ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ
ಕನಕಪುರ, ಮಾ.೧೬: ನಗರದ ಕೋಟೆಯಲ್ಲಿ ಇರುವ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಲೋಕ ಕಲ್ಯಾಣರ್ಥವಾಗಿ ಚಂಡಿಕಾ ಹೋಮ ಹಾಗೂ ೧೩ವರ್ಷದ ವಾರ್ಷಿಕೋತ್ಸವ ನಡೆಯಿತು.
ಮಠದ ಧರ್ಮಾಧಿಕಾರಿ ಬಿ.ಎನ್. ಪ್ರಕಾಶ್ ಮೂರ್ತಿಯವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್‍ಯಕ್ರಮಗಳು ಜರುಗಿದವು.
ಶಾರದಾ ಪರಮೇಶ್ವರಿ ಅಮ್ಮನವರು, ಶ್ರೀ ಶಂಕರ ಭಗವತ್ಪಾದಚಾರ್‍ಯ ಹಾಗೂ ಗಣಪತಿಯ ಮೂಲ ವಿಗ್ರಹಗಳಿಗೆ ಬೆಳಿಗ್ಗೆ ಫಲಪಂಚಾಮೃತಾಭಿಷೇಕ ಸಹಸ್ರನಾಮ ಪೂರ್ವಕ ಕುಂಕುಮಾರ್ಚನೆ, ವಿಶೇಷ ಅಲಂಕಾರವಾದ ನಂತರ ಮಹಾ ಮಂಗಳಾರತಿ ಮಾಡಲಾಯಿತು.
ಹಾಗೆಯೇ ಇದೇ ಸಂದರ್ಭದಲ್ಲಿ ಸುಹಾಸಿನಿಯರ ಪೂಜೆ, ಕನ್ನಿಕಾ ಪೂಜೆ, ಮತ್ತು ದಂಪತಿ ಪೂಜೆಗಳನ್ನು ಸಹ ಮಾಡಲಾಯಿತು.
ಈಸಂದರ್ಭದಲ್ಲಿ ನಗರದ ಅನೇಕ ಭಕ್ತಾದಿಗಳು ಈ ಧಾರ್ಮಿಕ ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಹಾ ಮಂಗಳಾರತಿ ತೀರ್ಥ ಪ್ರಸಾದದ ನಂತರ ಅನ್ನಸಂತರ್ಪಣೆಯನ್ನು ಮಾಡಲಾಯಿತು.