ಇಂದಿನ ರಾಜಕಾರಣದ ಬಗ್ಗೆ ಬೇಸರ:ಸ್ವಾಮೀಜಿ
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮಾ.16; ಯಾವುದೇ ಪಕ್ಷದ ಜನಪ್ರತಿನಿಧಿಗಳು ಯಾವ ಪಕ್ಷದಲ್ಲಿ ಇದ್ದಾರೆ ಎಂಬ ಬಗ್ಗೆ ಆಯಾ ಪಕ್ಷದವರು ಚುನಾವಣಾ ಆಯೋಗದಲ್ಲಿ ನೊಂದಾಯಿಸಬೇಕು, ಐದು ವರ್ಷ ಗೆದ್ದ ಪಕ್ಷದಲ್ಲಿರಬೇಕು, ಇಲ್ಲದಿದ್ದರೆ ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತಾಗಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯರ ಸ್ವಾಮೀಜಿಯವರು ಅಭಿಪ್ರಾಯ ಪಟ್ಟರು.
ತಾಲೂಕಿನ ಮೈದೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಊರಮ್ಮ ದೇವಿ ದೇವಸ್ಥಾನದ ನೂತನ ಕಟ್ಟಡ ಗೋಪುರದ ಕಳಸಾ ರೋಹಣ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.
ಗೆದ್ದವರು ಆಯಾ ಪಕ್ಷದಲ್ಲಿ ಕಡ್ಡಾಯವಾಗಿ 5 ವರ್ಷ ಇರುವ ಹಾಗೆ ಕಾನೂನು ಅಗತ್ಯವಿದೆ ಎಂದು ಅವರು ಅಲ್ಲಿ ಟಿಕೆಟ್ ಇಲ್ಲ ಅಂದರೆ ಇಲ್ಲಿಗೆ, ಇಲ್ಲಿ ಟಿಕೆಟ್ ಇಲ್ಲ ಅಂದರೆ ಅಲ್ಲಿಗೆ ಚುನಾವಣೆ ಎಂಬುದು ಮಂಗನಾಟವಾಗಿದೆ, ಸ್ವಾಭಿಮಾನ ಇಲ್ಲವಾಗಿದೆ ಎಂದರು.
ಯಾವ ರಾಜಕಾರಣಿಗಳು ಪಕ್ಷವಾಗಲಿ, ರಾಜಕಾರಣಿಯನ್ನು ದೂಷಣೆ ಮಾಡಬಾರದು, ವಯಕ್ತಿಕ ತಪ್ಪುಗಳಿದ್ದರೆ ಎತ್ತಿ ಹೇಳಬೇಕು, ನಿನ್ನೆ ಬಯ್ಯುತ್ತಾರೆ, ಇಂದು ಅವರನ್ನು ಬರಮಾಡಿಕೊಳ್ಳುತ್ತಾರೆ, ಇಂದು ರಾಜಕೀಯ ವ್ಯವಸ್ಥೆ ಅಸಯ್ಯ ಎನ್ನಿಸುತ್ತಿದೆ, ಬೇಸರ ತರಿಸಿದೆ ಎಂದು ಹೇಳಿದರು.
ಪ್ರಜ್ಞವಂತ ನಾಗರೀಕರು ರಾಜಕಾರಣಿಗಳನ್ನು ಕೆಡಿಸಿದವರು ನೀವು, ನೀವು ಸರಿಯಾಗಿ ಮತ ಹಾಕಿದರೆ ಹೀಗಾಗಲ್ಲ ಎಂದ ಅವರು ಯುವಕರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ, ಪ್ರಜಾಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕಿದೆ ಎಂದು ತಿಳಿಸಿದರು.
ಯಾವ ಆಚರಣೆಯಿಂದ ಸಾಮಾಜಿಕವಾಗಿ ಹಾನಿ ಇಲ್ಲವೊ ಅಂತಹ ಆಚರಣೆ ಯನ್ನು ಖಂಡಿಸುವ ಹಕ್ಕು ಯಾವ ವಿಚಾರವಂತರಿಗೂ ಇಲ್ಲ, ಭಾವನೆಗಳು ಮುಖ್ಯ ಎಂದು ಶ್ರೀಗಳು ಅಭಿಪ್ರಾಯ ಪಟ್ಚರು.
ಹರಿಹರ ವೀರಶೈವ ಲಿಂಗಾಯುತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ ಚುನಾವಣೆ ಹೋಳಿ ಹುಣ್ಣುಮೆಯಂತೆ ಅವರ ಮೇಲೆ ಇವರು ಇವರ ಮೇಲೆ ಅವರು ಬಣ್ಣ ಎರಚುವುದು, ಪಕ್ಷಗಳು ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು, ಚುನಾವಣೆ ಮುಗಿದ ಮೇಲೆ ತಲೆ ಸ್ನಾನ ಮಾಡಿ ಊರಮ್ಮ ದೇವಿಯ ದರ್ಶನ ಪಡೆಯಿರಿ ಎಂದು ಅವರು ಗ್ರಾಮದಲ್ಲಿ ಯಾವುದೇ ಜಾತಿ ಜನಾಂಗದವರು ಪ್ರೀತಿ ವಿಶ್ವಾಸದಿಂದ ಇರಬೇಕು, ನಾನು ಎಂಬುದು ಹೋಗಬೇಕು, ಧಾರ್ಮಿಕ ಕಾರ್ಯ ಶ್ರೇಷ್ಟ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಊರಮ್ಮ ದೇವಿ ಮಳೆ, ಬೆಳೆ ಸರಿಯಾಗಿ ಆಗಿ ರೈತರ ಬಾಳು ಹಸನಾಗಿ ಮಾಡಲಿ, ಗ್ರಾಮದಲ್ಲಿ ಸಾಮರಸ್ಯದಿಂದ ಜೀವನ ನಡೆಸಿರಿ ಎಂದು ಅವರು ತಿಳಿಸಿದರು.
ಜಿ.ಪಂ ಮಾಜಿ ಸದಸ್ಯ ಪಿ.ಮಹಾಬಲೇಶ್ವರಗೌಡ ಮಾತನಾಡಿ ಈ ಭಾಗದಲ್ಲಿ ಹರಿದಿರುವ ಹಗರಿಹಳ್ಳಕ್ಕೆ ಚೆಕ್ಡ್ಯಾಂ ನಿರ್ಮಾಣಕ್ಕೆ ಇಬ್ಬರು ಶ್ರೀಗಳು ಬೆಂಬಲಿಸಬೇಕು, ಅನ್ನದ ಕೊರತೆಗಿಂತ ಜ್ಞಾನದ ಕೊರತೆ ಇದೆ, ಗುರುಗಳ ಮಾರ್ಗದರ್ಶನದಲ್ಲಿ ನಾವು ನೀವು ನಡೆದುಕೊಳ್ಳೋಣ ಎಂದು ಅವರು ತಿಳಿಸಿದರು
ಸಹಕಾರ ಸೌಹಾರ್ದ ಬ್ಯಾಂಕಿನ ರಾಜ್ಯಾದ್ಯಕ್ಷ ಜಿ.ನಂಜನಗೌಡ, ತಾ.ಪಂ ಮಾಡಿ ಅಧ್ಯಕ್ಷ ಕೆ.ಕುಬೇರಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ಮೈದೂರುಊರಮ್ಮ ದೇವಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸಂಕಾಳ ಮಂಜುನಾಥ ವಹಿಸಿದ್ದರು.
ಈ ಸಂದರ್ಭದಲ್ಲಿ ಡಿಡಿಸಿಸಿ ಬ್ಯಾಂಕ ಉಪಾದ್ಯಕ್ಷ ಬಿ.ಕೆ.ಪ್ರಕಾಶ, ಮುಖಂಡರಾದ ಕಟ್ಟಿರಂಗನಾಥ, ಬಂದೋಳ ಮಂಜುನಾಥ, ವಕೀಲ ಬಾವಿಹಳ್ಳಿ ಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ತಾ.ಪಂ ಮಾಜಿ ಸದಸ್ಯ ಮೈದೂರು ರಾಮಣ್ಣ,. ಸಚ್ಚಿದಾನಂದಪ್ಪ, ಕೆ.ಮಲ್ಲಿಕಾರ್ಜುನ, ಕೆ.ರಾಮರಾವ್, ಮುಖ್ಯ ಶಿಕ್ಷಕ ದೇವೇಂದ್ರಗೌಡ, ಬಾಗಳೆಪ್ಪ, ಎಂ.ಕರಿಬಸಯ್ಯ, ಚೆನ್ನಬಸಯ್ಯ, ಸಣ್ಣಮಾರಪ್ಪ, ಸಣ್ಣಕ್ಕಿ ಗೋಣೆಬಸಪ್ಪ, ಮರುಳಸಿದ್ದಾಚಾರ, ಬೋವಿ ತಿಪ್ಪಣ್ಣ, ಜ್ಯೋತಿ ಜಗದಪ್ಪ, ಗೊಂಗಡಿ ನಾಗರಾಜ, ಲಾಟಿದಾದಾಪೀರ, ಮಡ್ಡಿ ಚಿಕ್ಕಪ್ಪ, ರಹಿಮಾನ್ಸಾಬ್ ಇತರರು ಉಪಸ್ಥಿತರಿದ್ದರು.
16ಹೆಚ್‍ಆರ್‍ಪಿ1: ತಾಲೂಕಿನ ಮೈದೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಊರಮ್ಮ ದೇವಿ ದೇವಸ್ಥಾನದ ನೂತನ ಕಟ್ಟಡ ಗೋಪುರದ ಕಳಸಾ ರೋಹಣ ಕಾರ್ಯಕ್ರಮ ಉದ್ಘಾಟಿಸಲಾಯಿತು.