ಪಾನಿಪೂರಿ ಸೇವನೆ; ೧೯ ಮಕ್ಕಳು‌ ಅಸ್ವಸ್ಥ

ಸಂಜೆವಾಣಿ ವಾರ್ತೆ
ಮಲೇಬೆನ್ನುರು.ಮಾ.೧೫;  ಪಾನಿಪೂರಿ‌ ಸೇವನೆ‌ ಮಾಡಿದ್ದ ೧೯ ಮಕ್ಕಳು‌ ಅಸ್ವಸ್ಥಗೊಂಡ ಘಟನೆ ಮಲೇಬೆನ್ನೂರಿನಲ್ಲಿ‌ ನಡೆದಿದೆ.ಮಲೇಬೆನ್ನೂರಿನ ಜಾಮಿಯಾ ಮಸೀದಿ ಬಳಿ ಉಪವಾಸ ಅಂತ್ಯ ಮಾಡಿದ ನಂತರ ಮಸೀದಿ ಮುಂಭಾಗ ಮಾರಾಟ ಮಾಡುವ ಪಾನಿ ಪೂರಿ ಸೇವಿಸಿದ 19 ಮಕ್ಕಳು ಅಸ್ವಸ್ಥಗೊಂಡಿದ್ದಾರೆ.ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆ ಗೆ ದಾಖಲಾಗಿದೆ ಅದರಲ್ಲಿ ನಾಲ್ಕು ಮಕ್ಕಳ ಅರೋಗ್ಯ ತೀವ್ರ ಚಿಂತಾಜನಕವಾಗಿದ್ದು ಅವರನ್ನು ದಾವಣಗೆರೆ ಬಾಪೂಜಿ ಆಸ್ಪತ್ರೆ ಯ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಮಲೇಬೆನ್ನೂರು ಆರೋಗ್ಯ ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ಸಂಜೆವಾಣಿಗೆ ತಿಳಿಸಿದ್ದಾರೆ ಇಂದು ಘಟನಾ ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಗುರು ಬಸವರಾಜ್.ಪುರಸಭೆ ಮುಖ್ಯ ಅಧಿಕಾರಿ ಸುರೇಶ್ .ತಾಲ್ಲೂಕು ಅರೋಗ್ಯ ಅಧಿಕಾರಿ ಅಬ್ದುಲ್ ಖಾದರ್ ರವರು ಭೇಟಿ ನೀಡಿದ್ದರು.