ಕೆಎಸ್‌ಆರ್‌ಟಿಸಿಗೆ ಅತ್ಯುತ್ತಮ ಸಾರಿಗೆ ಪ್ರಶಸ್ತಿ
ಬೆಂಗಳೂರು ಮಾ.೧೬ ದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ (ಂSಖಖಿU)ನ ೨೦೨೨ -೨೩ನೇ ಸಾಲಿನ ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿ ಕೆಎಸ್‌ಆರ್‌ಟಿಸಿಗೆ ೨೦೨೨-೨೩ನೇ ಸಾಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ರಾಷ್ಟ್ರೀಯ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ಕಚೇರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ .ಅನುರಾಗ್ ಜೈನ್,ಭಾಆಸೇ, ಕಾರ್ಯದರ್ಶಿಗಳು, ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ, ಭಾರತ ಸರ್ಕಾರ, ಹಾಗೂ ಅಧ್ಯಕ್ಷರು ಎ.ಎಸ್. ಆರ್. ಟಿ ಯು, ಡಾ.ಮಾಧವ್ ಖುಸೇಕರ್ ಭಾಆಸೇ, ಉಪಾಧ್ಯಕ್ಷರು, ಎ.ಎಸ್.ಆರ್. ಟಿ .ಯು, ವ್ಯವಸ್ಥಾಪಕ ನಿರ್ದೇಶಕರು, ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆ ರವರು ಹಾಗೂ ಪರೇಶ್ ಗೋಯೆಲ್ ನಿರ್ದೇಶಕರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರವರು ನಿಗಮಕ್ಕೆ ಬ್ರ್ಯಾಂಡಿಂಗ್ ಹಾಗೂ ವರ್ಚಸ್ಸು ಅಭಿವೃದ್ಧಿ ಉಪಕ್ರಮ ಮತ್ತು ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಉಪಕ್ರಮಕ್ಕಾಗಿ ಎರಡು ಪ್ರಶಸ್ತಿ ಗಳನ್ನು ಪ್ರದಾನ ಮಾಡಿದರು. ಯಶ್ವಂತ್ ಕುಮಾರ್ ಪಿ, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು ರವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪಂಜಾಬ್ ನಾಯಕತ್ವ ಪ್ರಶಸ್ತಿ
ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಉಪ ಕ್ರಮಕ್ಕಾಗಿ ಪಂಜಾಬ್ ನಾಯಕತ್ವ ಪ್ರಶಸ್ತಿ ಲಭಿಸಿರುತ್ತದೆ. ಇಂದು ತಾಜ್ ಚಂಡೀಗಡ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹರ್ಜಿಂದರ್ ಸಿಂಗ್ ಚೀಮಾ, ಅಧ್ಯಕ್ಷರು ಚೀಮಾ ಬಾಯ್ಲರ್ಸ್ ಲಿಮಿಟೆಡ್ ರವರು ನಿಗಮಕ್ಕೆ ಪಂಜಾಬ್ ನಾಯಕತ್ವ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಶ್ರೀನಿವಾಸಮೂರ್ತಿ. ಸಿ. ಈ, ವಿಭಾಗೀಯ ನಿಯಂತ್ರಣಾಧಿಕಾರಿ, ದಾವಣಗೆರೆ ವಿಭಾಗ ಹಾಗೂ ಸ್ವರ್ಣಲತಾ ಎಂ, ಅಂಕಿ ಅಂಶ ಅಧಿಕಾರಿ, ಕೇಂದ್ರ ಕಛೇರಿ ರವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.