ಪಶ್ಚಿಮ ಬಂಗಾಲದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸಾಮರಸ್ಯ ವೇದಿಕೆ ಪ್ರತಿಭಟನೆ, ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.16:ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರು ಮತ್ತು ಕುಟುಂಬಗಳ ಮೇಲಿನ ದೌರ್ಜನ್ಯ ಖಂಡಿಸಿ ಜಿಲ್ಲಾಡಳಿತ ಮೂಲಕ ಸಾಮರಸ್ಯ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಮರಸ್ಯ ವೇದಿಕೆ ಜಿಲ್ಲಾ ಸದಸ್ಯÀ ಶರಣಪ್ಪ ಬ್ಯಾಳಿ ಮಾತನಾಡಿ, 47 ದಿನಗಳ ಹಿಂದೆ ಐ.ಟಿ. ಅಧಿಕಾರಿಗಳ ಮೇಲೆ ನಡೆದ ದಾಳಿಯ ನಂತರವೇ ಈ ಅಕಾಲಿಕ ಘಟನೆಗಳು ಬೆಳಕಿಗೆ ಬಂದಿವೆ. ಮಕ್ಕಳು ಮತ್ತು ಮಹಿಳೆಯರನ್ನು ಕ್ರೂರವಾಗಿ ನಡೆಸಿಕೊಳ್ಳುವುದು, ಲೈಂಗಿಕ ಕಿರುಕುಳ ಮತ್ತು ಥಳಿಸುವ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇದು ಪಶ್ಚಿಮಬಂಗಾಳ ರಾಜ್ಯದ ಆಡಳಿತ ಮತ್ತು ಪೆÇೀಲೀಸ್ ಇಲಾಖೆಯ ವೈಫಲ್ಯದ ಉದಾಹರಣೆ ಮಾತ್ರವಲ್ಲ, ಧಾರ್ಮಿಕ ಮತ್ತು ರಾಜಕೀಯ ವಿಷಯಗಳು ಒಳಗೊಂಡಿವೆ. ಈ ಘಟನೆಗಳು ಪಶ್ಚಿಮಬಂಗಾಳದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ, ಆತಂಕಕಾರಿ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ. ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂದರೆ ದೌರ್ಜನ್ಯ ನಡೆದು ಹಲವು ದಿನಗಳು ಕಳೆದರೂ ಪೊಲೀಸರು ಯಾವುದೇ ಪ್ರಥಮ ಮಾಹಿತಿ (ಈ.I.ಖ) ದಾಖಲೆ ಮಾಡಿಲಿಲ್ಲ. ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ವಿಷಯಗಳಲ್ಲಿ ಮಹಿಳೆಯರನ್ನು ಸಾಧನವಾಗಿ ಮಾಡುವುದು ನಾಚಿಕೆಗೇಡಿನ ಕೆಟ್ಟ ಕಲ್ಪನೆಯ ವಿಷಯವಾಗಿದೆ. ಈ ಘಟನೆಗಳನ್ನು ಸಾಮರಸ್ಯ ವೇದಿಕೆಯಿಂದ ಖಂಡಿಸುತ್ತೇವೆ ಎಂದರು.
ಪರಶುರಾಮ ರೋಣಿಹಾಳ ಮಾತನಾಡಿ, ಎಲ್ಲ ಸಂತ್ರಸ್ಥ ಮಹಿಳೆಯರ, ಮಕ್ಕಳ ಮತ್ತು ಕುಟುಂಬಗಳಿಗೆ ಕೂಡಲೇ ಭದ್ರತೆ ಮತ್ತು ಆರ್ಥಿಕ ನೆರವು ಒದಗಿಸಬೇಕು. ಮಹಿಳೆಯರ ಮೇಲಿನ ಈ ದೌರ್ಜನ್ಯಗಳನ್ನು ನ್ಯಾಯಾಲಯದ ಇನ್-ಕ್ಯಾಮರಾದಲ್ಲಿ ವಿಚಾರಣೆ ನಡೆಸಬೇಕು. ಮಹಿಳೆಯರ ನೈತಿಕ ಸ್ಥೆರ್ಯವನ್ನು ಕಾಪಾಡಿಕೊಳ್ಳಲು ಸರಕಾರದಿಂದ ತರಬೇತಿ ಪಡೆದ ಸಲಹೆಗಾರರಿಂದ ಅವರಿಗೆ ಸಮಾಲೋಚನಾ ಸೇವೆಗಳನ್ನು ಒದಗಿಸಬೇಕು. ಈ ನಿರ್ದಿಷ್ಟ ವಿಷಯಗಳ ಕುರಿತು ಮಾತನಾಡಲು, ಚರ್ಚೆ ಮಾಡಲು ಸ್ವತಂತ್ರ ಸಹಾಯವಾಣಿ ಸಂಖ್ಯೆಯನ್ನು ರಚಿಸಬೇಕು. ಇದರಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ನಿಷ್ಪಕ್ಷಪಾತ ತನಿಖೆಗಾಗಿ ಈ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ಹನಮಂತ ಬಿರಾದಾರ, ಸಾಯಿಕುಮಾರ ಬಿಸನಾಳ, ಮುದಕಪ್ಪ ಮದಭಾವಿ, ಅನಿಲ ಸಾಗರ, ಸಂತೋಷ ಬ್ಯಾಳಿ, ಪ್ರಕಾಶ ನಡುವಿನಕೇರಿ, ಹನಮಂತ ಅಥರ್ಗಾ, ಆಕಾಶ ದೊಡಮನಿ, ನಾಗರಾಜ ಸಿ.ಎಂ. ಸುನೀಲ ದೊಡಮನಿ, ಸಾಬು ಬ್ಯಾಳಿ, ಮುದಕಪ್ಪ ಮಾದರ, ರಾಜು ಮಾದರ, ಸುನೀಲ ದೇವರಮನಿ, ಆಕಾಶ ಕಲ್ಲೊಳ್ಳಿ, ಸಚಿನ ತೆಲಸಂಗ, ಸಾಗರ ಕಲಾಲ, ಅನಿಲ ಮಾದರ, ಅರವಿಂದ ಹುಡಿಮನಿ ಮತ್ತಿತರರು ಉಪಸ್ಥಿತರಿದ್ದರು.