ಭಗವಂತ ಖೂಬಾಗೆ ಒಲಿದ ಟಿಕೇಟ್: ಪಾಪನಾಶನ ಹರಕೆ ತೀರಿಸಿದ ಕಾರ್ಯಕರ್ತರು
ಬೀದರ್:ಮಾ.16: ಹಾಲಿ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮೂಲ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾದ ಭಗವಂತ ಖೂಬಾ ಅವರಿಗೆ ಭಾರತೀಯ ಜನತಾ ಪಕ್ಷವೂ ಮತ್ತೊಮ್ಮೆ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಮೂಲಕ ಹ್ಯಾಟ್ರಿಕ್ ಬಾರಿಸಲು ಅವಕಾಶ ನೀಡಿದೆ.
ಭಗವಂತ ಖೂಬಾ ಓರ್ವ ಸರಳ ಸಜ್ಜನಿಕೆಯ ವ್ಯಕ್ತಿ, ಅವರ ಮೇಲೆ ಭ್ರμÁ್ಟಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಹತ್ತು ವರ್ಷಗಳು ಸುಧೀರ್ಘವಾಗಿ ಆಳಿದ ಹೆಗ್ಗಳಿಕೆಗೆ ಪಾತ್ರರಾದ ಕೇಂದ್ರ ಮಂತ್ರಿಗಳಾದ ಭಗವಂತ ಖೂಬಾ ಅವರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಬೇಕು ಅವರಿಗೆ ಟಿಕೆಟ್ ಒಲಿಯಬೇಕು ಎಂದು ಪಾಪನಾಶ ಕೋಟಿಲಿಂಗೇಶ್ವರನಲ್ಲಿ ಬೇಡಿಕೊಂಡಿದ್ದೆವು ಎಂದು ಕಾರ್ಯಕರ್ತರೊಬ್ಬರಾದ ಕಮಲಾಕರ್ ಹೆಗಡೆ ಅವರು ಸಂಜೆವಾಣಿಯೊಂದಿಗೆ ಮಾತನಾಡಿ ತಿಳಿಸಿದರು.
ನಮ್ಮ ಹರಕೆಯಂತೆ ಭಗವಂತ ಖೂಬಾ ಅವರಿಗೆ ಬಿಜೆಪಿ ವರಿಷ್ಠರು ಆಶೀರ್ವದಿಸಿದ್ದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ನಮ್ಮ ನಾಯಕರಾದ ಭಗವಂತ ಖೂಬಾ ಅವರಿಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಲು ಆಶೀರ್ವಾದ ಮಾಡಬೇಕೆಂದು ಪಾಪನಾಶಲಿಂಗ ದೇವರಲ್ಲಿ ಬೇಡಿಕೊಂಡಿರುವುದಾಗಿ ತಿಳಿಸಿದರು ಭಗವಂತ ಖೂಬಾ ಅವರಿಗೆ ಟಿಕೆಟ್ ದೊರೆತರೆ, 101 ತೆಂಗಿನ ಕಾಯಿ ಒಡೆಯುವುದಾಗಿ ಹರಕೆ ಹೊತ್ತಲಾಗಿತ್ತು ಅದು ಭಗವಂತ ಖೂಬಾ ಅವರ ಕೈಯಿಂದ ತೆಂಗಿನಕಾಯಿ ಒಡೆಸಿ ಪಾಪನಾಶ ಕೋಟಿ ಲಿಂಗೇಶ್ವರನ ಹರಕೆ ತೀರಿಸಲಾಗಿದೆ ಎಂದು ಕಮಲಾಕರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಉದಯ ಬಾವಿದೊಡ್ಡಿ ಜೋಯೆಲ್, ರಜನಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.