರ್ವ ವಿರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷ ಶಿವಶಂಕರ ಹಿರೇಮಠ ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನು ಸಂಘಟಿಸಿದ ಶ್ರೀ ದೇವಿ ಮಾತೃ ಮಂಡಳಿಯ ಉಸ್ತುವಾರಿಯಾದ ಶ್ರೀಮತಿ ಶಿವಮ್ಮ ಬಿರಾದಾರ ಅವರು ಉಪಸ್ಥಿತ ಎಲ್ಲ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆದರ್ಶ ಮಹಿಳೆಯರಿಗೆ, ವಿವಿಧ ಮಹಿಳಾ ಮಂಡಳದ ಪದಾಧಿಕಾರಿಗಳಿಗೆ ಹಾಗೂ ಸದಸ್ಯನಿಯರಿಗೆ ಪುರಸಭೆಯ ಪೌರ ಕಾರ್ಮಿಕರಿಗೆ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರಲ್ಲದೇ ಭರತ ನಾಟ್ಯ ಕಲೆಯನ್ನು ಪ್ರದರ್ಶಿಸಿದ ವಿಧ್ಯಾರ್ಥಿನಿಯರಿಗೆ ನೋಟಬುಕ್‍ಗಳನ್ನು, ಟಿಫನ್ ಡಬ್ಬಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.