ಹನುಮಾನ ಮಂದಿರ ನಿರ್ಮಾಣ ಮಾಡಿದರೆ ರಾಮನಿಗೆ ಗೌರವ ಕೊಟ್ಟಂತೆ
ಬೀದರ್: ಮಾ.16: ಹನುಮಾನ ದೇವಸ್ಥಾನದ ನಿರ್ಮಾಣವೆಂದರೆ ಒಂದು ರೀತಿಯಲ್ಲಿ ಅದು ಶ್ರೀರಾಮಚಂದ್ರನಿಗೆ ಕೊಡುವ ಗೌರವವೇ ಆಗಿದೆ ಎಂದು ಶಾಸಕ ಶರಣು ಸಲಗರ ನುಡಿದರು.
ತಾಲೂಕಿನ ಗಿಲಗಿಲಿ ಗ್ರಾಮದಲ್ಲಿ ವೀರ ಹನುಮಾನ ದೇವಸ್ಥಾನ ಭೂಮಿ ಪೂಜೆ ಸಮಾರಂಭದಲ್ಲಿ ಮಾತನಾಡಿದ ಶಾಸಕರು ಇಂದಿನ ತರುಣರು ಶ್ರೀರಾಮಚಂದ್ರ ಹಾಗೂ ವೀರ ಹನುಮಾನರ ಆದರ್ಶ ಮೈಗೂಡಿಸಿಕೊಳ್ಳಬೇಕಾದುದು ತುರ್ತು ಅಗತ್ಯವಿದೆ.
ಭಾರತಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ರಾಮ ಯಾವತ್ತೂ ಪ್ರಸ್ತುತವಾಗಿದ್ದು, ಬದುಕಿನ ಭವ್ಯತೆ ಹೆಚ್ಚಿಸಿಕೊಳ್ಳಲು ರಾಮನ ಆದರ್ಶ ಚಿಂತನೆಗಳು ನಿತ್ಯ ಸ್ಪೂರ್ತಿ ದಾಯಕವಾಗಿವೆ.
ಗಿಲಿಗಿಲಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ನೂತನ ಹನುಮಾನ ಮಂದಿರ ಗ್ರಾಮದ ನೆರವಾಗುತ್ತದೆ ಮತ್ತು ಹನುಮಾನ ಮಂದಿರ ನಿರ್ಮಾಣಕ್ಕಾಗಿ 5 ಲಕ್ಷ ಹಣ ಶಾಸಕರ ಅನುದಾನದಿಂದ ಕೊಡುವುದಾಗಿ ಹೇಳಿದರು.
ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸಮಾರಂಭದ ಪಾವನ ಸಾನಿಧ್ಯ ವಹಿಸಿ ಶ್ರೀ ವೀರ ಹನುಮಾನ ದೇವಸ್ಥಾನ ಅಡಿಗಲ್ಲು ನೆರವೇರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಆನಂದ ಪಾಟೀಲ, ಮುಖಂಡರಾದ ವೀರಣ್ಣ ಮಂಗಾಣೆ, ಬಸವಕಲ್ಯಾಣ ನಗರ ಪ್ರಾಧಿಕಾರ ಯೋಜನೆ ಮಾಜಿ ಅಧ್ಯಕ್ಷರಾದ ರಾಜಕುಮಾರ ಬಿರಾದಾರ, ಶುಭಾಶಯ ಮುರುಡ ಬೆಳಮಗಿ, ಚಂದ್ರಶೆಟ್ಟಿ ಇಮಡೆ, ಜ್ಯೋತಿ ಪಾಟೀಲ ಗಿಲಗಿಲಿ, ಜಗನ್ನಾಥ ಬಿರಾದಾರ, ವಿಜಯಕುಮಾರ ಬಿರಾದಾರ, ಕಲ್ಯಾಣರಾವ ಮಹಾಗಾಂವ, ಜ್ಞಾನೇಶ್ವರ ಮೂಳೆ, ಪರಶುರಾಮ ಅಟ್ಟೂರೆ, ವೀರೇಶ ದಿನಸಿ, ಅಮೃತ ರಾವ್ ಕಪಟೆ, ಸಂಜುಕುಮಾರ ಮೂಲಗೆ, ಶಿವಾನಂದ ಪೂಜಾರಿ, ರೇವಣಸಿದ್ದಪ್ಪ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಸಂಗೀತ ಸೇವೆ ಸಲ್ಲಿಸಿದರು.
ಶಿವಲಿಂಗಪ್ಪ ಪಾಟೀಲ ಸ್ವಾಗತಿಸಿದರು.
ನವಲಿಂಗ ಪಾಟೀಲ ನಿರೂಪಿಸಿದರು.