ಉತ್ತಮ ಸಾಧನೆಗೆ ಸ್ನೇಹಿತರ ಆಯ್ಕೆ ಅತಿ ಮುಖ್ಯ:ಪಿ.ವೇಣುಗೋಪಾಲ
ಸೈದಾಪುರ:ಮಾ.16:ಪ್ರೌಢ ಶಾಲಾ ಹಂತದ ನಂತರದಲ್ಲಿ ಉತ್ತಮ ಸಾಧನೆ ನಾವು ಪಡೆದುಕೊಳ್ಳಬೇಕಾಗಿದರೆ ಸ್ನೇಹಿತರ ಆಯ್ಕೆ ಅತಿ ಮುಖ್ಯವಾಗಿದೆ ಎಂದು ಯಾದಗಿರಿ ಹಾಗೂ ರಾಯಚೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪಿ.ವೇಣುಗೋಪಾಲ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 10ನೇ ತರಗತಿಯವರೆಗೆ ನಮಗೆ ಸಹಾಯ ಮಾಡುತ್ತಾರೆ. ಮುಂದಿನ ಹಂತದ ಬೆಣವಣಿಗೆಗೆ ನಮ್ಮನ್ನು ನಾವೇ ಪ್ರಶ್ನೇಸಿಕೊಳ್ಳಬೇಕು. ಇದರಿಂದ ಉತ್ತಮ ಬದಕನ್ನು ಕಂಡುಕೊಳ್ಳಲು ಸಾಧ್ಯವಿದೆ. ತಂದೆ ತಾಯಿ, ಗುರುಗಳನ್ನು ಹಾಗೂ ಪ್ರಜೆಗಳನ್ನು ಗೌರವದಿಂದ ಕಾಣುವರು ಮನುಷ್ಯನಾಗಿ ಪ್ರಕೃತಿಯನ್ನು ಎದುರಿಸುವ ಸಾಮಾಥ್ರ್ಯ ಪಡೆದುಕೊಳ್ಳುತ್ತಾನೆ. ನಮಗೆ ಸಮಾನರು, ದೀರರೊಡನೆ ಸ್ಪರ್ಧೇ ಮಾಡಿದಾಗ ಮಾತ್ರ ನಾವು ಜಾಗೃತರಾಗುತ್ತೇವೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಮಾತನಾಡಿ, ಜೀವನದಲ್ಲಿ ಯಾವುದು ಅಸಾಧ್ಯವಾದುದಲ್ಲ. ಕೀಳಿರಿಮೆ ದೂರವಾಗಿಸಿಕೊಂಡು ಉನ್ನತ ಗುರಿಯೊಂದಿಗೆ ಕಠಿಣ ಪರಿಶ್ರಮದಿಂದ ಪ್ರಯತ್ನ ಮಾಡಿದರೆ ಉತ್ತಮ ಸಾಧನೆ ನಮ್ಮದಾಗುತ್ತದೆ. ಪ್ರತಿಯೊಬ್ಬರಿಗೂ ಸಂಸ್ಕಾರ ಅತಿ ಮುಖ್ಯವಾಗಿದೆ. ಇದಕ್ಕಾಗಿ ಪುಸ್ತಕ ಸಂಸ್ಕøತಿ ನಮ್ಮದಾಗಬೇಕು ಎಂದು ಹೇಳಿದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಸಿದ್ರಾಮಪ್ಪಗೌಡ ಗೊಂದಡೆಗಿ, ಸುರೇಶ ಆನಂಪಲ್ಲಿ, ಪ್ರಾಂಶುಪಾಲರಾದ ಹಂಪಣ್ಣ ಸಜ್ಜನಶೆಟ್ಟಿ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ, ಸಂಗಾರೆಡ್ಡಿ, ರಾಚಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಪದ್ಮಾ, ರೇಣುಕಾ ಪ್ರಾರ್ಥಾನಾಗೀತೆ ಹಾಡಿದರು. ಆಯುನ ಅಲಿ ಸ್ವಾಗತಿಸಿದರು. ತಾಯಮ್ಮ ನಿರೂಪಿಸಿದರು. ಕಾವೇರಿ ವಂದಿಸಿದರು.