ಹಿಂದೆ ಅಸಾಧ್ಯವಾದುದ್ದನ್ನು ಇಂದು ಸಾಧ್ಯವಾಗಿಸಿದ್ದು ವಿಜ್ಞಾನ:ಬಿ.ಜಿ ಮೂಲಿಮನಿ
ಬೀದರ:ಮಾ.16:ವಿಶಾಲವಾದ ಜಗತ್ತು ಇಂದು ಸಣ್ಣ ಹಳ್ಳಿಯಾಗಿದೆ. ಬಾನಲ್ಲಿ ಬಾನಾಡಿಯಂತೆ ಹಾರಬಹುದು, ನೀಲಿ ಸಾಗರದ ಆಳದಲ್ಲಿ ಮೀನಿನಂತೆ ಈಜಬಹುದು. ಇದೇಲ್ಲಾ ಸಾಧ್ಯವಾದದ್ದು ವಿಜ್ಞಾನಿಗಳ ನಿರಂತರ ಪರಿಶ್ರಮದ ಫಲದಿಂದ, ಯಂತ್ರಗಳ ಸಹಾಯದಿಂದ ಬದುಕು ಸರಳವಾಗಿದೆ. ವಿಜ್ಞಾನದ ಸಹಾಯದಿಂದ ಜೀವನ ಅತ್ಯದ್ಭುತವೆನಿಸುತ್ತದೆ. ಮಾನವನ ಬದುಕು ವಿಜ್ಞಾನ ಮತ್ತು ಮೆದುಳಿನ ಕನಸಿನ ಕೂಸಯೆಂದೇ ಹೇಳಬೇಕು. ಹಿಂದೆ ಅಸಾಧ್ಯವಾದುದ್ದನ್ನು ಇಂದು ಸಾಧ್ಯವಾಗಿಸಿದ್ದು ವಿಜ್ಞಾನವೇ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ. ಬಿಜಿ ಮೂಲಿಮನಿ ನುಡಿದರು.
ಅವರು ನಗರದ ಕ.ರಾ.ಶಿ.ಸಂಸ್ಥೆಯ ಕರ್ನಾಟಕ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬೀದರನ ವಿಜ್ಞಾನ ಕ್ಲಬ್ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ – ಪೆÇ್ರ. ಬಿಜಿ ಮೂಲಿಮನಿ ಮಾತನಾಡುತ್ತಾ ವಿಜ್ಞಾನ ನಮಗೆ ವೈಜ್ಞಾನಿಕವಾಗಿ ವಿಚಾರ ಮಾಡಲು ತರಬೇತಿ ನೀಡಿದೆ. ದೈನಂದಿನ ಬದುಕಿಗೆ ಬೆಳಕು ಚೆಲ್ಲಲಿರುವ ವಿಜ್ಞಾನದ ಮೇಲ್ಮೆಯನ್ನು ಅರಿಯಲು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ವಿಜ್ಞನ ದಿನ ಸರ್.ಸಿ.ವಿ.ರಾಮನ್ ಭಾರತ ಮಾತೆಯ ಮುಡಿಗೆ 1930 ರಲ್ಲಿ ನೋಬೆಲ್ ಪ್ರಶಸ್ತಿ ಗರಿ ಮುಡಿಸಿದ ಏಷ್ಯದ ಮೊದಲಿಗರು. ವಿಜ್ಞಾನ ಕೇವಲ ಪ್ರಯೋಗಾಲಯಗಳಲ್ಲಿ ಮಾತ್ರ ಕಾಣದೇ ಬದಲಾಗಿ ಇಡೀ ವಿಶ್ವದಲ್ಲಿ ಕಾಣಬೇಕು. ವಿದ್ಯಾರ್ಥಿಗಳು ಸಂಶೋಧನೆಗೆ ಮುಂದೆ ಬರಬೇಕು. ಉಪನ್ಯಾಸಕರ ಪಠ್ಯ ಬೋಧನೆಯಲ್ಲಿ ಪ್ರಶ್ನೆಯನ್ನು ಕೇಳುವ ಹವ್ಯಾಸ ಹಾಕಿಕೊಳ್ಳಬೇಕು. ಪ್ರಶ್ನೆ ಕೇಳುವುದೇ ನಿಮ್ಮ ಮನಸ್ಸಿನ ಹೊಸ ವಿಚಾರಕ್ಕೆ ನಾಂದಿಯಾಗುತ್ತದೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಹಂಗರಗಿ ಮಾತನಾಡಿ ವಿಜ್ಞಾನಿಗಳು ಬಾಹ್ಯಕಾಶ, ಪರಮಾಣು ವಿಜ್ಞಾನ ಮಾಹಿತಿ ವಿಜ್ಞಾನ ಜೈವಿಕ ತಂತ್ರಜ್ಞಾನ, ವೈದಿಕ ಕ್ಷೇತ್ರ ಸೇರಿದಂತೆ ದೇಶದ ವಿಜ್ಞಾನಿಗಳು ಕೊಟ್ಟಿರುವ ಕೊಡುಗೆ ಮಹತ್ವವೆಂಬುದರಲ್ಲಿ ಎರಡು ಮಾತಿಲ್ಲ. ಈ ದಿನ ಎಲ್ಲಾ ವಿಜ್ಞಾನಿಗಳಿಗೆ ಸಮರ್ಪಣೆಯಾಗಿದೆ , ನಮ್ಮ ಕಾಲೇಜಿನ ವಿಜ್ಞಾನ ಕ್ಲಬ್ ಸಹಾಯದಿಂದ ಪ್ರತಿ ವರ್ಷ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುವುದು ನಮ್ಮ ಪರಿಷತ್ತಿನಿಂದ ವಿದ್ಯಾರ್ಥಿಗಳಿಗೆ, ನಾಗರೀಕರಿಗೆ ವೈಜ್ಞಾನಿಕ ಅರಿವು ಪರಿಸರ ನಿರ್ವಹಣೆಯ ಅರಿವು ಸೈಕಲ್ ಬಳಕೆ ಇಂಧನ ಉಳಿವು, ಸೌರಶಕ್ತಿ ಬಳಕೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಪೆÇ್ರೀ. ಅನೀಲಕುಮಾರ ಚಿಕ್ಕಮಣ್ಣೂರ ಸ್ವಾಗತಿಸಿದರು. ಗಣೀತಶಾಸ್ತ್ರದ ಮುಖ್ಯಸ್ಥರಾದ ಶ್ರೀಮತಿ ಪದ್ಮೀನಿಕಾಜಿಯವರು ವಂದಿಸಿದರು. ಡಾ. ಸುನೀತಾ ಕುಡ್ಲೀಕರ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರುಪಿಸಿದರು.
ಈ ಒಂದು ಸುಸಂದರ್ಭದಲ್ಲಿ ವಿದ್ಯಾರ್ಥಿಗಳಿಗೊಸ್ಕರ ಹಮ್ಮಿಕೊಂಡಿದ್ದ ನಿಬಂಧ ಸ್ಪರ್ಧೆ, ಪೆÇೀಸ್ಟರ್ ಪ್ರಜೆಂಟೇಶನ್ ಸ್ಪರ್ಧೆಯಲ್ಲಿ ವಿಜೇತರರಿಗೆ ಬಹುಮಾನವನ್ನು ವಿತರಿಸಲಾಯಿತು. ಮಹಾವಿದ್ಯಾಲಯದ ಅನೇಕ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.