ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸರಸ್ಪತಿ ಪೂಜೆ ಉದ್ಘಾಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.16:- ಶಿಕ್ಷಣದಿಂದ ಮಾತ್ರ ಉನ್ನತ ಸ್ಥಾನಗಳಿಸಲು ಸಾಧ್ಯ ಪ್ರತಿಯೊಬ್ಬರು ಶಿಕ್ಷಣ ಪಡೆಬೇಕು ಮತ್ತು ತಾವು ಕಲಿತ ಶಾಲೆ ಮತ್ತು ಗುರುಗಳನ್ನು ಗೌರವಿಸುವಂತೆ ಪುರಸಭಾ ಮಾಜಿ ಅಧ್ಯಕ್ಷ ನರಸಿಂಹ ರಾಜು ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾರದಪೂಜೆ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬದುಕು ಕಟ್ಟಿಕೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ ಸುಮಾರು 60 ವರ್ಷ ಇತಿಹಾಸವುಳ್ಳ ನಮ್ಮ ಆಂಜನೇಯ ಬಡಾವಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆನನ್ನು ಸೇರಿದಂತೆ ಹಲವಾರು ವಿದ್ಯಾರ್ಥಿಗಳಿಗೆ ಬದುಕು ನೀಡಿ ಪ್ರಸುತ್ತ ದಿನಗಳಲ್ಲಿ ಉನ್ನತಸ್ಥಾನಕ್ಕೇರಿದ್ದು ಸ್ಮರಿಸಿ ಭಾವುಕರಾಗಿ ಮಾತನಾಡಿದರು.
ಇಂದಿನ ಖಾಸಗಿ ಶಾಲೆಗಳ ವ್ಯಾಮೋಹ ಪೆÇೀಷಕರಲ್ಲಿ ಹೆಚ್ಚಾಗಿದ್ದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕ್ಷೀಣಿಸುತ್ತಿರುವುದು ವಿಷಾದಕರ ಪ್ರಸಂಗ ಏಕೆಂದರೆ ಸರ್ಕಾರಿ ಉದ್ಯೋಗ ಬೇಕು ಆದರೆ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಬೇಡ ಎನ್ನುವ ಪರಿಸ್ಥಿತಿಯನ್ನು ಪೆÇೀಷಕರು ಮನಸ್ಸಿನಿಂದ ಬೀಡಬೇಕು ಎಂದು ಸಲಹೆ ನೀಡಿದರು.
ನಮ್ಮ ಆಂಜನೇಯ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ಹೊರದೇಶಗಳಲ್ಲಿ ಸರ್ಕಾರಿ ಸೇವೆಯಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆ ಮಾಡಿರುವುದು ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಸರ್ಕಾರ ಮತ್ತು ಹಳೆ ವಿದ್ಯಾರ್ಥಿಗಳ ಬಳಗದ ವತಿಯಿಂದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಶಾಲೆಯ ದಾಖಲಾತಿ ಮತ್ತು ಅಗತ್ಯ ಸೌಲಭ್ಯಗಳನ್ನು ಕೊಡಿಸುವುದಾಗಿ ತಿಳಿಸಿದರು.
ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಯೋಗಾನಂದ ಮಾತನಾಡಿ ಈ ಬಡಾವಣೆಯಲ್ಲಿ ವಾಸಿಸುವ ಜನರು ಕೂಲಿ ಜೀವನ ಸಾಗಿಸುತ್ತಿದ್ದರು ಮಕ್ಕಳಿಗೆ ಶಿಕ್ಷಣ ಕೋಡಿಸಬೇಕು ನಮ್ಮಂತೆ ಕೂಲಿ ಮಾಡಬಾರದು ಎಂದು ಖಾಸಗಿ ಶಾಲೆಯ ವ್ಯಾಮೋಹಕ್ಕೆ ಮಾರುಹೋಗಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಆದರೆ ಇಂದು ಸರ್ಕಾರ ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ನೀಡುತ್ತಿದ್ದು ನುರಿತ ಅನುಭವಿ ಶಿಕ್ಷಕರುಗಳನ್ನು ಆಯ್ಕೆಮಾಡಿದರು ಸರ್ಕಾರಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿರುವುದು ಯಕ್ಷಪ್ರಶ್ನೆಯಾಗಿದೆ ಮತ್ತು ಸರ್ಕಾರ ಶಿಕ್ಷಣದಿಂದ ಯಾವ ಮಕ್ಕಳು ವಂಚಿತರಾಗಬಾರದು ಉಚಿತ ಶಿಕ್ಷಣ ನೀಡಲು ಹಲವಾರು ಯೋಜನೆಗಳನ್ನು ಮತ್ತು ಮಕ್ಕಳ ಆರೋಗ್ಯ ಕಡೆ ಗಮನಹರಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಈ ಬಡಾವಣೆಯ ಪೆÇೀಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಕೋರಿದ್ದರು.
ಈ ಶಾಲೆಯಲ್ಲಿ ಕಲಿತು ನಾನು ಒಬ್ಬ ವಿದ್ಯಾರ್ಥಿಯಾಗಿ ಈಗಲೂ ವಿದ್ಯಾರ್ಥಿಯಾಗಿದ್ದೇನೆಂದು ಹೇಳಿ ನಾನು ಕಲಿತ ಶಾಲೆಗೆ ಎರಡು ಗಣಕಯಂತ್ರ ನೀಡುವುದಾಗಿ ಹಳೆ ವಿದ್ಯಾರ್ಥಿ ಸಂಘದ ಸ್ಪಿನ್‍ಕೃಷ್ಣ ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷರಾದಸುನೀತ, ಮತ್ತು ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗಣಪತಿರವಿ, ಖಜಾಂಚಿ ಶಿಲ್ಪಶ್ರೀನಿವಾಸ್, ನಿರ್ದೇಶಕರಾದ ಪುಟ್ಟಸ್ವಾಮಿ, ಶಿವಕುಮಾರ್, ಇಂದ್ರಾಣಿ, ಮುಖ್ಯಶಿಕ್ಷಕಿ ಬೇಬಿ, ಸಹಶಿಕ್ಷಕರಾದ ರಂಗಪ್ಪ, ಸಹಶಿಕ್ಷಕಿಯರುಗಳಾದ ನಾಗರತ್ನ, ಕವಿತಾ, ಪುರಸಭಾ ನಿವೃತ್ತ ನೌಕರಾದ ಮಂಜಣ್ಣ, ಪೆÇೀಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.