ಮಂಜೂರಾತಿ ಪತ್ರ ವಿತರಣೆ
ನವಲಗುಂದ,ಮಾ16: ವಿಧಾನಸಭಾ ಕ್ಷೇತ್ರದ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯತಗಳ ವಿಕಲಚೇತನ ವಿವಿಧೋದ್ದೇಶ ಕಾರ್ಯಕರ್ತರಿಗೆ ಕಂಪ್ಯೂಟರೀಕರಣ ವ್ಯವಸ್ಥೆಗೆ ಲ್ಯಾಪಟಾಪ ಹಾಗೂ ಪ್ರಿಂಟರಗಳನ್ನು ಮತ್ತು 16 ಗ್ರಾಮ ಪಂಚಾಯತ ಗ್ರಂಥಾಲಯಗಳಿಗೆ ಲ್ಯಾಪಟಾಪ್, ಪ್ರಿಂಟರ್ ಹಾಗೂ ಅಲ್ಮೆರಾಗಳನ್ನು ತಾಲ್ಲೂಕಾ ಪಂಚಾಯತ್ ಸಭಾಭವನದಲ್ಲಿ ಶಾಸಕ ಎನ್. ಎಚ್. ಕೋನರಡ್ಡಿ ವಿತರಣೆ ಮಾಡಿದರು.
ಇದೇ ವೇಳೆಯಲ್ಲಿ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ 2023-24 ನೆ ಸಾಲಿನ ವೃತ್ತಿ ಪೆÇ್ರೀತ್ಸಾಹ ಯೋಜನೆ, ಗಂಗಾ ಕಲ್ಯಾಣ ಯೋಜನೆ ಶ್ರಮ ಶಕ್ತಿ ಹಾಗೂ ಗೂಡ್ಸ್/ಟ್ಯಾಕ್ಸಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಪ್ರಮಾಣ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಉಸ್ಮಾನ ಬಬರ್ಚಿ, ಬಾಬಾಜಾನ್ ಮುಲ್ಲಾ, ಮದರ್ ಉಗರಗೋಳ, ಪ್ರಕಾಶ್ ಶಿಗ್ಲಿ, ಶಂಕರ ಬಸಾಪುರ,ಹಟೇಲ್ ರಾಮದುರ್ಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ರಾಜೇಶ್ ಧನವಾಡ್ಕರ, ತಾಲೂಕ ಯೋಜನಾಧಿಕಾರಿಗಳು ಬಿ.ಎಸ್.ಪಾಟೀಲ್ ಸೇರಿದಂತೆ ಎಲ್ಲ ಪಂಚಾಯತ್ ಪಿ.ಡಿ.ಒ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.