18ರಂದು ಶೋಷಿತರ ಹಿತರಕ್ಷಣೆ ಸಮಿತಿಯಿಂದ ಪ್ರತಿಭಟನೆ
ಬೀದರ್:ಮಾ.16: ಈ ತಿಂಗಳ 18ರಂದು ನಗರದ ಶಹಾಗಂಜ್ ನಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದಿಂದ ಡಿ.ಸಿ ಕಚೇರಿ ವರೆಗೆ ರಾಜ್ಯದಲ್ಲಿ ಹಾಗೂ ಬೀದರ್ ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿರುವ ನಿರಂತರ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಶೋμÉೂತರ ಹಿತರಕ್ಷಣಾ ಸಂಘಟನೆ ಅಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ರಾಜ್ಯದಲ್ಲಿ ಅದರಲ್ಲೂ ಬೀದರ್ ಜಿಲ್ಲೆಯಲ್ಲಿ ಶೋಷಿತರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಪೆÇೀಲಿಸ್ ಇಲಾಖೆ ದಿವ್ಯ ಮೌನ್ ವಹಿಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಔರಾದ್ ತಾಲೂಕಿನ ಕೌಠಾ ಹಾಗೂ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ಇತ್ತಿಚೀಗೆ ಸಂವಿಧಾನ ಜಾಗೃತಿ ರ್ಯಾಲಿ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಕಾನೂನು ಉಲ್ಲಂಘಿಸಿದರೂ ಪೆÇೀಲಿಸ್ ಇಲಾಖೆ ಚಕಾರ ಎತ್ತುತ್ತಿಲ್ಲ. ಬದಲಿಗೆ ದಲಿತರ ಮೇಲೆ ದೌರ್ಜನ್ಯ ನಡೆದರೂ ಇಲ್ಲಿಯ ವರೆಗೆ ಯಾರನ್ನೂ ಸಹ ಬಂಧಿಸಲಿಲ್ಲ ಎಂದು ವಾಲ್ದೊಡ್ಡಿ ಆರೋಪಿಸಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದಲಿತರ ಮೇಲೆ ನಿರಂತರ ಹಲ್ಲೆಗಳಾಗುತ್ತಿದ್ದವು. ಆ ಸರ್ಕಾರವನ್ನು ಧಿಕ್ಕರಿಸಿ ಕಾಂಗ್ರೆಸ್ ಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದರೂ ಸಹ ಈ ಸರ್ಕಾರದಲ್ಲಿ ದಲಿತರ ಮೇಲೆ ಹಲ್ಲೆ ನಿಲ್ಲುತ್ತಿಲ್ಲ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಬಾಯಿ ಬಿಡುತ್ತಿಲ್ಲ. ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇದರಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿಯ ಬಿ ಟೀಮ್ ಆಗಿ ಹೊರಹೊಮ್ಮಿದೆ ಎಂದು ಅವರು ಗಂಭೀರವಾಗಿ ಆಪಾದಿಸಿದರು.
ಈ ದೌರ್ಜನ್ಯ ಖಂಡಿಸಿ ಅಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ನಾವು 40 ಜನ ಸೇರಿ ನೂತನವಾಗಿ ಶೋಷಿತರ ಹಿತರಕ್ಷಣೆ ಸಂಘಟನೆ ಹುಟ್ಡು ಹಾಕಿದ್ದೇವೆ. ಅಂದಿನ ಹೋರಾಟದಲ್ಲಿ ಸುಮಾರು 3 ಸಾವಿರ ಸಮಾಜ ಬಾಂಧವರು ಸೇರಿ ಪ್ರತಿಭಟನೆ ಮಾಡುವರಿದ್ದೇವೆ ಎಂದು ಹೇಳಿದರು.
ಉತ್ತರಕನ್ನಡ ಸಂಸದ ಅನಂತಕುಮಾರ ಹೇಗಡೆ ಅವರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಇವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ಕೊಡಬೇಕೆಂದು ವಾಲದೊಡ್ಡಿ ಆಗ್ರಹಿಸಿದರು.
ಶೋಷಿತರ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ರಾಹುಲ ಖಂದಾರೆ, ರಾಜಕುಮಾರ ಶಿಂಧೆ, ಅಂಬ್ರಿಶ ಕುದರೆ, ಪ್ರಧಾನ ಕಾರ್ಯದರ್ಶಿ ಸುರೇಶ ಜೋಜನಾಕರ್, ಶರಣಪ್ಪ ರಾಜಪುರೆ, ಮಹೇಶ ಗೋರ್ನಾಳಕರ್, ಸಂಘಟನಾ ಕಾರ್ಯದರ್ಶಿ ರಾಹುಲ ಡಾಂಗೆ, ಅಂಬಾದಾಸ ಚಕ್ರವರ್ತಿ, ಸಂಘಟನಾ ಉಸ್ತುವಾರಿ ರವಿ ಭೂಸಂಡೆ ಚಿದ್ರಿ, ಸದಸ್ಯರಾದ ಲಕ್ಷ್ಮಣ ಕಾಂಬಳೆ, ಶಿವಕುಮಾರ ಜೀರ್ಗೆ, ನರಸಿಂಗ ದೊಡ್ಡಿ, ಸಚೀನ ಚಾಂಬೋಳ, ಅಖಿಲೇಶ ಸಾಗರ, ಅಮೃತ ಮುತ್ತಂಗಿಕರ್, ರಾಜಕುಮಾರ ಡೊಂಗ್ರೆ, ಕಿರಣ ದಂಡೆ, ಬಸವರಾಜ ಮಿಠಾರೆ, ದಯಾನಂದ ಸಾತಿ ಸೇರಿದಂತೆ ಅನೇಕರು ಪತ್ರಿಕಾಗೋಷ್ಟಿಯಲ್ಲಿದ್ದರು.