ಬಿಟಿವಿಪಿ ಶಿಕ್ಷಣ ಸಂಸ್ಥೆ ಮಾದರಿ ಸಂಸ್ಥೆಯಾಗಿದೆ : ಪಟ್ಟದ್ದೇವರು
ಸಂಜೆವಾಣಿ ವಾರ್ತೆ
ಹುಮನಾಬಾದ್ : ಮಾ.16:ಗ್ರಾಮೀಣ ಭಾಗದಲ್ಲಿ ಬಿಟಿವಿಪಿ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡಿ ಮಾದರಿ ಶಿಕ್ಷಣ ಸಂಸ್ಥೆಯಾಗಿದೆ ಎಂದು ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಹೇಳಿದರು.
ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಬಿಟಿವಿಪಿ ಶಾಲೆಯಲ್ಲಿ ಶುಕ್ರವಾರ ನಡೆದ ಅಭಿನಂದನಾ ಸಮಾರಂಭ, ಮುಖ್ಯಶಿಕ್ಷಕಿ ವಿದ್ಯಾವತಿ ತೀರ್ಥಾ ಸೇವಾ ನಿವೃತ್ತಿ ಹಾಗೂ ಕಾವ್ಯ ತೀರ್ಥ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಹಳ್ಳಿಖೇಡ (ಬಿ) ಪಟ್ಟಣದ ಬಿಟಿವಿಪಿ ಶಾಲೆ ಬಸವ ತತ್ವಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಆರಂಭದಿಂದ ಇಂದಿನ ವರೆಗೆ ಗುಣಮಟ್ಟ ಕಾಯ್ದುಕೊಂಡು ಪದವಿ ವರೆಗಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡಾ ನಿರಂತರ ಅಭ್ಯಾಸ ಮಾಡಬೇಕು ಎಂದರು.
ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರಾಜಕೀಯ ಬೆಳಸದೇ ಸಂಸ್ಥೆ ಬೆಳಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಹೀಗಾಗಿ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಒಗ್ಗಟ್ಟಿನಿಂದ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕು. ಸಂಸ್ಥೆಯ ಕೀರ್ತಿ ಹೆಚ್ಚಿಸಲು ತೀಥಾ ದಂಪತಿಗಳು ತೊರಿದ ಕಾಳಜಿ ಮತ್ತು ಶ್ರಮ ಎಲ್ಲರೂ ಮೆಚ್ಚಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಠದ ಪಂಡಿತರಾಧ್ಯ ಶಿವಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ, ಸಂಸ್ಥೆ ಕಾರ್ಯಾಧ್ಯಕ್ಷ ಕೇಶವರಾವ ಮಹಾರಾಜ, ಸಂಸ್ಥೆ ಉಪಾಧ್ಯಕ್ ಕಂಟೆಪ್ಪ ದಾನ, ಸಂಸ್ಥೆ ಕಾರ್ಯದರ್ಶಿ ಅರವಿಂದ ಭಾಲ್ಕಿಕರ್, ಬಸವರಾಜ ಪಾಟೀಲ್ ಕಮಲಾಪೂರ್, ಸೋಮಯ್ಯಾ ಹಿರೇಮಠ, ಗುಂಡಯ್ಯಾ ತೀರ್ಥ, ಮಾಂತಯ್ಯಾ ತೀರ್ಥಾ, ಶಿವಕುಮಾರ ತೀರ್ಥಾ, ಮಸ್ತಾನ ಪಟೇಲ್ ಇದ್ದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.