ವಾಸು ನಾಡು ಕಂಡ ಧೀಮಂತ ರಾಜಕಾರಣಿ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.16:- ಇತ್ತೀಚೆಗೆ ನಿಧನ ಹೊಂದಿದ ನಾಡು ಕಂಡ ಧೀಮಂತ ರಾಜಕಾರಣಿ ಎನಿಸಿಕೊಂಡಿ ಮಾಜಿ ಶಾಸಕ ವಾಸು ಅವರಿಗೆ ಪ್ರಜಾನುಡಿ ದಿನಪತ್ರಿಕೆ ಬಳಗದಿಂದ ಶುಕ್ರವಾರ ಏರ್ಪಡಿಸಲಾಗಿದ್ಧ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಒಡನಾಡಿಗಳು, ಗಣ್ಯರು ಭಾವಪೂರ್ಣ ನುಡಿ ನಮನ ಸಲ್ಲಿಸಿದರು.
ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ವಾಸು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾಂಜಲಿ ಅರ್ಪಿಸಿ ಎರಡು ನಿಮಿಷಗಳ ಕಾಲ ಮೌನ ಆಚರಿಸಿದರು.
ಈ ಸಂದರ್ಭದಲ್ಲಿ ಬನುಮಯ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಪ್ರೋ.ಚಂದ್ರಶೇಖರಗೌಡ, ಪ್ರಜಾನುಡಿ ಪತ್ರಿಕೆ ವiÅಛಿ ಸಂಪಾದಕ ಡಿ.ಮಹದೇವಪ್ಪ, ಮುಡಾ ವiÅಛಿ ಅಧ್ಯಕ್ಷ ಸಿ.ಬಸವೇಗೌಡ, ಸಂಸ್ಕøತ ವಿವಿ ವಿಶ್ರಾಂತ ಕುಲಪತಿ ಪ್ರೋ.ಪದ್ಮಾಶೇಖರ್, ನಗರದ ಪ್ರಥಮ ಮೇಯರï, ಕೈಗಾರಿಕೋದ್ಯಮಿ ಪಿ.ವಿಶನಾಥ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾ ಕಸಾಪ ವiÅಛಿ ಅಧ್ಯಕ್ಷ ಎಂ.ಚಂದ್ರಶೇಖರ್, ಎಂಡಿಜೆಎ ವiÅಛಿ ಅಧ್ಯಕ್ಷ ರವಿಕುಮಾರ್, ಹಿರಿಯ ಪತ್ರಕರ್ತರಾದ ಅಂಶಿಪ್ರಸನ್ನ ಕುಮಾರ್, ಸಿ.ಕೆ.ಮಹೇಂದ್ರ, ಪ್ರಭುರಾಜನ್, ಸತ್ಯನಾರಾಯಣ,ಸಾಹಿತಿ ಮ.ಗು.ಸದಾನಂದಯ್ಯ, ಹೊಟೇಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಇತರೆ ಗಣ್ಯರು ಉಪಸ್ಥಿತರಿರು.,
ಮೊದಲಿಗೆ ಮಾತನಾಡಿದ ದಿವಂಗತ ವಾಸು ಅವರ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾದ ಪೆÇ?ರ.ಚಂದ್ರಶೇಖರಗೌಡ ಅವರು, ಬನುಮಯ್ಯ ಕಾಲೇಜಿನಲ್ಲಿ ತಮ್ಮ ವಿದ್ಯಾರ್ಥಿಯಾಗಿ ವಾಸು ಅವರ ತುಂಟತನ, ಕೀಟಲೆ ಸಭಾವವನ್ನು ನೆನೆದು ವಿದ್ಯಾರ್ಥಿಸಂಘದ ನಾಯಕನಾಗಿ ತಮ್ಮ ಸಹಪಾಠಿಗಳಾದ ರಾಂಗೋಪಾಲ್, ರವಿಕುಮಾರ್ ಅವರೊಂದಿಗೆ ಸೇರಿಕೊಂಡು ಪ್ರಚಂಡ ತ್ರೀ ಮಸ್ಕಿಟೀರ್ಸ್ (ಮೂರು ಸೊಳ್ಳೆಗಳು)ಎಂಬ ಖ್ಯಾತಿಯನ್ನು ಪಡೆದುಕೊಂಡಿರು ಎಂದರು.
ನಂತರದ ದಿನಗಳಲ್ಲಿ ಇವರೊಂದಿಗೆ ಸಿ.ಬಸವೇಗೌಡ ಮತ್ತು ಕೆ.ಎಂ.ಚಂದ್ರೇಗೌಡ ಅವರೂ ಸೇರಿಕೊಂಡು ಈ ಐವರೂ ವಿದ್ಯಾರ್ಥಿಗಳ ಸಮೂಹದಲ್ಲಿ ಬಹು ಪ್ರಭಾವಿ ವಿದ್ಯಾರ್ಥಿ ನಾಯಕರಾಗಿರು.
ನಂತರದ ದಿನಗಳಲ್ಲಿ ಯಾರ ಕೃಪಾಶಯವಿಲ್ಲದೇ, ತಾನು ಮಾಡಿದ ತಪ್ಪುಗಳನ್ನು ತಾನೇ ತಿದ್ದುಕೊಂಡು ತನ್ನ ಭವಿಷ್ಯದ ಬದುಕಿಗೆ ತಾನೇ ಶಿಲ್ಪಿಯಾಗಿ ಬೆಳೆದರು.
ವಾಸು ತುಂಬಾ ಬುದ್ದಿವಂತನಲ್ಲ. ಆದರೆ ಅವರ ತುಂಟತನದ ವ್ಯಕ್ತಿತ ವೇ ಅವರು ಮುಂದೆ ತಮ್ಮ ಜೀವನದಲ್ಲಿ ಹಂತ ಹಂತವಾಗಿ ಬೆಳೆದು ಪ್ರವೃದ್ಧಮಾನಕ್ಕೆ ಬರಲು ಸೋಪಾನವಾಯಿತು ಎನ್ನಲಡ್ಡಿಯಿಲ್ಲ. ಹಿಪ್ಪುನೇರಳೆಯನ್ನು ತಿಂದ ರೇಷ್ಮೆ ಹುಳು ಮುಂದೆ ಪೀತಾಂಬರವಾಗಿ ಪರಿವರ್ತನೆಗೊಳ್ಳುವ ರೀತಿಯಲ್ಲಿ ಪ್ರವೃದ್ಧಮಾನಕ್ಕೆ ಬಂದಂತಹ ಅಪರೂಪದ ವ್ಯಕ್ತಿಯಾಗಿನ್ನು ಗಮನಿಸಿದರೆ ಎಲ್ಲರೂ ಹೆಮ್ಮೆ ಪಡೆಯುವಂತಹ ವಿಷಯವೇ. ವಾಸು ಅವರು ಯಾವ ಅಮೃತ ಗಳಿಗೆಯಲ್ಲಿ ಪದವಿ ಪಡೆದರೋ, ಯಾವ ಗಳಿಗೆಯಲ್ಲಿ ರಾಜಕೀಯ ಪ್ರವೇಶ ಮಾಡಿದರೋ, ಇಂಡಸಿಯಲ್ ಕೋ-ಆಪರೇಟಿವ್ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದರೋ. ಅದು ಅವರ ಜೀವನದಲ್ಲಿ ಪರ್ವಕಾಲವಾಯಿತು.
ನಂತರ ನಗರಪಾಲಿಕೆ ಮೇಯರ್ ಆದ ಗಳಿಗೆಯಿಂದ ಅವರ ಜೀವನದಲ್ಲಿ ನೂತನ ಶಕೆ ಪ್ರಾರಂಭವಾಯಿತು. ಮುಂದೆ ಅವರು ಮೇಯರ್ ವಾಸು ಎಂದೇ ಚಿರಪರಿಚಿತರಾಗಿ ಜನ ಮಾನಸದಲ್ಲಿ ಉಳಿದುಕೊಂಡರು ಎಂದರು.
ನಂತರ ದಿನಗಳಲ್ಲಿ ಅವರಲ್ಲಿ ಇಂತಹ ಹೃದಯ ವೈಶಾಲ್ಯತೆ ಪ್ರಕಟವಾದನ್ನು ಕಂಡು ನಾವೇ ದಿಗ್ಭಮೆಗೊಳಗಾಗಿ ಸಂತೋಷ ಪಡುವಂತಾಯಿತು.
ಮುಂದೆ ಅವರ ಭಾಗ್ಯದ ಬಾಗಿಲು ತೆರೆದದ್ದು ಅವರು ಲಲಿತಮ್ಮ ನವರನ್ನು ಮದುವೆ ಆದ ಮೇಲೆ. ಹಾಗೆ ಲಲಿತಮ್ಮ ಅವರು ವಾಸು ಅವರಿಗೆ ಅತ್ಯಂತ ಅನುರೂಪಳಾದದಂತಹ ವ್ಯಕ್ತಿಯಾಗಿರು.
ಅವರ ಮೊದಲನೆ ಪುತ್ರ ಕವೀಶ್‍ಗೆ ತನ್ನ ತಾಯಿಯ ಮಮತೆ ಬಹಳವಾಗಿ ಸಿಕ್ಕಿದ ಭಾಗ್ಯ ದೊರೆತಿದೆ..ಆದರೆ ವಿಷಾದದ ಸಂಗತಿ ಎಂದರೆ ಅವರ ಕೊನೆಯ ಇಬ್ಬರು ಮಕ್ಕಳಿಗೆ ಅಂತಹ ತಾಯಿ ಮಮತೆಯ ಭಾಗ್ಯ ಅಷ್ಟಾಗಿ ಸಿಗಲಿಲ್ಲ. ಹಾಗಾಗಿ ವಾಸು ಅವರ ಹಿರಿಯ ಪುತ್ರ ಕವೀಶ್ ಅವರು ತನ್ನ ತಮ್ಮಂದಿರಿಗೆ ತಾಯಿ ಸ್ಥಾನದಲ್ಲಿ ನಿಂತು ಅವರಿಗೆ ಮಾರ್ಗದರ್ಶಿಯಾಗಿ ನೋಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಕವೀಶ್ ಅವರು ಒಬ್ಬ ಚಾಣಾಕ್ಷ ಮೇನೇಜ್‍ಮೆಂಟ್ ಮ್ಯಾನ್, ಆದರೆ ಅವರು ತಮ್ಮ ತಂದೆಯ ರೀತಿ ಪಬ್ಲಿಕ್ ಮ್ಯಾನï ಆಗಿಲ್ಲ. ಹೀಗಾಗಿ ಕವೀಶ್ ಅವರು ಸಾರ್ವಜನಿಕ ಜೀವನದಲ್ಲಿ ಮೇನೇಜ್‍ಮೆಂಟ್ ಮ್ಯಾನ್ ನಡವಳಿಕೆ, ಗುಣಗಳನ್ನು ತೋರಿಸುವುದು ಸರಿಹೊಂದುವುದಿಲ್ಲ ಎಂದರು.
ಅವರು ಯಾರೊಂದಿಗೂ ದೇಷ, ಅಸೂಯೆ ಭಾವನೆಯಿಂದ ಮಾತನಾಡಿಸಿದವರಲ್ಲ. ರಾಜಕೀಯ ಕ್ಷೇತ್ರದಲ್ಲಿ ಎಷ್ಟೇ ಕಷ್ಟ-ಸಂಕಷ್ಟಗಳು ಎದುರಾದರೂ, ಅವನ್ನೆಲ್ಲವನ್ನೂ ನುಂಗಿಕೊಂಡು ಮುಂದೆ ಸಾಗುವ ಛಾತಿಯ ಗುಣವನ್ನು ಹೊಂದಿರು ಎಂದು ನುಡಿನಮನ ಸಲ್ಲಿಸಿದರು.
ಅವರ ಕಾಲೇಜು ಸಹಪಾಠಿ ಹಾಗೂ ಗೆಳೆಯರಾದ ಮುಡಾದ ವiಛಿ ಅಧ್ಯಕ್ಷರಾದ ಬಸವೇಗೌಡ ಮಾತನಾಡಿ, ಅಂದು ಮೈಸೂರಿನಲ್ಲಿ ಎ¯?ಲÉ? ಗಲಾಟೆ, ಪ್ರತಿಭಟನೆಗಳಾದರೂ ವಾಸು, ಬಸವೇಗೌಡ ಕಾರಣ ಎನ್ನುವಷ್ಟು ಮಟ್ಟಕ್ಕೆ ತಮ್ಮನ್ನು ವಿದ್ಯಾರ್ಥಿ ಸಂಘಟನೆ, ಬೆಲೆ ಹೇರಿಕೆ ವಿರುದ್ಧ ಹೋರಾಟದಂತಹ ವಿಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರು. ಅವರ ಸ್ನೇಹಿತರು ಬೇರೆ ಬೇರೆ ಪಕ್ಷಗಳಲ್ಲಿ ಇರೂ ಸ್ನೇಹಕ್ಕೆ ಯಾವುದೇ ಚ್ಯುತಿಯಾಗಲಿಲ್ಲ. ವಾಸುರವರಿಗೆ ಬೈಕ್ ಸವಾರಿಯ ಹುಚ್ಚು ಹಾಗೂ ದೊಡ್ಡ ಕನಸುಗಳನ್ನು ಕಂಡು ಅದನ್ನ ನನಸು ಮಾಡಿದ ವ್ಯಕ್ತಿತ್ವ ಎಂದು ನೆನದರು.
ಅವರ ಮತ್ತೊರ್ವ ಒಡನಾಡಿ, ಮೈಸೂರಿನ ಮೊದಲ ಮೇಯರ್ ಪಿ. ವಿಶ್ವನಾಥ್ ಮಾತನಾಡಿ, ವಾಸುರವರ ಮೊದಲ ಪರಿಚಯ 1983ರ ಮೇಯರ್ ಎಲೆಕ್ಷನ್ ಸಂದರ್ಭದ¯?ಲÁಯಿತು. ಅಂದಿನ ಮೊದಲ ನಗರ ಪಾಲಿಕೆ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತ ಪಡೆದ ಕಾರಣ ಮೇಯರ್ ಹುz?ದÉ ನನಗೆ ಒಲಿದು ಬಂತು, ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಮೇಯರ್ ಆಗಿ ನಗರಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದರು. ಎಂದಿಗೂ ಕೋಪ ತಾಪ ಮಾಡಿಕೊಂಡವರಲ್ಲ, ಬಹಳ ಅಪುರೂಪದ ಸಜ್ಜನ ವ್ಯಕ್ತಿಯಾಗಿ, ಮೈಸೂರು ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷರಾಗಿ, ಕೈಗಾರಿಕಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಸೇವೆಸಲ್ಲಿಸಿz?ದÁರೆ ಎಂದು ತಿಳಿಸಿದರು.
ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪದ್ಮ ಶೇಖರ್ ಮಾತನಾಡಿ, ವಾಸು ಮತ್ತು ಅವರ ಮಡದಿ ಲಲಿತಾ ಅವಿನಾವ ಸಂಬಂಧ ಹೊಂದಿರು. ಅವರಿಬ್ಬರು ಅಪರಿಮಿತ ಪ್ರೀತಿ ಹಾಗೂ ದ್ಯೋತಕದ ಸಂಕೇತವಾಗಿರು ಎಂದು ನೆನದರು.
ಜಿ¯?ಲÁ ಕನ್ನಡ ಸಾಹಿತ್ಯ ಪರಿಷತ್ ನಾ ಅಧ್ಯಕ್ಷ, ಮಡ್ಡಿಗೆರೆ ಗೋಪಾಲ್ ಮಾತನಾಡಿ, ಕನ್ನಡದ ಪ್ರೇಮಿಯಾಗಿ ವಾಸುರವರು, 1990ರ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನೆರವೇರಲು ಅಪಾರ ಶ್ರಮವಹಿಸಿರು, ಎ¯?ಲÁ ಪಕ್ಷದಲ್ಲಿಯೂ ಸ್ನೇಹಿತ ಬಳಗ ಹೊಂದಿ ಅವರು ಅಜಾತ ಶತ್ರುವೆನಿಸಿರು. ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಶಿಕ್ಷಣ, ಸಾಹಿತ್ಯ, ಸಹಕಾರ ಕ್ಷೇತ್ರಗಳಲ್ಲಿ ಮುಂದಿನ ಐದು ಶತಮಾನ ನೆನಪಿನಲ್ಲಿ ಇಡುವಷ್ಟು ಕೆಲಸ ಮಾಡಿz?ದÁರೆ, ಯಾವುದೇ ಕಪ್ಪು ಚುಕ್ಕಿ ಇಲ್ಲದೇ ಬದುಕಿದ ವ್ಯಕ್ತಿ ಎಂದು ತಿಳಿಸಿದರು.
ಪತ್ರಕರ್ತ ಸಂಘದ ಅಧ್ಯಕ್ಷರಾದ ಹಿರಿಯ ಪತ್ರಕರ್ತ ರವಿಕುಮಾರ್ ಮಾತನಾಡಿ, ವಾಸುರವರು, ನಾಡು ಕಂಡ ಧೀಮಂತ ವ್ಯಕ್ತಿ, ನಾಡು ನುಡಿ, ಕ್ರೀಡೆ, ಕಲೆಗೆ ಬೆಲೆ ಕೊಟ್ಟ ವ್ಯಕ್ತಿಯಾಗಿರು. ಮೈಸೂರು ಜಿ¯?ಲÁ ಅಥಿಲೇಟಿಕ್ಸ್ ಸಂಸ್ಥೆಯ ಅಧ್ಯಕ್ಷರು ಕೂಡ ಆಗಿರು, ಪತ್ರಕರ್ತರಿಗೆ ಹಾಗೂ ಪತ್ರಿಕೋದ್ಯಮಕ್ಕೆ ಅತ್ಯಂತ ಗೌರವ ಕೊಡುತ್ತಿರು ಎಂದು ತಿಳಿಸಿದರು.
ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ಮೈಸೂರಿನ ಚಂದ್ರಮೌಳೇಶ್ವರ ದೇವಸ್ಥಾನದ ವೃತ್ತಕ್ಕೆ ವಾಸುರವರ ನಾಮಕರಣ ಮಾಡಬೇಕು ಎಂದು ಕೋರಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಮಹದೇವಪ್ಪ, ಅಂಶಿ ಪ್ರಸನ್ನ ಕುಮಾರ್, ಸಿ ಕೆ ಮಹೇಂದ್ರ, ಸತ್ಯನಾರಾಯಣ, ಸುಬ್ರಮಣ್ಯ, ದೀಪಕ್, ಗ್ರಾಮಾಂತರ ಜಿ¯?ಲÁ ಕಾಂಗ್ರೆಸ್ ಅಧ್ಯಕ್ಷ ಬಿ. ಜೆ ವಿಜಯ ಕುಮಾರ್, ಹಾಗೂ ನೂರಾರು ಅವರ ಹಿತೈಷಿಗಳು, ಮಿತ್ರರು, ಅಭಿಮಾನಿಗಳು ಸೇರಿರು.
ಸಭೆಯ ಕುರಿತು ಪ್ರಜಾನುಡಿಯ ಸಂಪಾದಕರಾದ ಬಿಸಲಲ್ಲಿ ವೀರಭದ್ರಪ್ಪ, ವಾಸುರವರು ಅಪರೂಪದ ಓದುವ ರಾಜಕಾರಣಿಗಳಲ್ಲಿ ಒಬ್ಬರಾಗಿರು, ಎಂದಿಗೂ ಪತ್ರಿಕೋದ್ಯಮ ಮತ್ತು ರಾಜಕೀಯವನ್ನು ಬೆರಸಲಿಲ್ಲ, ಸಜ್ಜನ ವ್ಯಕ್ತಿಯಾಗಿರು ಎಂದು ಮಾತನಾಡಿದರು.
ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರು. ವಿಶ್ವವಿದ್ಯಾಲದ ಸೆನೆಟ್ ಎಲೆಕ್ಷನ್ನಿಂದ ಶುರುವಾದ ಅವರ ರಾಜಕೀಯ ಜೀವನದಲ್ಲಿ ಬಹಳಷ್ಟು ಸೋಲು ಗೆಲವುಗಳನ್ನು ಕಂಡು ರಾಜ್ಯದ ಪ್ರಭುದ್ಧ ರಾಜಕಾರಣಿಗಳಲ್ಲಿ ಒಬ್ಬರಾಗಿರು ಎಂದು ಅವರ ಜೀವನವನ್ನು ಮೆಲಕು ಹಾಕಿದರು.