ಯಶಸ್ವಿಯಾಗಿ ಜರುಗಿದ ಸಾವಯವ ಕೃಷಿ ಕುರಿತು ತರಬೇತಿ
ಕಲಬುರಗಿ,ಮಾ.16:2023-24ನೇ ಸಾಲಿನ ರಾಜ್ಯ ವಲಯಯೋಜನೆಯಡಿ ಕೃಷಿ ಆಧಾರಿತ ಉಪ ಕಸಬುಗಳು ಹಾಗೂ ಸಾವಯವ ಕೃಷಿ ಕುರಿತು ಕಲಬುರಗಿ ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಫೆಬ್ರವರಿ 12 ರಿಂದ 14 ರವರೆಗೆ ಆಯೋಜಿಸಲಾಗಿದ್ದ ರೈತ ಮಹಿಳೆಯರಿಗೆ 3 ದಿನಗಳ ತರಬೇತಿ ಕಾರ್ಯಕ್ರಮವನ್ನು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥರಾದ ಅನೀಲಕುಮಾರ ರಾಠೋಡ ಅವರು ಬುಧವಾರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ರೈತರಿಗೆ ಸಾವಯವ ಕೃಷಿ ಮಹತ್ವವನ್ನು ತಿಳಿಸಿದಲ್ಲದೇ ಸಾವಯವ ಹಾಗೂ ಪಾರಂಪರಿಕ ಕೃಷಿಯನ್ನು ಅಳವಡಿಸಿಕೊಳ್ಳಕೊಂಡು ಆರ್ಥಿಕವಾಗಿ ಸದೃಡರಾಗಬೇಕು ಎಂದರು.
ಅತಿಥಿ ಉಪನ್ಯಾಸಕರಾಗಿ ಕಲಬುರಗಿ ಮಹಾಗಾಂವ್ ಕ್ರಾಸ್ ಹೈನುಗಾರಿಕಾ ವiಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಮಲ್ಲಿನಾಥ ಹೆಮಾಡಿ ಅವರು, ದೇಶಿ ಗೋವಿನ ಮಹತ್ವ, ಅದರಿಂದ ತಯಾರಾಗುವ ಉತ್ಪನ್ನಗಳ ಉಪಯೋಗಗಳನ್ನು ತಿಳಿಸುವ ಮೂಲಕ ಗೋವುಗಳ ರಕ್ಷಣೆ ಮಾಡುವುದು, ಗೋ ಕೃಪಾಮೃತ, ಜೀವಾಮೃತ, ಬೀಜಾಮೃತ ತಯಾರಿಕೆ ಮತ್ತು ಕಳೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಎನ್.ಆರ್.ಎಲ್.ಎಮ್. ಸಂಯೋಜಕ ಅಬ್ದುಲ್ ರಹೀಮ ಅವರು ಮಾತನಾಡಿ, ರೈತರು ಒಗ್ಗಟ್ಟಾಗಿ ಸಾವಯವ ಕೃಷಿಯಲ್ಲಿ ತೋಡಗಬೇಕು. ಅತಿಯಾದ ರಸಾಯನಿಕಗಳ ಉಪಯೋಗದಿಂದ ನೆಲ ಜಲ ಸಂಪತ್ತು ಕಲುಷಿತವಾಗುತ್ತಿದ್ದು, ಸಾವಯವ ಕೃಷಿಯೊಂದೆ ಇದಕ್ಕೆ ಸೂಕ್ತ ಮಾರ್ಗವಾಗಿದೆ ಎಂದು ತಿಳಿಸಿದರು.
ಶ್ರೀ ಸಾಯಿ ಸಮರ್ಥ ಗೃಹ ಉದ್ಯಮಿ ಅನ್ನಪೂರ್ಣ ಸಂಗೋಳಗಿ ಅವರು ಮಾತನಾಡಿ, ಮಹಿಳೆಯರು ತಮ್ಮ ಮನೆಯಲ್ಲಿ ಅತ್ತೆ, ಮಾವಂದಿರರಿಗೆ ಹಾಗೂ ಗಂಡಂದಿರರಿಗೆ ಮನವೋಲಿಸಿ ಸ್ವಉದ್ಯೋಗವನ್ನು ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು. ತರಬೇತಿ ಕಾರ್ಯಕ್ರಮದಲ್ಲಿ (ನಿವೃತ್ತ) ಕೃಷಿ ಅಧಿಕಾರಿ ಲಕ್ಷ್ಮಣ ಕಡಬೂರ್ ಹಾಗೂ ಅಶೋಕ ಕುಮಾರ ಬೆಣ್ಣೂರ್ ಅವರು ಮಾತನಾಡಿದರು.
ಮೂರನೇ ದಿನ ತರಬೇತಿ ಕಾರ್ಯಕ್ರಮದಲ್ಲಿ ಮಣ್ಣು ಪರೀಕ್ಷೆ ಕೇಂದ್ರ, ಕರ್ನಾಟಕ ಬೀಜ ಸಂಸ್ಕರಣ ಘಟಕ, ಕೃಷಿ ವಿಜ್ಞಾನಕೇಂದ್ರದ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಕೇಂದ್ರ. ಕಲಬುರಗಿ-ಬೀದರ ಹಾಗೂ ಯಾದಗಿರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಗಮಕ್ಕೆ ಎಲ್ಲಾ 32 ಜನ ರೈತ ಮಹಿಳೆಯರಿಗೆ ಸಹಾಯಕ ಕೃಷಿ ನಿರ್ದೇಶಕರಾದ ಅನೀಲಕುಮಾರರಾಠೋಡ ಹಾಗೂ ಕೃಷಿ ಅಧಿಕಾರಿ ಶ್ರೀಮತಿ ಯಾಸ್ಮಿನ್‍ರವರ ನೇತೃತ್ವದಲ್ಲಿ ಕ್ಷೇತ್ರ ಭೇಟಿ ಮಾಡಿಸಲಾಯಿತು
ಕಾರ್ಯಕ್ರಮದಲ್ಲಿ ಈ ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ರೈತ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.