ಹೆಣ್ಣು ಮಕ್ಕಳು ಕಡ್ಡಾಯ ಶಿಕ್ಷಣ ಪಡೆಯಲಿ : ಲಕ್ಷ್ಮೀಬಾಯಿ
ಔರಾದ್ :ಮಾ.16: ಹೆಣ್ಣು ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆದು ಆರ್ಥಿಕ ಸ್ವಾವಲಂಬನೆ ಗಳಿಸುವುದರೊಂದಿಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಭಂಡಾರಕುಮಟಾ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹೇಳಿದರು.
ತಾಲೂಕಿನ ಭಂಡಾರಕುಮಟಾ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಈಚೇಗೆ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಒಳ್ಳೆಯ ಕೆಲಸ ಮಾಡುವ ಮೂಲಕ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬಾರದು. ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡೆದು, ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಸರಕಾರವು ಮಹಿಳೆಯರ ಸ್ವಾವಲಂಬನೆಗಾಗಿ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಹೋಕ್ರಣಾ ಪ್ರೌಢ ಶಾಲೆಯ ಮುಖ್ಯಗುರು ಶಿವಾಜಿರಾವ ಸಿಗರೆ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಭಯ ದೊಡ್ಡ ಶತ್ರು. ಅದನ್ನು ಮೊದಲು ನಾಶಪಡಿಸಿ ಎಂದು ಕಿವಿಮಾತು ಹೇಳಿದರು. ಪರೀಕ್ಷೆಯನ್ನು ಸರಳವಾಗಬೇಕಾದರೇ ಹಬ್ಬದಂತೆ ಆಚರಿಸಿ ಎಂದರು.
ಶಾಲೆಯ ಮುಖ್ಯಗುರು ಚಂದ್ರಕಾಂತ ನಿರ್ಮಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯ ಗುರಿಯೊಂದಿಗೆ ಸಂಕಲ್ಪ ಮಾಡಬೇಕು. ಮನಸ್ಸಿದ್ದರೆ ನಾವು ಅಂದು???ಂಡಿದ್ದನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಸದುಪಯೋಗ ಪಡಿಸಿಕೆuಟಿಜeಜಿiಟಿeಜಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಶಿವಮೂರ್ತಿ ಜಿರಗೆ ಪ್ರಾಸ್ತವಿಕ ಮಾತನಾಡಿದರು. ಮುಸಾಗುರುಜಿ, ಇಲಿಯಾಜ್, ಪ್ರದೀಪ ನಾಯ್ಕ್, ಗಣೇಶ ರಾಠೋಡ್, ದ್ವಿತೀಯ ದರ್ಜೆ ಸಹಾಯಕಿ ಕಲ್ಪನಾ, ಉಮೇಶ ಪಾಟೀಲ್, ವಿಜಯಕುಮಾರ ಭಾಲ್ಕೆ, ಗೌಸೋದ್ಧಿನ್ ಸೇರಿದಂತೆ ವಿದ್ಯಾರ್ಥಿ, ಪಾಲಕರು ಪಾಲ್ಗೊಂಡರು. ಶರಣಪ್ಪ ನಾಯಕರ್ ಸ್ವಾಗತಿಸಿದರು. ದೇವಿದಾಸ ರಾಠೋಡ್ ನಿರೂಪಿಸಿದರು. ಮುರಳಿಧರ ಮೇತ್ರೆ ವಂದಿಸಿದರು.