ನಗರ ಸಭೆಯ ೩.೬೧ ಕೋಟಿ ರೂ.ಗಳ ಉಳಿತಾಯ ಬಜೆಟ್
ಕನಕಪುರ, ಮಾ.೧೬- ೨೦೨೪-೨೫ನೇ ಸಾಲಿನ ಕನಕಪುರ ನಗರಸಭೆಯು ೩.೬೧ ಕೋಟಿ ರೂಗಳ ಉಳಿತಾಯ ಬಜೆಟ್‌ನ್ನು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್‌ರವರ ಅಧ್ಯಕ್ಷತೆಯಲ್ಲಿ ಮಂಡಿಸಲಾಯಿತು.
೨೦೨೪-೨೫ನೇ ಸಾಲಿನಲ್ಲಿ ಕನಕಪುರ ನಗರಸಭೆಗೆ ನಿರೀಕ್ಷಿತ ಆದಾಯ ಮೂಲಗಳು ಆಸ್ತಿ ತೆರಿಗೆಯಿಂದ ೪೦೦ಲಕ್ಷ, ಆಸ್ತಿ ತೆರಿಗೆ ಮೇಲೆ ಸಂಗ್ರಹಿಸಿದ ದಂಡ ೧೧೦ ಲಕ್ಷ, ಆಸ್ತಿ ತೆರಿಗೆ ಜೊತೆಯಲ್ಲಿ ಸಂಗ್ರಹಿಸಿರುವ ಘನತ್ಯಾಜ್ಯ ವಸ್ತು ಶುಲ್ಕ ೫೦ ಲಕ್ಷ, ಆಸ್ತಿ ತೆರಿಗೆ ಜೊತೆಯಲ್ಲಿ ಸಂಗ್ರಹಿಸುವ ಕರಗಳು ೧೩೦ ಲಕ್ಷ, ವಾಣಿಜ್ಯ ಮಳಿಗೆಗಳ ಬಾಡಿಗೆ ೬೦ಲಕ್ಷ, ನೀರು ಸರಬರಾಜು ಒಳಚರಂಡಿ ಮತ್ತು ಸಂಪರ್ಕ ಶುಲ್ಕ೧೭೫ಲಕ್ಷ, ಪುರಭವನದ ಬಾಡಿಗೆ ಖಾತಾ ನಕಲು ಜನನ ಮರಣ ನೆಲ ಬಾಡಿಗೆ ಮತ್ತು ಇತರೆ ಶುಲ್ಕ ೧೫ಲಕ್ಷ, ಖಾತಾ ವರ್ಗಾವಣೆ ಮತ್ತು ನಕಲು ಶುಲ್ಕ ೭ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ ೨೦ಲಕ್ಷ, ಅಭಿವೃದ್ದಿ ಮತ್ತು ಸುಧಾರಣಾ ಶುಲ್ಕ ೨೫ ಲಕ್ಷ, ಸಕ್ಕಿಂಗ್ ವಾಹನದ ಬಾಡಿಗೆ ೫ಲಕ್ಷ, ಬ್ಯಾಂಕ್ ಬಡ್ಡಿ ೩೦ಲಕ್ಷ, ರಸ್ತೆರಸ್ತೆ ಕತ್ತರಿಸಿದ ಶುಲ್ಕ ೪೦ಲಕ್ಷ, ಜಹಿರಾತು ತೆರಿಗೆ ೪ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕ ೧೫ಲಕ್ಷ, ಸ್ಟಾಂಪ್ ಶುಲ್ಕದ ಮೇಲಿನ ಸರ್ ಚಾರ್ಜ೭.೫೦ ಲಕ್ಷ, ಉಪಕರಣಗಳ ಸಂಗ್ರಹಾ ಶುಲ್ಕ ೧೫ಲಕ್ಷ, ೧೫ನೇ ಹಣಕಾಸು ಯೋಜನೆಯ ಅನುದಾನ ೨೫೦ ಲಕ್ಷ ಎಸ್.ಎಫ್ ಸಿ. ಮುಕ್ತನಿಧಿ ಅನುದಾನ ೧೦೫ ಲಕ್ಷ, ಎಸ್ ಎಫ್ ಸಿ ವೇತನ ಅನುದಾನ ೬೦೦ ಲಕ್ಷ, ಎಸ್ ಎಫ್ ಸಿ ಕುಡಿಯುವ ನೀರಿನ ಅನುದಾನ ೫೦ ಲಕ್ಷ, ಎಸ್ ಎಫ್ ಸಿ ವಿದ್ಯುತ್ ಅನುದಾನ ಭೀದಿ ದೀಪಗಳಿಗೆ ೧೭೫ ಲಕ್ಷ, ಎಸ್ ಎಫ್ ಸಿ ವಿದ್ಯುತ್ ಅನುದಾನ ಕುಡಿಯುವ ನೀರನ ಸ್ಥಾವರಗಳು ೨೫೦ಲಕ್ಷ, ಸ್ವಚ್ ಭಾರತ್ ಅನುದಾನ ೫೦ ಲಕ್ಷ, ಇತರ ವಿಶೇಷ ಅನುದಾನ ೪೫ಲಕ್ಷ, ಎಸ್ ಎಫ್.ಸಿ. ವಿಶೇಷ ಅನುದಾನ ೧೨೦೦ಲಕ್ಷ, ಡೆನಲ್ಮ ಮತ್ತು ಇತರೆ ಅನುದಾನ ೧೦ಲಕ್ಷ, ಅಮೃತ ನಿರ್ಮಲ ನಗರ ಅನುದಾನ ೧೦೦ ಲಕ್ಷ, ಇತರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳು ೩೫ಲಕ್ಷ, ಇತರೆ ಪರವಾನಿಗೆ ಮತ್ತು ಬಾಡಿಗೆಗಳ ಶುಲ್ಕ ೧೪.೪೦ ಲಕ್ಷ, ಮುಂಗಡ ಮತ್ತು ಭದ್ರತಾ ಠೇವಣಿ ೩೨ಲಕ್ಷ, ಗುತ್ತಿಗೆದಾರರು ಮತ್ತು ಸರಬರಾಜುದಾರರಿಂದ ವಸೂಲಾತಿ ೮೫ಲಕ್ಷ, ನೌಕರರಿಂದ ವಸೂಲಾತಿ ೫೮.೬೫ಲಕ್ಷ, ಇತರೆ ಸಾದಿಲ್ವಾರ್ ಸ್ವೀಕೃತಿಗಳು ೩೫ಲಕ್ಷ, ಒಟ್ಟು ೪೨೦೪.೦೫ ಲಕ್ಷಗಳಾಗಿದ್ದು ಇದರಲ್ಲಿ
೨೪-೨೫ನೇ ಸಾಲಿನಲ್ಲಿನಗರದ ಎಲ್ಲಾ ಜನತೆಗೆ ಸಮಗ್ರ ಮೂಲಭೂತ ಸೌಕರ್‍ಯಗಳನ್ನು ಒದಗಿಸಲು ಉದ್ದೇಶವನ್ನಿಟ್ಟುಕೊಂಡು ೪೯೭೬ ವೆಚ್ಚಮಾಡಲು ಕನಕಪುರ ನಗರಸಭೆ ತೀರ್ಮಾನಿಸಿದೆ ಉಳಿದಂತೆ ೩ಕೋಟಿ ೬೧ಲಕ್ಷಗಳ ಉಳಿತಾಯ ಬಜೆಟ್‌ನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಂಡಿಸಲಾಯಿತು. ಈಸಂದರ್ಭದಲ್ಲಿ ಜಿಲ್ಲಾ ಯೋಜನಾಧಿಕಾರಿ ರಮೇಶ್, ನಗರಸಭೆಯ ಆಯುಕ್ತರಾದ ಎಂ.ಎಸ್. ಮಹದೇವ್, ಲೆಕ್ಕ ಅಧೀಕ್ಷಕ ಚಂದ್ರು ಸಹಾಯಕ ಕಾರ್‍ಯಪಾಲಕ ಅಭಿಯಂತರ ಟಿ.ವಿ. ರಾಘವೇಂದ್ರ, ಸಹಾಯಕ ಇಂಜಿನಿಯರ್ ವಿಜಯ್ ಕುಮಾರ್, ಶ್ರೀದೇವಿ ಪರಿಸರ ಇಂಜಿನಿಯರ್ ಧನಂಜಯ್ಯ ಮತ್ತು ನಗರಸಭೆಯ ಎಲ್ಲಾ ಸಿಬ್ಬಂದಿಗಳು ಸದಸ್ಯರು ಉಪಸ್ಥಿತರಿದ್ದರು.